ಕರ್ನಾಟಕ ವಿಧಾಸನಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವೇಗೌಡ ಅವರು ರಾಜಕೀಯದ ವಿಷಯದಲ್ಲಿ ಕುಮಾರಸ್ವಾಮಿ ನನ್ನ ಮಾತನ್ನು ಮೀರಿ ಯಾವ ನಿರ್ಧಾರ ಕೈಗೊಳ್ಳಬಾರದು. ಒಂದು ವೇಳೆ ಮಾತು ಮೀರಿ ಕುಮಾರಸ್ವಾಮಿ ಬಿಜೆಪಿ ಸಖ್ಯ ಬೆಳೆಸಿದರೆ ಮನೆಯಿಂದ ಹೊರಹಾಕುತ್ತೇನೆ ಎಂದು ಹೇಳಿದ್ದಾರೆ.