ಡಿ.ಕೆ ಶಿವಕುಮಾರ್ ಜೊತೆಗಿನ ಮುನಿಸಿನಿಂದ ಶಾಸಕ ಸತೀಶ್ ಜಾರಕಿ ಹೊಳಿ ದೂರ ಉಳಿದಿದ್ದರು, ಇನ್ನೂ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಿಎಂ ವೀರಪ್ಪ ಮೊಯ್ಲಿ, ಬೇರೆ ಕಾರ್ಯಕ್ರಮಗಳಿಂದಾಗಿ ಹಾಜರಾಗಿರಲಿಲ್ಲ, ರೆಡ್ಡಿ ಮತ್ತು ರೋಷನ್ ಬೇಗ್ ಗೈರಾಗಿದ್ದದ್ದು, ಸಚಿವ ಸ್ಥಾನ ನೀಡುವಂತೆ ಒತ್ತಡ ಹಾಕುವ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ತಾವು ನಿನ್ನೆ ಉಪ ಮೇಯರ್ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾಗಿ ರೆಡ್ಡಿ ಸಮರ್ಥನೆ ನೀಡಿದ್ದಾರೆ.