ರಾಜಕೀಯ

ಪಕೋಡ ಪಾಲಿಟಿಕ್ಸ್ ಮೂಲಕ ಕಾಂಗ್ರೆಸ್ ನಿಂದ ಬಡವರಿಗೆ ಅವಮಾನ; ಪ್ರಕಾಶ್ ಜಾವ್ಡೇಕರ್

ಪಕೋಡ ಪಾಲಿಟಿಕ್ಸ್ ಮೂಲಕ ಕಾಂಗ್ರೆಸ್ ನಿಂದ ಬಡವರಿಗೆ ಅವಮಾನ; ಪ್ರಕಾಶ್ ಜಾವ್ಡೇಕರ್
ಕಾಂಗ್ರೆಸ್ ಮುಖಂಡರ ಜೊತೆ ಬಜ್ಜಿ ತಿನ್ನುತ್ತಿರುವ ರಾಹುಲ್ ಗಾಂಧಿ
Published On :
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ  ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಹಾಗೂ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಪಕೋಡ ಮಾರಾಟ ಮಾಡುವುದು ಇಂದಿನ ಪೀಳಿಗೆಯ ಉದ್ಯೋಗದ ಒಂದು ಭಾಗ.ಆದರೆ ಪಕೋಡ ಮಾರಾಟ ಮಾಡುವವರಿಗೆ  ಹಾಗೂ ಆ ಉದ್ಯೋಗಕ್ಕೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ  ಕಾಂಗ್ರೆಸ್  ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಜನಾರ್ಶೀವಾದ ಯಾತ್ರೆ ಅಂತ್ಯಗೊಂಡಿದೆ.
ಜನಾರ್ಶೀವಾದ ಯಾತ್ರೆಯ 3ನೇ ದಿನವಾದ ಸೋಮವಾರ ರಾಯಚೂರು, ಶಹಾಪೂರದಲ್ಲಿ ರೋಡ್ ಶೋ ನಡೆಸಿದರು. ರೋಡ್ ಶೋ ಭಾಷಣದ ಬಳಿಕ ರಾಯಚೂರಿನ ಕಲ್ಮಲಾದ ರಸ್ತೆ ಸಮೀಪ ಇದ್ದ ಡಾಬಾವೊಂದಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ   ಮಿರ್ಚಿ ಬಜ್ಜಿ, ಮಂಡಕ್ಕಿಯನ್ನು ಸವಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ, ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಸಾಥ್ ನೀಡಿದ್ದರು.
ಜನಾಶೀರ್ವಾದ ಯಾತ್ರೆ ವೇಳೆ ರಾಹುಲ್ ಗಾಂಧಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಹಲವು ಶಾಲಾ ಮಕ್ಕಳು ರಾಹುಲ್ ಗೆ ಶುಭಾಶಯ ಕೋರಿದರು.ಶಹಾಪೂರದಲ್ಲಿ ರಾಹುಲ್ ಗಾಂಧಿ ಮಕ್ಕಳಿಗೆ ಶೇಕ್ ಹ್ಯಾಂಡ್ ಮಾಡುತ್ತಿರುವ ನಡುವೆ ಇದ್ದಕ್ಕಿದ್ದಂತೆ ಬಂದ ವ್ಯಕ್ತಿಯೊಬ್ಬ ರಾಹುಲ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಘಟನೆಯೂ ನಡೆಯಿತು.ಈ ವೇಳೆ ಹಲವು ಮಂದಿ ರಾಹುಲ್ ಗಾಂದಿ ಜೊತೆ ಸೆಲ್ಫಿ ತೆಗೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.