ಜೆಡಿಎಸ್ ಜತೆಗೆ ಬಿಎಸ್‌ಪಿ, ಎನ್‌ಸಿಪಿ ಮೈತ್ರಿ ಏರ್ಪಟ್ಟಿದ್ದು, ಸಿಪಿಐ ಹಾಗೂ ಸಿಪಿಐ (ಎಂ) ಪಕ್ಷಗಳೊಂದಿಗೂ ಚುನಾವಣಾ ಮೈತ್ರಿ ಪ್ರಯತ್ನ ಮುಂದುವರಿದಿದೆ. ಸ್ವತಃ ದೇವೇಗೌಡರೇ ತೃತೀಯ ಶಕ್ತಿಗಳ ಬೆಂಬಲ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಬಿಎಸ್‌ಪಿಯ ಮಾಯಾವತಿ ಅವರು ಶನಿವಾರ ಬೆಂಗಳೂರು ಹೊರವಲಯದಲ್ಲಿ ನಡೆಯಲಿರುವ ಜೆಡಿಎಸ್‌ನ 'ವಿಕಾಸಪರ್ವ' ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಚುನಾವಣಾ ಪ್ರಚಾರಕ್ಕೂ ಆಗಮಿಸಲು ಒಪ್ಪಿದ್ದಾರೆ.