ಇಂದು ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಲಕರೆಡ್ಡಿ ಅವರು, ಮುಂದಿನ ಚುನಾವಣೆಯಲ್ಲಿ ನಾನಾಗಲಿ ಅಥವಾ ನನ್ನ ಕುಟುಂಬದ ಯಾರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇದು ನನ್ನ ಗಟ್ಟಿಯಾದ ನಿರ್ಧಾರ. ಹೈಕಮಾಂಡ್ ಹೇಳಿದರೂ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ವಯಸ್ಸಾದ ಮೇಲೆ ನಿವೃತ್ತಿ ಹೊಂದಿ ಯುವಕರಿಗೆ ಆದ್ಯತೆ ಕೊಟ್ಟರೆ ಅವರಿಗೂ ಅನುಕೂಲವಾಗಲಿದೆ. ರಾಜಕಾರಣಿಗಳು ತಮ್ಮ ವಯಸ್ಸು 80 ದಾಟಿದ ಮೇಲೆ ನಿವೃತ್ತಿ ಪಡೆದರೆ ಯುವಕರಿಗೆ ಅವಕಾಶ ಸಿಗುತ್ತದೆ ಎಂದರು.