ಭಾನುವಾರ ಸಭೆ ಸೇರಿದ್ದ ಬಿಜೆಪಿ ಕೋರ್ ಕಮಿಟಿ ಮುಂದಿನ ಹಂತದ ಚುನಾವಣಾ ಪ್ರಚಾರದ ಯೋಜನೆ ಸಿದ್ಧಪಡಿಸಿದೆ, ರಾಯಚೂರಿನಲ್ಲಿ ಮಾರ್ಚ್ 13 ರಂದು ನರೇಂದ್ರ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ, ಬೆಳಗಾವಿ ಬದಲು ಮೋದಿ ಚಿಕ್ಕೋಡಿಗೆ ಭೇಟಿ ನೀಡಲಿದ್ದಾರೆ, ಚಿಕ್ಕೋಡಿ ಸಭೆಯ ದಿನಾಂಕ ಇನ್ನೆರಡು ದಿನಗಳಲ್ಲಿ ನಿಗದಿ ಪಡಿಸಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.