ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ತೀರ್ಪು ಕಾಯ್ದಿರಿಸಿದ ಕೋರ್ಟ್: ಕಾಂಗ್ರೆಸ್ ಹಾದಿ ಸುಗಮ?

ಏಳು ಜೆಡಿಎಸ್ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆಯ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಏಪ್ರಿಲ್ 2 ಕ್ಕೆ ಕಾಯ್ದಿರಿಸಿದೆ, ಹೀಗಾಗಿ ಇಂದು ನಡೆಯುವ ...
ಸಂಸತ್
ಸಂಸತ್
Updated on: 
ಬೆಂಗಳೂರು: ಏಳು ಜೆಡಿಎಸ್ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆಯ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಏಪ್ರಿಲ್ 2 ಕ್ಕೆ ಕಾಯ್ದಿರಿಸಿದೆ, ಹೀಗಾಗಿ ಇಂದು ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಹಾದಿ ಸುಲಭವಾಗಿದೆ.
ಜೆಡಿಎಸ್ ಬಂಡಾಯ ಶಾಸಕರಾದ ಎಚ್.ಸಿ ಬಾಲಕೃಷ್ಣ, ಚಲುವರಾಯ ಸ್ವಾಮಿ, ಜಮೀರ್ ಅಹಮದ್ ಖಾನ್, ಅಖಂಡ ಶ್ರೀನಿವಾಸ ಮೂರ್ತಿ, ಇಕ್ಬಾಲ್ ಅನ್ಸಾರಿ, ಭೀಮಾ ನಾಯಕ್ ಮತ್ತು ರಮೇಶ್ ಬಂಡಿಸಿದ್ದೇಗೌಡ ಅವರಿಗೆ  ರಾಜ್ಯ ಸಭೆ ಚುನಾವಣೆಯಲ್ಲಿ ಮತದಾನ  ಮಾಡು ಹಕ್ಕು ಹೊಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಾದಿ ಬಹುತೇಕ ಸುಗಮವಾಗಿದೆ. 
ಶ್ರವಣಬೆಳಗೊಳ ಶಾಸಕ ಸಿ.ಎನ್ ಬಾಲಕೃಷ್ಣ, ಮುದಿಗೆರೆ ಶಾಸಕ ಬಿಬಿ ನಿಂಗಯ್ಯ ರಾಜ್ಯಸಭೆ ಚುನಾವಣೆಯಲ್ಲಿ ಭಿನ್ನರಿಗೆ ಮತದಾನ ನಿರ್ಬಂಧಿಸುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿತ್ತು, 
ಸ್ಪೀಕರ್‌ ತೀರ್ಮಾನ ಪ್ರಕಟವಾದರೆ, ಕೋರ್ಟ್‌ನಲ್ಲಿ ಈ ಏಳು ಮಂದಿ ಶಾಸಕರ ಅನರ್ಹತೆ ತೀರ್ಪು ಬರಬಹುದು ಮತ್ತು ಮಾ.23 ರಂದು ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಅವಕಾಶದಿಂದ ವಂಚಿತರಾಗಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ತೀರ್ಮಾನ ನೀಡದಿರಲು ಸ್ಪೀಕರ್‌ ಬಯಸಿದ್ದಾರೆ. ಶಾಸನಸಭೆಯ ಮುಖ್ಯಸ್ಥರಾದ ಸಭಾಧ್ಯಕ್ಷರ ಪರಮಾಧಿಕಾರದಲ್ಲಿ ಕೋರ್ಟ್‌ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. 
ಕಾಂಗ್ರೆಸ್‌ನ ಮೊದಲ ಎರಡು ಅಭ್ಯರ್ಥಿಗಳು ಯಾವುದೇ ಸಮಸ್ಯೆಯಿಲ್ಲದೇ ಜಯಗಳಿಸಲಿದ್ದಾರೆ. ಎಲ್ ಹನುಮಂತಯ್ಯ ಮತ್ತು ಸೈಯ್ಯದ್ ನಾಸೀರ್ ಹುಸೇನ್ ಆಯ್ಕೆ ನಿಶ್ಚಿತ, ತನ್ನ ಮೂರನೇ ಅಭ್ಯರ್ಥಿ ಚಂದ್ರಶೇಖರ್ ಅವರನ್ನು ಗೆಲ್ಲಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್ ಇದೆ.ಜೆಡಿಎಸ್ ಕೂಡ ತನ್ನ ಅಭ್ಯರ್ಥಿ ಬಿ.ಎಂ ಫಾರೂಖ್ ಅವರನ್ನು ಗೆಲ್ಲಿಸಲು ಶತ ಪ್ರಯತ್ನ ನಡೆಸುತ್ತಿದೆ.
ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು ಸುಲಭವಾಗಿ ಜಯಗಳಿಸಿ ರಾಜ್ಯಸಭೆಗೆ ಮತ್ತೊಮ್ಮೆ ಪ್ರವೇಶಿಸಲಿದ್ದಾರೆ.
ಆದರೂ, ಜೆಡಿಎಸ್‌ ಪೈಪೋಟಿ ನೀಡಿದ್ದು, ನಾಲ್ಕನೇ ಸ್ಥಾನಕ್ಕೆ ಜೆಡಿಎಸ್‌-ಕಾಂಗ್ರೆಸ್‌ ನಡುವೆ ಸ್ಪರ್ಧೆ ನಡೆಯಲಿದೆ. ನಾಲ್ಕನೇ ಸ್ಥಾನಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯೋ ಅಥವಾ ಜೆಡಿಎಸ್‌ ಅಭ್ಯರ್ಥಿಯೋ ಎಂಬುದು ಕುತೂಹಲ ಮೂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com