ಕೋಲಾರ: ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ರಾಹುಲ್ ಗಾಂಧಿ ಭೇಟಿ ಕಾಂಗ್ರೆಸ್ ನ ದ್ವಿಮುಖ ನೀತಿಗೆ ಸಾಕ್ಷಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟೀಕಿಸಿದ್ದಾರೆ.
ಕೋಲಾರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ಯುಪಿಎ ಸರ್ಕಾರವಿದ್ದ ವೇಳೆ ಅವರ ವಿರುದ್ಧ ಮಾತನಾಡಿದ್ದ ರಾಹುಲ್ ಗಾಂಧಿ ಈಗ ಅವರನ್ನೇ ಭೇಟಿ ಮಾಡಿದ್ದಾರೆ, ಇದು ಭ್ರಷ್ಟಾಚಾರವನ್ನು ಬೆಂಬಲಿಸಿದಂತೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಮುಖ್ಯಸ್ಥರು ಸೋಮವಾರ ಏಮ್ಸ್ ಗೆ ತೆರಳಿ, ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿಯನ್ನ ಭೇಟಿಮಾಡಿದ್ದಾರೆ. ಲೋಕಸಭೆ ಚುನಾವಣ ಸಮೀಪಿಸು್ತಿರುವ ಹಿನ್ನೆಲೆಯಲ್ಲಿ ಭಯಗೊಂಡಿುವ ಕಾಂಗ್ರೆಸ್ ಲಾಲು ಬೆಂಬಲವಿಲ್ಲದೇ ಗೆಲ್ಲುವುದಕ್ಕಾಗುವುದಿಲ್ಲ ಎಂಬ ಭೀತಿಯಲ್ಲಿ ಲಾಲೂ ಪ್ರಸಾದ್ ಅವರನ್ನು ಭೇಟಿ ಮಾಡಿದ್ದಾರೆ.
ಅಧಿಕಾರ ಪಡೆಯುವುದಾಕ್ಕಾಗಿ ಲಾಲೂ ಅವರನ್ನು ತಬ್ಬಿಕೊಳ್ಳಲು ರಾಹುಲ್ ಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
Rahul Gandhi tore off the ordinance brought by Manmohan Singh to save Lalu Yadav when in power but now goes to meet the convicted leader in fodder scam to take his support for 2019 elections. This dual face of Rahul Gandhi is exposed. pic.twitter.com/0tMYC4w5gO