ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ, ಹಾಸನ ಚಿಕ್ಕಮಗಳೂರು ಗಳಲ್ಲಿ ನಾನು ಇದನ್ನು ಪರಿಶೀಲಿಸಿದ್ದೇನೆ, ಅಲ್ಲೆಲ್ಲೂ ಒಕ್ಕಲಿಗರ ಕ್ರೂಢೀಕರಣವಾಗಿಲ್ಲ, ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಕಾಂಗ್ರೆಸ್ ಪ್ರಯತ್ನಿಸುತ್ತಿದೆ, ಈ ಯೋಜನೆಯಿಂದ ಹೆಚ್ಚು ಪ್ರಮಾಣದಲ್ಲಿ ಅನುಕೂಲವಾಗುವುದು ಒಕ್ಕಲಿಗರು ಹೆಚ್ಚಾಗಿರುವ ಪ್ರದೇಶಕ್ಕೆ. ಸಹಾಯವಾಗಲಿದೆ, ಅದರೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ, ಅಧಿಕಾರಕ್ಕೆ ಬಂದರೇ ಯೋಜನೆಯನ್ನು ಕೈ ಬಿಡುವುದಾಗಿ ಘೋಷಿಸಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.