ಸುಸ್ಥಿರ ಅಭಿವೃದ್ದಿಯಿಂದ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ- ಡಾ. ಮನ ಮೋಹನ್ ಸಿಂಗ್

ಸುಸ್ಥಿರ ಅಭಿವೃದ್ಧಿಯಿಂದ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದು ಮಾಜಿ ಪ್ರಧಾನಮಂತ್ರಿ ಡಾ. ಮನ್ ಮೋಹನ್ ಸಿಂಗ್ ಪ್ರತಿಪಾದಿಸಿದ್ದಾರೆ.
ಡಾ. ಮನ್ ಮೋಹನ್ ಸಿಂಗ್ ಸುದ್ದಿಗೋಷ್ಠಿ
ಡಾ. ಮನ್ ಮೋಹನ್ ಸಿಂಗ್ ಸುದ್ದಿಗೋಷ್ಠಿ
Updated on: 

ಬೆಂಗಳೂರು : ಸುಸ್ಥಿರ  ಅಭಿವೃದ್ಧಿಯಿಂದ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದು ಮಾಜಿ ಪ್ರಧಾನಮಂತ್ರಿ ಡಾ. ಮನ ಮೋಹನ್ ಸಿಂಗ್ ಪ್ರತಿಪಾದಿಸಿದ್ದಾರೆ.

 ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು , ಮುಖ್ಯಮಂತ್ರಿ ಸಿದ್ದರಾಮಯ್ಯ  ನೇತೃತ್ವದಲ್ಲಿ ಕರ್ನಾಟಕ    ಡೈನಾಮಿಕ್ ಸಿಟಿಯಾಗಿ,  ಅಭಿವೃದ್ಧಿ ಆಧಾರಿತ ರಾಜ್ಯವಾಗಿ ಹೊರಹೊಮ್ಮಿದೆ ಎಂದರು.

ಚುನಾವಣೆಯಲ್ಲಿ ರಾಜ್ಯದ  ಜನರು ಕಾಂಗ್ರೆಸ್ ಬೆಂಬಲಿಸುವ ಮೂಲಕ  ಪಕ್ಷವನ್ನು ಬಲಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

 ನೋಟ್ ರದ್ದತಿ ಹಾಗೂ ಜಿಎಸ್ ಟಿಯಿಂದಾಗಿ ಗ್ರಾಮೀಣ ಭಾಗದ ಆರ್ಥಿಕ ಪರಿಸ್ಥಿತಿ  ಹಾಗೂ ಜನಸಾಮಾನ್ಯರ  ಪರಿಸ್ಥಿತಿಯನ್ನು ದುಸ್ತರಗೊಳಿಸಿದೆ.  ಪೆಟ್ರೋಲ್ ಬೆಲೆ ಏರಿಕೆ ಪ್ರಧಾನಿ ನರೇಂದ್ರಮೋದಿ ಅವರ ಕೆಟ್ಟ ಆಡಳಿತಕ್ಕೆ  ಸ್ಪಷ್ಟ ನಿದರ್ಶನವಾಗಿದೆ ಎಂದು ಮನ ಮೋಹನ್ ಸಿಂಗ್ ಆರೋಪಿಸಿದರು.

ಕಾಂಗ್ರೆಸ್ ಮುಖಂಡರಾದ ಗುಲಾಂ ನಬೀ ಆಜಾದ್,  ರಣದೀಪ್ ಸುರ್ಜೀವಾಲ ಮತ್ತಿತರ ನಾಯಕರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com