ಮೋದಿ ಪ್ರಚಾರದಿಂದ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಲಾಭವಾಗಲಿದೆ?
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಡೆಸುತ್ತಿರುವ ನವ ಕರ್ನಾಟಕ ರ್ಯಾಲಿ ರಾಜ್ಯದಲ್ಲಿ ಪಕ್ಷಪರ ವಾತಾವರಣವನ್ನು ನಿರ್ಮಾಣ ಮಾಡಿದೆ. ಇದಾದ ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಡೆಸಿದ ರ್ಯಾಲಿಗಳು ಪಕ್ಷಕ್ಕೆ ಮತ್ತಷ್ಟು ಬಲವನ್ನು ನೀಡಿದೆ. ಇದೀಗ ಮೋದಿಯವರ ಆಗಮನ ಪಕ್ಷಕ್ಕೆ ದ್ವಿಗುಣ ಶಕ್ತಿಯನ್ನು ನೀಡಿದೆ. ಚುನಾವಣಾ ತಜ್ಞರೂ ಕೂಡ ಪಕ್ಷಕ್ಕೆ ಬಹುಮತ ಬರುವ ಸಾಧ್ಯತೆಗಳ ಕುರಿತು ಮಾತನಾಡಿದ್ದಾರೆ. ಮೋದಿಯವರ ಪ್ರಚಾರ ಚುನಾವಣಾ ಶೇಕಡಾವಾರುಗಳನ್ನಷ್ಟೇ ಅಲ್ಲದೆ, ಪಕ್ಷದ 150ರ ಗುರಿ ತಲುಪಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಅಭ್ಯರ್ಥಿಗಳ ಬಲ, ಸಾಂಸ್ಥಿಕ ರಚನೆ, ಮೋದಿ ಮ್ಯಾಜಿಕ್ ನಮ್ಮನ್ನು ಗೆಲುವಿನತ್ತ ಕೊಂಡೊಯ್ಯುತ್ತದೆ. ಮೋದಿ ರ್ಯಾಲಿ ವೇಳೆ ಜನರನ್ನು ನಾವು ಕರೆತರುತ್ತಿಲ್ಲ. ಸ್ವಯಂಪ್ರೇರಿತರಾಗಿ ಬೃಹತ್ ಪ್ರಮಾಣದಲ್ಲಿ ಜನರು ಸೇರುತ್ತಿದ್ದಾರೆ. ಭಾನುವಾರ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮೋದಿಯವರು ಆಗಮಿಸಿದ್ದರು. ಈ ವೇಳೆ ಸಾಗರೋಪಾದಿಯಲ್ಲಿ ಜನರು ಸೇರಿದ್ದರು. ಅಷ್ಟರ ಮಟ್ಟಿಗೆ ಜನರು ಸೇರುತ್ತಾರೆಂದು ನಿರೀಕ್ಷಿಸಿರಲಿಲ್ಲ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಬಿಜೆಪಿ ಗೆಲುವು ಸಾಧಿಸುವುದು ಖಚಿತ ಎಂಬುದನ್ನು ಸೂಚಿಸುತ್ತದೆ. ಮುಂದಿನ ಸರ್ಕಾರ ರಚನೆ ಮಾಡುವುದು ನಾವೇ ಎಂಬುದರ ಬಗ್ಗೆ ನನಗೆ ಯಾವುದೇ ರೀತಿಯ ಸಂಶಯವಿಲ್ಲ.
ಮೋದಿಯವರು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರನ್ನು ಹೊಗಳಿದ್ದರು. ಇದರಲ್ಲಿ ರಾಜಕೀಯ ಉದ್ದೇಶಗಳೇನಾದರೂ ಇದೆಯೇ?
ಇದರಲ್ಲಿ ರಾಜಕೀಯ ಉದ್ದೇಶಗಳಾಗುವುದೂ ಇಲ್ಲ. ಮೋದಿಯವರು ಮಾಜಿ ಪ್ರಧಾನಮಂತ್ರಿಗಳಿಗೆ ಗೌರವ ಸೂಚಿಸಿದ್ದಾರಷ್ಟೆ. ಕಾವೇರಿ ವಿನಾದ ಹಾಗೂ ನೀರಾವರಿ ಬಗ್ಗೆ ದೇವೇಗೌಡ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಹಲವು ಬಾರಿ ಮೋದಿಯವರು ದೇವೇಗೌಡ ಅವರ ಸಲಹೆಗಳನ್ನು ಕೇಳುತ್ತಿರುತ್ತಾರೆ. ರಾಜಕೀಯ ಸಿದ್ಧಾಂತಗಳನ್ನು ಹೊರತುಪಡಿಸಿದರೆ, ದೇವೇಗೌಡ ಅವರ ಅನುಭವವನ್ನು ನಾವು ಗೌರವಿಸುತ್ತೇವೆ. ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿಯವರು ಹಿರಿಯರಿಗೆ ಯಾವ ರೀತಿ ಗೌರವ ನೀಡುತ್ತಾರೆ ಎಂಬುದರ ವ್ಯತ್ಯಾಸವನ್ನು ಮೋದಿ ಬಹಿರಂಗಪಡಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅತಂತ್ರಗಳು ಎದುರಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆಂದು ಹೇಳಿದ್ದಾರೆ.
ಬಿಜೆಪಿಯನ್ನು ದಲಿತ ವಿರೋಧಿ ಎಂದು ಬಿಂಬಿಸಲಾಗುತ್ತಿದೆ, ಈ ಅಂಶ ಪಕ್ಷದ ಚುನಾವಣಾ ಪ್ರಣಾಳಿಕೆ ಮೇಲೆ ಪರಿಣಾಮ ಬೀರಲಿದೆಯೇ?
ಕಾಂಗ್ರೆಸ್ ಇತರೆ ಶಕ್ತಿಗಳ ರಾಜಕೀಯ ಪ್ರೇರಿತವಾಗಿ ಆರೋಪಗಳನ್ನು ಮಾಡುತ್ತಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಗ್ಗೆ ಬಂದ ಆದೇಶ ಸುಪ್ರೀಂಕೋರ್ಟ್ ನೀಡಿದ್ದು. ಇದರಲ್ಲಿ ಕೇಂದ್ರ ಸರ್ಕಾರ ಪಾತ್ರವೇನಿದೆ? ಸರ್ಕಾರ ಹೇಳಿದ್ದನ್ನು ನ್ಯಾಯಾಲಯ ಅನುಸರಿಸುತ್ತದೆಯೇ? ಬಿಜೆಪಿ ವಿರುದ್ಧ ಕೆಲವರು ಪಿತೂರಿ ನಡೆಸುತ್ತಿದ್ದಾರೆ. ಒಂದು ವೇಳೆ ಬಿಜೆಪಿ ತಪ್ಪು ಮಾಡಿರುವುದೇ ಆಗಿದ್ದರೆ, ಮತಯಾಚಿಸಲು ನಾವು ಹೋದ ಸಂದರ್ಭದಲ್ಲಿ ದಲಿತ ಸಮುದಾಯದ ಸದಸ್ಯರು ನಮ್ಮನ್ನು ಕೇಳುತ್ತಿದ್ದರು. ಆದರೆ, ಆ ರೀತಿ ಯಾವುದೂ ಆಗಲಿಲ್ಲ. ಪಕ್ಷ ಯಾವಾಗಲೂ ದಲಿತರ ಪರವಾಗಿದೆ. ಅವರ ಏಳಿಕಾಗಾಗಿ, ಅವರ ಹಕ್ಕಗಳ ರಕ್ಷಣೆಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ದೋಷಪೂರಿತ ಅಭ್ಯರ್ಥಿಗಳನ್ನೇ ಎಲ್ಲಾ ಪಕ್ಷಗಳು ಘೋಷಣೆ ಮಾಡಿವೆ, ಚುನಾವಣೆಯಲ್ಲಿ ಭ್ರಷ್ಟಾಚಾರ ಪ್ರಮುಖ ವಿಚಾರವಾಗಲಿದೆಯೇ?
ಭ್ರಷ್ಟಾಚಾರದ ಕುರಿತು ನಾವು ಕೀಳುಮಟ್ಟದಲ್ಲಿ ಮಾತನಾಡುತ್ತಿಲ್ಲ. ಆದರೆ, ಉನ್ನತ ಸ್ಥಾನದಲ್ಲಿರುವ ಜನರು ಮಾತನಾಡುತ್ತಿದ್ದಾರೆ. ಅರ್ಕಾವತಿ ಲೇಔಟ್ ಡಿ-ನೋಟಿಫಿಕೇಶನ್ ಪ್ರಕರಣವನ್ನೇ ತೆಗೆದುಕೊಂಡರೆ, ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಡತವನ್ನು ತೆರವುಗೊಳಿಸಲು ನಿರಾಕರಿಸಿದ್ದೆ. ಆದರೆ, ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ತೆರವುಗೊಳಿಸಿದ್ದಾರೆ. ಪ್ರಕರಣದಲ್ಲಿ ಅವರು ತಪ್ಪಿತಸ್ಥರಲ್ಲ ಎಂಬುದೇ ಆಗಿದ್ದಾರೆ. ಕೆಂಪಣ್ಣ ಆಯೋಗದ ವರದಿಗೆ ನ್ಯಾಯ ಒದಗಿಸಬೇಕಿತ್ತು.
ಯಡಿಯೂರಪ್ಪ ಅವರ ವಿರುದ್ಧ ಆರೋಪಗಳಕ್ಕೆ ಬಂದರೆ, ಹಲವು ಪ್ರಕರಣಗಳಲ್ಲಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿದೆ. ಯಡಿಯೂರಪ್ಪ ಅವರನ್ನು ತಪ್ಪಿತಸ್ಥರೆಂದು ಸಾಬೀತು ಮಾಡುವುದಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಬಿಜೆಪಿ ನಾಯಕರನ್ನು ಜೈಲು ಹಕ್ಕಿಗಳೆಂದು ಕರೆಯುವ ಸಿದ್ದರಾಮಯ್ಯ ಅವರು ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನ್ಯಾಯಾಲಯ ಸೋನಿಯಾ ಹಾಗೂ ರಾಹುಲ್ ಅವರಿಗೆ ಜಾಮೀನು ನೀಡದೇ ಹೋಗಿದ್ದರೆ, ಇಬ್ಬರೂ ಜೈಲಿನಲ್ಲಿರುತ್ತಿದ್ದರು.
ಲಿಂಗಾಯತ ವಿಚಾರದಲ್ಲಿ ಬಿಜೆಪಿ ಏಕೆ ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತಿಲ್ಲ?
ಏಕೆಂದರೆ, ಇದು ವಿಚಾರವೇ ಅಲ್ಲ. ಇದೊಂದು ರಾಜಕೀಯ ಪ್ರೇರಿತ ವಿಚಾರವಾಗಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬಳಿಕ ಜನರ ಗಮನ ಬೇರೆಡೆ ಸೆಳೆಯರು ಕಾಂಗ್ರೆಸ್ ರೂಪಿಸಿದ ತಂತ್ರ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಪುಟ ಸಚಿವರು ಪ್ರತಿಭಟನೆ ನಡೆಸಿದ್ದರು. ಹಲವು ದಿನಗಳ ಪ್ರತಿಭಟನೆಗಳ ಬಳಿಕ ಅವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಮೂಲಕ ಸರ್ಕಾರ ತೃಪ್ತಿಪಡಿಸಿತ್ತು. ತಮ್ಮ ಆಗ್ರಹಗಳಿಗೂ ಅವರು ಪ್ರಾಮಾಣಿಕರಾಗಿಲ್ಲ. ಅದನ್ನು ಸಮುದಾಯ ಮನಗಾಣಬೇಕಿದೆ. ಹೀಗಾಗಿಯೇ ವಿವಾದ ಸಂಬಂಧ ಬಿಜೆಪಿ ದೂರವಿದೆ. ಇದಲ್ಲದೆ, ಸಮುದಾಯವನ್ನು ವಿಭಜಿಸುವ ಪಿತೂರಿ ಕೂಡ ಹೌದು ಎಂದಿದ್ದಾರೆ.