ಮತ್ತೊಮ್ಮೆ ರಾಜಕೀಯದ ಆಟಕ್ಕೆ ಸಿದ್ದರಾಗಿ, ನಾನು ನಿಮ್ಮೊಡನಿದ್ದೇನೆ: ನಟ ಪ್ರಕಾಶ್ ರೈ ಟ್ವೀಟ್

ಕರ್ನಾಟಕದಲ್ಲಿ ಬಿಜೆಪಿಒ ಸರ್ಕಾರ ರಚಿಸಿ 55 ಗಂಟೆಗಳಲ್ಲಿ ಅಧಿಕಾರ ಕಳೆದುಕೊಂಡ ಬೆಳವಣಿಗೆ ಹಲವರಲ್ಲಿ ಹಲವು ರೀತಿಯ ಭಾವನೆಗಳನ್ನು ಹುಟ್ಟು ಹಾಕಿದೆ.
ಪ್ರಕಾಶ್ ರೈ
ಪ್ರಕಾಶ್ ರೈ
Updated on: 
ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಒ ಸರ್ಕಾರ ರಚಿಸಿ 55 ಗಂಟೆಗಳಲ್ಲಿ ಅಧಿಕಾರ ಕಳೆದುಕೊಂಡ ಬೆಳವಣಿಗೆ ಹಲವರಲ್ಲಿ ಹಲವು ರೀತಿಯ ಭಾವನೆಗಳನ್ನು ಹುಟ್ಟು ಹಾಕಿದೆ.
ಇದೇ ರೀತಿ ಶನಿವಾರ ರಾಜ್ಯ ರಾಜಕೀಯದಲ್ಲಿ ನಡೆದ ಬೆಳವಣಿಗೆಯ ಕುರಿತಂತೆ ನಟ ಪ್ರಕಾಶ್ ರೈಟ್ವೀಟ್ ಮಾಡಿ "ರಾಜಕೀಯದ ಆಟಕ್ಕೆ ಸಿದ್ದರಾಗಿ, ನಾನು ನಿಮ್ಮೊಡನಿದ್ದೇನೆ" ಎಂದಿದ್ದಾರೆ.
"ಕರ್ನಾಟಕವು ಕೇಅರಿ ಬಣ್ಣಕ್ಕೆ ತಿರುಗಲಿಲ್ಲ, ಆದರೆ ವೈವಿದ್ಯಮಯ ಬಣ್ಣಗಳಿಂದಾಗಿ ಕಂಗೊಳಿಸುತ್ತಿದೆ. ಆಟದ ಪ್ರಾರಂಭಕ್ಕೆ ಮುನ್ನವೇ ಅಂತ್ಯವಾಗಿದೆ. 56 ಇಂಚಿನ ವಿಚಾರ ಬಿಡಿ 55 ಗಂಟೆ ಕಾಲ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ನಾಗರಿಕರೇ, ಇದೀಗ ಮತ್ತೆ ರಾಜಕೀಯದ ಆಟಕ್ಕೆ ಸಿದ್ದರಾಗಿ, ನಿಮ್ಮೊಡನೆ ನಾನಿದ್ದೇನೆ" ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
ಚುನಾವಣೆ ನಡೆದಾಗಿನಿಂದ ಪ್ರಕಾಶ್ ರೈ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮತ ಚಲಾವಣೆ ಮಾಡದೆ ಸುಮ್ಮನಿದ್ದ ನಟ ಕಳೆದ ಒಂದು ವಾರದಿಂದಲೂ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದರು.
ಪ್ರತಾಪ್ ಸಿಂಹ ಬೇಸರ
ಯಡಿಯೂರಪ್ಪ ಅಧಿಕಾರದ ಕುರ್ಚಿ ಬಿಟ್ಟು ಕೆಳಗಿಳಿದದ್ದಕ್ಕೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದ್ದಾರೆ.
2014ರಲ್ಲಿ ನಾನು ತುಂಬಾ ಖುಷಿಯಾಗಿದ್ದೆ, ಈಗ ತುಂಬಾ ದುಃಖವಾಗಿದೆ ಎಂದು ಅವರು ತಮ್ಮ ಫೇಸ್‍ಬುಕ್  ಲೈವ್ ನಲ್ಲಿ ಹೇಳಿಕೊಂಡಿದ್ದಾರೆ.
"ರಾಜೀನಾಮೆ ಕೊಡುವ ನಿರ್ಧಾರ ಪ್ರಕಟಿಸುವ ಕ್ಷಣ ಮೊದಲು, ೨೮ಕ್ಕೆ ಇಪ್ಪತ್ತೆಂಟೂ ಸೀಟುಗಳನ್ನು ಮೋದಿಗೆ ಗೆದ್ದುಕೊಡೋಣ ಎಂದರಲ್ಲಾ ಬಿಎಸ್ವೈ, ಇಂಥ ಹೋರಾಟಗಾರನಿಗೆ ಅಧಿಕಾರ ಉಳಿಸಿಕೊಡಲಾಗಲಿಲ್ಲವಲ್ಲಾ ಎಂಬ ನೋವು ಕಣ್ಣೀರು ತರಿಸುತ್ತಿದೆ. ಛೆ!" ಎಂದು ಟ್ವೀಟ್ ಮಾಡುವ ಮೂಲಕ ಅವರು ತಮ್ಮ ನೋವನ್ನು ಹೊರಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com