ಬಿಜೆಪಿ ಮೈತ್ರಿಯಿಂದ ಅಂಟಿಕೊಂಡಿದ್ದ ಕಳಂಕ ಶುದ್ಧಿಗೆ ನನ್ನ ಪುತ್ರನಿಗೆ ಅವಕಾಶ ಸಿಕ್ಕಿದೆ: ಹೆಚ್.ಡಿ.ದೇವೇಗೌಡ

ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಅಂಟಿಕೊಂಡಿದ್ದ ಕಳಂಕವನ್ನು ನನ್ನ ಪುತ್ರ ಶುದ್ಧೀಕರಣಗೊಳಿಸಿಕೊಂಡಿದ್ದಾನೆಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ...
ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ
ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ
Updated on: 
ಬೆಂಗಳೂರು; ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಅಂಟಿಕೊಂಡಿದ್ದ ಕಳಂಕವನ್ನು ನನ್ನ ಪುತ್ರ ಶುದ್ಧೀಕರಣಗೊಳಿಸಿಕೊಂಡಿದ್ದಾನೆಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ, 
ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊದರಲ್ಲಿ ಮಾತನಾಡಿರುವ ಅವರು, ಅಧಿಕಾರಕ್ಕೆ ಬರುತ್ತಿರುವ ಸಂತೋಷಕ್ಕಿಂತಲೂ, ಜಾತ್ಯಾತೀತ ತತ್ವಗಳಡಿ ಸರ್ಕಾರ ರಚನೆಗೆ ಅವಕಾಶ ಸಿಕ್ಕಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ. 
ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸಿದರೆ ಕುಮಾರಸ್ವಾಮಿ ನನ್ನ ಪುತ್ರನೇ ಅಲ್ಲ ಎಂದು ಮನೆಯಿಂದ ಹೊರ ಹಾಕುವುದಾಗಿ ಈ ಹಿಂದೆ ಹೇಳಿದ್ದೆ. ಆದರೆ, ದೇವರ ದಯೆ ಅಂತಹ ಯಾವುದೇ ಪರಿಸ್ಥಿತಿಗಳು ಉದ್ಭವಿಸಲಿಲ್ಲ. ಬಿಜೆಪಿ ಜೊತೆಗೆ ಕೈ ಜೋಡಿಸಿದ್ದಿದ್ದರೆ, ಜೆಡಿಎಸ್ ಪಕ್ಷದ ಪ್ರತಿಷ್ಠೆಗೂ ಕುಂದುಂಟಾಗುತ್ತಿತ್ತು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com