ಪ್ರಧಾನಿ ಮೋದಿಯನ್ನು ಹಕ್ಕಿಯ ಹಿಕ್ಕೆಗೆ ಹೋಲಿಸಿದ ರಮ್ಯಾ, ಮತ್ತೆ ವಿವಾದಾತ್ಮಕ ಟ್ವೀಟ್

ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ, ನಟಿ ರಮ್ಯಾ ಅವರು ಗುರುವಾರ ಮತ್ತೆ ವಿವಾದಾತ್ಮಕ ಟ್ಟೀಟ್ ಮಾಡಿದ್ದು...
ರಮ್ಯಾ, ನರೇಂದ್ರ ಮೋದಿ
ರಮ್ಯಾ, ನರೇಂದ್ರ ಮೋದಿ
ನವದೆಹಲಿ: ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ, ನಟಿ ರಮ್ಯಾ ಅವರು ಗುರುವಾರ ಮತ್ತೆ ವಿವಾದಾತ್ಮಕ ಟ್ಟೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಕ್ಕಿಯ ಹಿಕ್ಕೆಗೆ ಹೋಲಿಸಿದ್ದಾರೆ.
ದೇಶದ ಮೊದಲ ಗೃಹಮಂತ್ರಿ ಸರ್ದಾರ್​ ವಲ್ಲಭಬಾಯಿ ಪಟೇಲ್​ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ಅವರು ನಿನ್ನೆ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. ಲೋಕಾರ್ಪಣೆ ನಂತರ ಪಟೇಲರ ಪ್ರತಿಮೆ ಬಳಿ ತೆರಳಿ ಅವರ ಪಾದ ಮುಟ್ಟಿ ನಮಸ್ಕರಿಸಿದ್ದರು. ಈ ಚಿತ್ರದಲ್ಲಿ ಮೋದಿ ಪ್ರತಿಮೆ ಕೆಳಗೆ ಪುಟ್ಟದಾಗಿ ಕಾಣಿಸುತ್ತಿದ್ದಾರೆ. ಆ ಚಿತ್ರವನ್ನು ಟ್ಟೀಟ್ ಮಾಡಿರುವ ಮಾಜಿ ಸಂಸದೆ ರಮ್ಯಾ ಇದು ಹಕ್ಕಿಯ ಹಿಕ್ಕೆನಾ..? ಎಂದು ಪ್ರಶ್ನಿಸಿದ್ದಾರೆ.
ದೇಶದ ಪ್ರಧಾನಿಯನ್ನ ರಮ್ಯಾ ಮತ್ತೆ ಅವಮಾನಿಸಿದ್ದಾರೆ ಎಂದು ನೆಟ್ಟಿಗರು ರಮ್ಯಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೋದಿಗೆ ಯಾಕೆ ಪದೇ ಪದೇ ಅವಮಾನ ಮಾಡುತ್ತಿದ್ದೀರಾ? ಈ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಒತ್ತಾಯಿಸಿದ್ದಾರೆ. ಆದರೆ ರಮ್ಯಾ ಮಾತ್ರ ತಮ್ಮ ವರಸೆಯನ್ನ ಬದಲಿಸಿಲ್ಲ. ಬದಲಾಗಿ ತಾವು ಯಾವುದೇ ಸ್ಪಷ್ಟನೆ ಕೊಡಲ್ಲ ಎಂದು  ಟ್ವಿಟರ್​ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಕಾಂಗ್ರೆಸಿಗರ ಮೌಲ್ಯಗಳು ಕುಸಿಯುತ್ತಿವೆ ಎಂದು ಟ್ಟೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com