ಜಾತಿ ಎಂಬುದು ತಾಯಿಯಂತೆ, ಎಲ್ಲಾ ತಾಯಿಯರಿಗೂ ಗೌರವ ನೀಡಬೇಕು: ಮಧು ಬಂಗಾರಪ್ಪ

ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಜಿದ್ದಾಜಿದ್ದಿಗೆ ಇಳಿದಿದ್ದಾರೆ, ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿ ಮಧುಬಂಗಾರಪ್ಪ..
ಮಧು ಬಂಗಾರಪ್ಪ
ಮಧು ಬಂಗಾರಪ್ಪ
Updated on: 

ಶಿವಮೊಗ್ಗ: ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಜಿದ್ದಾಜಿದ್ದಿಗೆ ಇಳಿದಿದ್ದಾರೆ, ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿ ಮಧುಬಂಗಾರಪ್ಪ ಕಣಕ್ಕಿಳಿದಿದ್ದಾರೆ, ತಮ್ಮ ತಂದೆಯ ಪರಂಪರೆಯನ್ನು ಉಳಿಸಿಕೊಂಡು ಹೋಗುವುದಾಗಿ ಹೇಳಿದ್ದಾರೆ.  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ, ತಾವು ಹೇಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡ ವಿಷಯ ತಿಳಿಸಿದ್ದಾರೆ.

ಪ್ರ: ಈ ಚುನಾವಣೆಯಲ್ಲಿ ನಿಮ್ಮ ಪರ ಕೆಲಸ ಮಾಡುವ ವಿಚಾರ ಯಾವುದು?
ಶಿವಮೊಗ್ಗ ಲೋಕಸಭೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ನಾನು ಸೊರಬದಿಂದ ಸ್ಪರ್ಧಿಸಿ ಸೋತಿದ್ದೆ,  ನಾನು ಶಾಸಕನಾಗಿದ್ದಾಗ ಮಾಡಿದ ಕೆಲಸಗಳನ್ನು ಎಲ್ಲರೂ ಮೆಚ್ಚಿದ್ದಾರೆ, ಶಿವಮೊಗ್ಗ ಜನತೆ ತುಂಬಾ ಮಿಸ್ ಮಾಡಿಕೊಂಡಿದ್ದಾರೆ, ಉಳಿದ ನಾಲ್ಕು ತಿಂಗಳಲ್ಲಿ  ಎಲ್ಲವನ್ನು ಸರಿಮಾಡುತ್ತೇನ.

ಪ್ರ: ನಿಮಗೆ ಕಾಂಗ್ರೆಸ್ ನ ಸಂಪೂರ್ಣ ಬೆಂಬಲ ಇದೆಯೇ?
ಬಿಜೆಪಿ ಹಿಂದುತ್ವ ಮುಂದಿಟ್ಟುಕೊಂಡು  ರಾಜಕೀಯ ಮಾಡುತ್ತಿದೆ, ಆದರೆ ರಾಜಕೀಯದಲ್ಲಿ ಅದು ಸಾಧ್ಯವಿಲ್ಲ, ನನ್ನ ತಂದೆ ಬಿಜೆಪಿ ಸೇರಿದ್ದರು, ಆದರೆ ಬಿಜೆಪಿಯ ತತ್ವ ಸಿದ್ದಾಂತ , ವ್ಯವಸ್ಥೆಗಳನ್ನು ಅವರು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ, ಬಿಜೆಪಿಯೇತರ ಪಕ್ಷಗಳು ದೇಶಕ್ಕೆ ಅವಶ್ಯವಿದೆ, ನನಗೆ ರಾಜ್ಯ ಹಾಗೂ ರಾಷ್ಚ್ರೀಯ ನಾಯಕರುಗಳ ಬೆಂಬಲವಿದೆ.

ಪ್ರ: ನೀವು ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರವೂ ಮುಖ್ಯಮಂತ್ರಿ ಕುಮಾರಸ್ವಾಮಿ ನಿಮಗೆ ಆತ್ಮ ವಿಶ್ವಾಸ ತುಂಬುತ್ತಿದ್ದಾರಾ?
ಅವರು ಸಿಎಂ ಆಗಿರಲಿ ಅಥವೇ ಇಲ್ಲದಿರಲಿ ಅವರು, ಯಾವಾಗಲೂ ನನ್ನನ್ನು ಬೆಂಬಲಿಸುತ್ತಾರೆ, ಅಧಿಕಾರ ಎಂಬುದು ತುಂಬಾ ದೀರ್ಘಕಾಲ ಇರುವುದಿಲ್ಲ, ಬಿಜೆಪಿ ಏನನ್ನೂ ಮಾಡಿಲ್ಲ, ಪ್ರತಿಬಾರಿ ಚುನಾವಣೆ ಬಂದಾಗ,ಕೇಂದ್ರ ಸಚಿವರಿಗೆ ಅರ್ಜಿ ಸಲ್ಲಿಸುತ್ತಾರೆ, ಆದರೆ ಕೇಂದ್ರ ಸಚಿವರು ಏನನ್ನೂ ಮಾಡುವುದಿಲ್ಲ.

ಪ್ರ: ನಿಮ್ಮ ತಂದೆಯ ಪರಂಪರೆಯನ್ನು ಹೇಗೆ ಮುಂದುವರಿಸಿಕೊಂಡು ಹೋಗುತ್ತೀರಿ?
ನನ್ನ ತಂದೆಯ ಕಾಲದಿಂದಲೂ ನಾನು ರಾಜಕೀಯ ನೋಡುತ್ತಾ ಬಂದಿದ್ದೇನೆ, ನನ್ನ ತಂದೆ ಮಾಡಿದ್ದ ಕೆಲಸಗಳು ಪರಿಣಾಮ ಬೀರಿವೆ, ಅವರ ಎಲ್ಲಾ  ಕೆಲಸಗಳನ್ನು ನಾನು ಉತ್ತಮ ಮಾರ್ಗದಲ್ಲಿ ತೆಗೆದುಕೊಂಡು ಹೋಗುತ್ತೇನೆ.

ಪ್ರ: 2019ರ ಲೋಕಸಭೆ ಚುನಾವಣೆಯಲ್ಲಿಯೂ ಕೂಡಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ?
ಒಂದು ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮುಂದುವರಿದರೇ ನಾನು ಸ್ಪರ್ಧಿಸುತ್ತೇನೆ.

ಶಿವಮೊಗ್ಗದಲ್ಲಿ ಜಾತಿ ಸಮೀಕರಣ ಹೇಗೆ ಕೆಲಸ ಮಾಡುತ್ತದೆ?

ಜಾತಿಯನ್ನು ನಾನು ರಾಜಕೀಯದ ಸಾಧನವನ್ನಾಗಿ ಯಾವತ್ತೂ ನೋಡಿಲ್ಲ, ಎಲ್ಲಾ ಸಮುದಾಯದವರು ನನ್ನ ತಂದೆಯನ್ನು ಇಷ್ಟಪಡುತ್ತಿದ್ದರು, ಹಾಗೆಯೇ ನನ್ನನ್ನು ಇಷ್ಟ ಪಡಲು ನಾನು ಬಯಸುತ್ತೇನೆ,  ಜಾತಿ ಎಂಬುದು ತಾಯಿಯಂತೆ,  ಒಂದು ವೇಳೆ ನನ್ನ ತಾಯಿಯನ್ನು ಗೌರವಿಸಿದರೇ ಎಲ್ಲಾ ತಾಯಿಯರಿಗೂ ಗೌರವ ನೀಡಿದಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com