ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿರುವ ಮತದಾನ ಸಂಜೆ 6 ರವರೆಗೂ ನಡೆಯಲಿದೆ. ಆದರೆ ಮತದಾರರು ಈ ಚುನಾವಣೆ ಬಗ್ಗೆ ಅಧಿಕ ಉತ್ಸಾಹ ತೋರುತ್ತಿಲ್ಲ, ಸುಮಾರು 54,54 ಲಕ್ಷ ಮಂದಿ ತಮ್ಮ ಮತ ಚಲಾಯಿಸಲಿದ್ದಾರೆ. ಕಣದಲ್ಲಿ 31 ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಇಬ್ಬರು ಮಹಿಳೆಯರು. ಒಟ್ಟು 40 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅವುಗಳಲ್ಲೆ ಕೆಲವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ, ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ, ರಾಮನಗರ ಮತ್ತು ಜಮಖಂಡಿಯಲ್ಲಿ ತಲಾ 7 ಅಭ್ಯರ್ಥಿಗಳಿದ್ದಾರೆ.