ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಜೆಡಿಎಸ್ ಪಾಲಿಗೆ ರಾಜ್ಯ ಉಪ ಚುನಾವಣಾ ಕಣ ಪ್ರತಿಷ್ಠೆಯ ವಿಷಯವಾಗಿದೆ, 1999 ರಲ್ಲಿ ಬಳ್ಳಾರಿ ಲೋಕಸಭೆಯಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸ್ಪರ್ಧಿಸಿ ಗೆದ್ದಿದ್ದರು.
ಕಾಂಗ್ರೆಸ್ ಚುನಾವಣಾ ಸಮಿತಿ ಅಧ್ಯಕ್ಷ ಡಿ,ಕೆ ಶಿವಕುಮಾರ್ ಬಳ್ಳಾರಿ ಉಸ್ತುವಾರಿ ಸಚಿವರಾಗಿದ್ದಾರೆ. ಬಳ್ಳಾರಿ ಉಪ ಚುನಾವಣೆಯಲ್ಲಿ ಗೆಲ್ಲಲು ಶಿವಕುಮಾರ್ ಎಲ್ಲಾ ರೀತಿಯ ರಣ ತಂತ್ರಗಳನ್ನು ಹೆಣೆಯುತ್ತಿದ್ದಾರೆ,
ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೇ ಪರಿಗಣಿಸಲಾಗಿರವ ಡಿ.ಕೆ ಶಿವಕುಮಾರ್ ಸೇರಿದಂತೆ ಶಾಸಕರು, ಹಿರಿಯ ಮುಖಂಡರು ಸೇರಿದಂತೆ ಒಟ್ಟು 64 ಮಂದಿ ಬಳ್ಳಾರಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೋಳ್ಳಲಿದ್ದಾರೆ.
ಬಳ್ಳಾರಿಯಲ್ಲಿ ಜೆ, ಶಾಂತಾ ಮತ್ತು ಕಾಂಗ್ರೆಸ್ ಉಗ್ರಪ್ಪ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಳ್ಳಾರಿಯ 8 ವಿಧಾನಸಭೆ ಕ್ಷೇತ್ರಗಳಿಗೂ ಆರು ಸಚಿವರು ಪ್ರತಿಯೊಂದು ವಿಧಾನಸಭೆ ಕ್ಷೇತ್ರಗಳ ಹೊಣೆ ತೆಗೆದುಕೊಂಡಿದ್ದಾರೆ,
ಮಾಜಿ ಸಚಿವ ಶರಣ ಪ್ರಕಾಶ್ ಪಾಟೀಲ, ವಿಜಯನಗರ ಹಾಗೂ ಎಂಪಿ ಧ್ರವ ನಾರಾಯಣ ಉಸ್ತುವಾರಿ ತೆಗೆದುಕೊಂಡಿದ್ದಾರೆ.
ಜಾರಕಿ ಹೊಳಿ ಸಹೋದರರು ಮತ್ತು ಡಿ.ಕೆ ಶಿವಕುಮಾರ್ ಒಬ್ಬರಿಗೊಬ್ಬರು ಮುಖ ನೋಡಲು ಬಯಸುತ್ತಿರಲಿಲ್ಲ, ಆದರೆ ಬಳ್ಳಾರಿ ಚುನಾವಣೆಯಲ್ಲಿ ಒಗ್ಗಟ್ಟಾಗಿ ಶ್ರೀರಾಮುಲು ವಿರುದ್ಧ ತೊಡೆ ತಟ್ಟಿದ್ದಾರೆ.