ಶಿವಮೊಗ್ಗ ಹಣಾಹಣಿ: ಕಾಂಗ್ರೆಸ್ ಗೆ ನೋಟಾ ತಲೆನೋವು, ಬಿಜೆಪಿಗೆ ಮತದಾರರನ್ನು ಹಿಡಿದಿಡುವ ಸವಾಲು
ಉಪಚುನಾವಣೆಗಿನ್ನು ಒಂದು ವಾರವಷ್ಟೇ ಬಾಕಿ ಉಳಿದಿದೆ. ಆದರೆ ಶಿವಮೊಗ್ಗದಲ್ಲಿ ಮಾತ್ರ ಇನ್ನೂ ಪ್ರಚಾರದ ಕಾವೇರಿದಂತೆ ಕಾಣುತ್ತಿಲ್ಲ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಆಟೋರಿಕ್ಷಾಗಳು ಒಂದೊಂಡರಲ್ಲಿ....
ಶಿವಮೊಗ್ಗ್ನಲ್ಲಿ ಜೆಡಿ (ಎಸ್) -ಕಾಂಗ್ರೆಸ್ ಮೈತ್ರಿ ಪಕ್ಷಗಳ ಚುನಾವಣಾ ಕಛೇರಿ
ಶಿವಮೊಗ್ಗ: ಉಪಚುನಾವಣೆಗಿನ್ನು ಒಂದು ವಾರವಷ್ಟೇ ಬಾಕಿ ಉಳಿದಿದೆ. ಆದರೆ ಶಿವಮೊಗ್ಗದಲ್ಲಿ ಮಾತ್ರ ಇನ್ನೂ ಪ್ರಚಾರದ ಕಾವೇರಿದಂತೆ ಕಾಣುತ್ತಿಲ್ಲ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಆಟೋರಿಕ್ಷಾಗಳು ಒಂದೊಂಡರಲ್ಲಿ ಅಭ್ಯರ್ಥಿಗಳ ಹೆಸರನ್ನು ಹೇಳಿ ಪ್ರಚಾರ ನಡೆಸುವುದನ್ನು ಬಿಟ್ಟರೆ ಯಾವ ಪಕ್ಷಗಳ ಅಭ್ಯರ್ಥಿಗಳಲ್ಲಿ ಸಹ ಪ್ರಚಾರದ ಭರಾಟೆ ಕಾಣುತ್ತಿಲ್ಲ.
ಎಲ್ಲಾ ಪಕ್ಷಗಳು ಮನೆ ಮನೆ ಪ್ರಚಾರದಲ್ಲಿ ತೊಡಗಿಕೊಳ್ಳುವ್ಯ್ದ್ಯ್ ಸೇರಿ ಪರಿಣಾಮಕಾರಿಯಾ ಪ್ರಚಾರಕಾರ್ಯವನ್ನು ಇನ್ನೂ ಪ್ರಾರಂಭಿಸಬೇಕಿದೆ. ಜನರನ್ನು ಮತದಾನ ಕೇಂದ್ರಕ್ಕೆ ಸೆಳೆಯಲು ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ಎಲ್ಲಾ ಪಕ್ಷಗಳ ಕಾರ್ಯಕರ್ತರ ತಕ್ಷಣದ ಸವಾಲು.
ಜೆಡಿಎಸ್ ನ ಮಧು ಬಂಗಾರಪ್ಪಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ಗೆ ತಮ್ಮ ಮತದಾರರನ್ನು ಮತಗಟ್ಟೆಗೆ ತರುವುದು ಹಾಗೂ ಅವರು ನೋಟಾ ಮತದಾನವನ್ನು ಮಾಡದಂತೆ ನೋಡಿಕೊಳ್ಳುವುದು ಹೀಗೆ ಎರಡು ಬಗೆ ತಲೆನೋವು ಎದುರಾಗಿದೆ.
"ನಾವು ಇಷ್ಟು ವರ್ಷ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಟೀಕಿಸಿ ತಮ್ಮ ಅಭ್ಯರ್ಥಿಗಳ ಮತಗಳಿಗಾಗಿ ಕೇಳುತ್ತಿದ್ದೆವು. ಆದರೆ ಈ ಬಾರಿ ಜೆಡಿಎಸ್ ಗೆ ಬೆಂಬಲಿಸಿ ಅವರ ಪರ ಮತ ಕೇಳುತ್ತಿದ್ದೇವೆ. ಇದು ಜನರಲ್ಲಿ ಗೊಂದಲಕ್ಕೆ ಕಾರಣವಾಗುವ ಸಂಭವವಿದೆ. ಜನರು ಮತಗಟ್ಟೆಗೆ ಬಂದು ಜೆಡಿಎಸ್ ಅಭ್ಯರ್ಥಿಗೆ ಬದಲು ನೋಟಾ ಗೆ ಮತ ಹಾಕಿದರೆ ನಮಗೆ ನಷ್ಟವಾಗುವ ಭಯ ಎದುರಾಗಿದೆ"ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಘಟಕದ ಅಧಿಕಾರಿಗಳು ಹೇಳಿದ್ದಾರೆ.
ಆದರೆ ಇದಕ್ಕೆ ಹಿರಿಯ ಕಾಂಗ್ರೆಸ್ ಮುಖಂಡರು ಸಮ್ಮತಿ ಸೂಚುಸುಲ. "ಹೀಗಾಗಲು ಸಾಧ್ಯವಿಲ್ಲ, ಹಿಂದುತ್ವದ ಹೆಸರಿನಲ್ಲಿ ಸಮಾಜದ ಸಾಮರಸ್ಯವನ್ನು ನಾಶಪಡಿಸುವ ಬಿಜೆಪಿ ಒಂದು ಕೋಮು ಪಕ್ಷವೆಂದು ಜನರು ಅರಿತುಕೊಂಡಿದ್ದಾರೆ. ಹೀಗಾಗಿ ಬಿಜೆಪಿಯನ್ನು ದೂರ ಮಾಡಲು ಜನ ಬಯಸುತ್ತಾರೆ" ಎಂದರು.
ಆದರೆ ಬಿಜೆಪಿಗೆ ನೋಟಾ ಬಗೆಗೆ ಯಾವ ಭಯವಿಲ್ಲ. ಅದು ತನ್ನ ಮತದಾರರನ್ನು ಮತಗಟ್ಟೆಗೆ ಕರೆತರುವಲ್ಲಿ ಯಶಸ್ವಿಯಾಗಲಿದೆ ಎಂದು ಭರವಸೆಯನ್ನು ಹೊಂದಿದೆ."ಕಳೆದ ಹಲವು ಚುನಾವಣೆಗಳಲ್ಲಿ ಜನರು ಸತತವಾಗಿ ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದಾರೆ.ಗ್ರಾಮೀಣ ಭಾಗದಲ್ಲಿನ ಜನರಿಗೆ ತಮ್ಮ ಮುಂದಿನ ಸಾರ್ವತ್ರಿಕ ಚುನಾವಣೆ ಕುರಿತು ಯಾವ ಅರಿವಿಲ್ಲ. ನಮ್ಮ ಕಾರ್ಯಕರ್ತರು ಅವರಿಗೆ ಈ ವಿಚಾರ ತಿಳಿಸುತ್ತಿದ್ದಾರೆ.ಆದಎ ಉಪಚುನಾವಣೆಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗುವುದು ಸಾಮಾನ್ಯ ಎಂಬಂತಾಗಿದೆ."ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿ ನಡೆಸುವ ಮದು ಬಂಗಾರಪ್ಪ ಪರ ಅಭಿಯಾನಕ್ಕಿಂತ ರಾಘವೇಂದ್ರ ಅವರ ಪರ ಪ್ರಚಾರ ಸಕ್ರಿಯವಾಗಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹೇಳುವಂತೆ ಮತದಾನದ ಪ್ರಮಾಣ ಕಡಿಮೆ ಇರಲಿದೆ.ಹೀಗಾಗಿ ಇದು ಬಿಜೆಪಿಗೆ ಲಾಭವಾಗಲಿದೆ."45-50 ಶೇಕಡ ಮಾತ್ರ ಮತ ಚಲಾವಣೆಯಾದರೆ ಗೆಲ್ಲುವ ಉತ್ತಮ ಅವಕಾಶವನ್ನು ಕಾಂಗ್ರೆಸ್ ಹೊಂದಿದ್ದರೂ ಅದು ಬಿಜೆಪಿಗೆ ಹೆಚ್ಚು ಲಾಭದಾಯಕವಾಗುತ್ತದೆ" ಕಾಂಗ್ರೆಸ್ ನಾಯಕರು ಹೇಳಿದ್ದಾರೆ.