'ಮಹಾಭಾರತದಲ್ಲಿ ದ್ರೌಪದಿ ಸೀರೆಯನ್ನು ಒಬ್ಬ ಮಾತ್ರ ಎಳೆದ: ಈಗ ಸೀರೆ ಎಳೆಯುವವರ ಸಂಖ್ಯೆಯೇ ಹೆಚ್ಚಾಗಿ ಹೋಗಿದೆ'

ಮಹಾಭಾರತದಲ್ಲಿ ದ್ರೌಪದಿಗೆ ಆಗಿರುವ ರೀತಿಯಲ್ಲಿ ಇದೀಗ ಪ್ರಜಾಪ್ರಭುತ್ವಕ್ಕೆ ವಸ್ತ್ರಾಪಹರಣ ಆಗುತ್ತಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಬೇಸರ ವ್ಯಕ್ತ ಪಡಿಸಿದರು....
ಎಟಿ ರಾಮಸ್ವಾಮಿ
ಎಟಿ ರಾಮಸ್ವಾಮಿ
Updated on: 
ಬೆಂಗಳೂರು: ಮಹಾಭಾರತದಲ್ಲಿ ದ್ರೌಪದಿಗೆ ಆಗಿರುವ ರೀತಿಯಲ್ಲಿ ಇದೀಗ ಪ್ರಜಾಪ್ರಭುತ್ವಕ್ಕೆ ವಸ್ತ್ರಾಪಹರಣ ಆಗುತ್ತಿದೆ ಎಂದು  ಶಾಸಕ ಎ.ಟಿ. ರಾಮಸ್ವಾಮಿ ಬೇಸರ ವ್ಯಕ್ತ ಪಡಿಸಿದರು.
ವಿಧಾನಸಭೆ ವಿಶ್ವಾಸ ಮತಯಾಚನೆ ಚರ್ಚೆಯಲ್ಲಿ ಮಾತನಾಡಿದ ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ  ಅವರು ಮಾತಿನ ನಡುವೆ ಪ್ರಜಾಪ್ರಭುತ್ವವನ್ನು ದ್ರೌಪದಿಗೆ ಹೋಲಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು, ಮಹಾಭಾರತದಲ್ಲಿ ದ್ರೌಪದಿ ಸೀರೆ ಎಳೆಯುವವರು ಒಬ್ಬರೇ ಇದ್ದರು. ಕೃಷ್ಣನ ಬಳಿ ಸೀರೆ ಇತ್ತು, ರಕ್ಷಣೆಗೆ ಬಂದ. ಈಗ ಸೀರೆ ಎಳೆಯುವವರು ಜಾಸ್ತಿಯಾಗಿದ್ದಾರೆ. ಕೃಷ್ಣನ ಬಳಿಯೂ ಸೀರೆ ಸ್ಟಾಕ್‌ ಖಾಲಿಯಾಗಿದೆ ಎಂದು ಹೇಳಿದಾಗ ಸದನ ನಗೆ ಗಡಲಲ್ಲಿ ತೇಲಿತು. 
ಕಾಂಗ್ರೆಸ್‌-ಜೆಡಿಎಸ್‌ ನಡುವೆ ಮೈತ್ರಿ ಧರ್ಮ ಪಾಲನೆ ಆಗುತ್ತಿಲ್ಲ. ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಕಾಣುತ್ತಿಲ್ಲ. ಹೊಂದಾಣಿಕೆ ಇಲ್ಲದಿದ್ದಾಗ ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನ ಬಿಟ್ಟು ವಿರೋಧ ಪಕ್ಷದಲ್ಲಿ ಕೂರೋಣ ಎಂದು ಲೋಕಸಭೆ ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದೆ. ನಮ್ಮ ತಪ್ಪುಗಳು ಸ್ವಲ್ಪ ಮಟ್ಟಿಗೆ ವಿರೋಧಪಕ್ಷಕ್ಕೆ ಸಹಕಾರಿಯಾಗಿದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com