ಮುನಿರತ್ನರಿಂದ ಶಕುನಿ ಪಾತ್ರ: ಹಣ ಹಂಚಿಕೆ ವಿಡಿಯೋ ಬಿಡುಗಡೆ ಮಾಡಿದ ಸಂಸದ ಡಿಕೆ ಸುರೇಶ್

ಆರ್ ಆರ್ ನಗರದಲ್ಲಿ ಒಳ್ಳೆಯ ನಿರ್ಮಾಪಕರು ಸ್ಪರ್ಧಿಸಿದ್ದು, ಆಗಾಗ ಡೈರೆಕ್ಟಿಂಗ್ ಆ್ಯಕ್ಟಿಂಗ್ ನಡೆಯುತ್ತಿದೆ. ಹಿಂದೆ ದುಶ್ಯಾಸನನ ಪಾತ್ರ ಮಾಡುತ್ತಿದ್ದರು. ಈಗ ಶಕುನಿ ಪಾತ್ರ ಮಾಡುತ್ತಾ ಇದ್ದಾರೆ. ಚಿತ್ರಕಥೆಯೂ ಮುನಿರತ್ನದ್ದೆ. ಸ್ಪರ್ಧೆ ಚಿತ್ರವನ್ನು ಚೆನ್ನಾಗಿ ಬಿಡುಗಡೆ ಮಾಡುತ್ತಿದ್ದಾರೆ ಎಂದು ಸಂಸದ ಡಿಕೆ ಸುರೇಶ್ ವ್ಯಂಗ್ಯವಾಡಿದ್ದಾರೆ.
ಡಿಕೆ ಸುರೇಶ್
ಡಿಕೆ ಸುರೇಶ್
Updated on

ಬೆಂಗಳೂರು: ಆರ್ ಆರ್ ನಗರದಲ್ಲಿ ಒಳ್ಳೆಯ ನಿರ್ಮಾಪಕರು ಸ್ಪರ್ಧಿಸಿದ್ದು, ಆಗಾಗ ಡೈರೆಕ್ಟಿಂಗ್ ಆ್ಯಕ್ಟಿಂಗ್ ನಡೆಯುತ್ತಿದೆ. ಹಿಂದೆ ದುಶ್ಯಾಸನನ ಪಾತ್ರ ಮಾಡುತ್ತಿದ್ದರು. ಈಗ ಶಕುನಿ ಪಾತ್ರ ಮಾಡುತ್ತಾ ಇದ್ದಾರೆ. ಚಿತ್ರಕಥೆಯೂ ಮುನಿರತ್ನದ್ದೆ. ಸ್ಪರ್ಧೆ ಚಿತ್ರವನ್ನು ಚೆನ್ನಾಗಿ ಬಿಡುಗಡೆ ಮಾಡುತ್ತಿದ್ದಾರೆ ಎಂದು ಸಂಸದ ಡಿಕೆ ಸುರೇಶ್ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಹಣ ಹಂಚಿಕೆ ವಿಡಿಯೋವನ್ನು ಸಂಸದ ಡಿಕೆ ಸುರೇಶ್  ಕೆಪಿಸಿಸಿ ಕಚೇರಿಯಲ್ಲಿ ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮುನಿರತ್ನ ಎಲ್ಲವನ್ನೂ ತಾನೇ ಮಾಡಿ ಕಾಂಗ್ರೆಸ್ ಮಾಡಿದ್ದು ಎನ್ನುತ್ತಿದ್ದಾರೆ. ಮುನಿರತ್ನ ಒಂದು ನಾಲಿಗೆ ಇಟ್ಟುಕೊಂಡು ಮಾತನಾಡುವುದಿಲ್ಲ. ಮುನಿರತ್ನಗೆ ಎರಡೆರಡು ನಾಲಿಗೆ. ಪ್ರಧಾನಿ ಬಗ್ಗೆ ಪ್ರಧಾನಿ ತಾಯಿ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಈ ಹಿಂದೆ ಏನು ಮಾತನಾಡಿದ್ದಾರೆ ಅಶೋಕ್ ಬಗ್ಗೆ ಹೇಗೆ ಮಾತನಾಡಿದ್ದಾರೆ ಎನ್ನುವ ಬಗ್ಗೆ ಬಿಜೆಪಿಯಲ್ಲಿಯೇ ದಾಖಲೆಗಳು ಇವೆ ಎಂದರು.

ಆರ್ ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್ ನಿಂದ ಕುಸುಮಾ ಮತ್ತು ಜೆಡಿಎಸ್ ನಿಂದ ಕೃಷ್ಣಮೂರ್ತಿ ರಣ ಕಣದಲ್ಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com