ನಳಿನ್ ಕುಮಾರ್ ಕಟೀಲ್ ಹಸುವಿನಂತಹ ಮನುಷ್ಯ: ಅವರಿಗೆ ಭ್ರಷ್ಟಾಚಾರದ ಕಲ್ಪನೆಯೇ ಇಲ್ಲ!

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಹಸುವಿನಂತಹ ಮನುಷ್ಯ. ಅವರಿಗೆ ಭ್ರಷ್ಟಾಚಾರದ ಕಲ್ಪನೆಯೇ ಇಲ್ಲ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್
Updated on: 

ಬೆಂಗಳೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಹಸುವಿನಂತಹ ಮನುಷ್ಯ. ಅವರಿಗೆ ಭ್ರಷ್ಟಾಚಾರದ ಕಲ್ಪನೆಯೇ ಇಲ್ಲ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.

‘ಬಿಟ್‌ಕಾಯಿನ್‌ ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಏಕೆ ಮಾತನಾಡುತ್ತಿಲ್ಲ’ ಎಂಬ ವಿರೋಧ ಪಕ್ಷದ ಮುಖಂಡರ ಪ್ರಶ್ನೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ನಳಿನ್‌ ಅವರು ಸಂಘಟನೆಯಲ್ಲೇ ತಮ್ಮನ್ನು ತೊಡಗಿಸಿಕೊಂಡವರು. ಅವರದ್ದು ಸೌಮ್ಯ ಸ್ವಭಾವ. ಕಾಂಗ್ರೆಸ್‌ನವರು ಸುದ್ದಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಅವರು ತಮ್ಮ ಕರ್ಮಕಾಂಡವನ್ನು ನೋಡಿಕೊಳ್ಳಲಿ’ ಎಂದರು.

ಬಿಟ್‌ಕಾಯಿನ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕರ ಮಕ್ಕಳು ಶಾಮೀಲಾಗಿದ್ದಾರೆ. ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆಯುತ್ತದೆ ಎಂಬ ಹತಾಶೆಯಿಂದ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com