ಓವೈಸಿಗೂ ಜಿನ್ನಾಗೂ ಯಾವುದೇ ವ್ಯತ್ಯಾಸವಿಲ್ಲ: ಸಿ.ಟಿ.ರವಿ

ಓವೈಸಿಗೂ ಜಿನ್ನಾಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ಓವೈಸಿಗೂ ಜಿನ್ನಾಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಭಾರತ ಸರ್ಕಾರ ಸಿಎಎ ಕಾಯ್ದೆ ಹಿಂತೆಗೆದುಕೊಳ್ಳದಿದ್ದರೆ ರಕ್ತಪಾತವಾಗುತ್ತದೆ ಎಂಬ ಒವೈಸಿ ಹೇಳಿಕೆ ಖಂಡಿಸಿ ಬೆಂಗಳೂರಿನ ಬಿಜೆಪಿ ರಾಜ್ಯ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಸಿ.ಟಿ.ರವಿ ಮಾತನಾಡಿದರು.

ಸಂವಿಧಾನದಲ್ಲಿ ನಂಬಿಕೆ ಇರುವವರು ಹಿಂಸೆ - ರಕ್ತಪಾತದಲ್ಲಿ ನಂಬಿಕೆ ಇಟ್ಟಿರುವುದಿಲ್ಲ ಎಂದು ‌ಓವೈಸಿ ಹೇಳಿದ್ದಾರೆ. ಇವರ ಈ ಮಾತು ಕೇಳಿದರೆ ಓವೈಸಿಗೂ ಜಿನ್ನಾ ಅವರಿಗೂ ಯಾವುದೇ ವ್ಯತ್ಯಾಸವಿಲ್ಲ‌ ಎಂಬುದು ಸ್ಪಷ್ಟವಾಗುತ್ತದೆ.ಓವೈಸಿಗಳಾಡಿರುವ ಮಾತು ಹೊರದೇಶಗಳ ಮುಸಲ್ಮಾನರಿಗೂ ಪೌರತ್ವ ಕೊಡಬೇಕು ಎಂಬುದಾಗಿದೆ. ಎಲ್ಲರಿಗೂ ಪೌರತ್ವ ಕೊಡಬೇಕು ಎನ್ನುವುದಾದರೆ ಪಾಕಿಸ್ತಾನ,ಬಾಂಗ್ಲಾ,  ಅಪ್ಘಾನಿಸ್ತಾನ ರಾಷ್ಟ್ರಗಳು  ಇಸ್ಲಾಂ ರಾಷ್ಟ್ರ ಎಂದು ಘೋಷಿಸಿರುವುದನ್ನು ಕೈ ಬಿಡಬೇಕು.ಅಖಂಡ ಭಾರತ ಆಗಬೇಕು.‌ಆಗ ಎಲ್ಲರಿಗೂ ಪೌರತ್ವ ಸಿಗುತ್ತದೆ ಎಂದರು.

ಇದನ್ನೂ ಓದಿ: ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್! ವಿಡಿಯೋ ವೈರಲ್
 
ಸುಳ್ಳುಕೋರರಿಗೆ ಇಲ್ಲಿ ಜಾಗವಿಲ್ಲ. ಅವರ ಪರವಾಗಿ ಓವೈಸಿ ಮಾತನಾಡುತ್ತಿರುವುದು ಖಂಡನೀಯ. ಆ ರೀತಿಯ ರಕ್ತಪಾತಕ್ಕೆ ಇಲ್ಲಿ ಅವಕಾಶವಿಲ್ಲ.ರಕ್ತಪಾತ ನಡೆಯದಂತೆ ತಡೆಯುವ ಸಾಮರ್ಥ್ಯ ಭಾರತ ಸರ್ಕಾರಕ್ಕಿದೆ. ವಿರೋಧಾಭಾಸ ಎಂದರೆ ಇವರು ಸಮಾನ ನಾಗರಿಕ‌ಸಂಹಿತೆ ವಿರೋಧಿಸುತ್ತಾರೆ. ಅಂಬೇಡ್ಕರ್ ಅವರು ಸಮಾನ ನಾಗರಿಕ ಸಂಹಿತೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಇವರು ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ತರಬಾರದೆಂದು ಹೇಳುತ್ಯಾರೆ.‌ ಇಸ್ಲಾಮ್ ಕಾನೂನು ಪ್ರಕಾರ ಅವರಿಗೆ ಮೂರುಮೂರು ಮದುವೆ, ತಲಾಖ್  ಹೇಳುವುದಕ್ಕೆ ಇಸ್ಲಾಮ್ ಧರ್ಮ‌ಬೇಕು, ಸಮಾನ ನಾಗರಿಕ ಸಂಹಿತೆ ಮಾತ್ರ ಬೇಡವಾಗಿದೆ ಎಂದು ಸಿ.ಟಿ.ರವಿ ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com