ಕೊತ್ವಾಲ್ ರಾಮಚಂದ್ರ ಶಿಷ್ಯನಿಗೆ ಸಿದ್ದರಾಮಯ್ಯನವರ ಶಿಷ್ಯ ಪಡೆ ಖೆಡ್ಡಾ ತೋಡಲು ಸಜ್ಜಾಗಿದೆ: ಸಿಟಿ ರವಿ

ಕೊತ್ವಾಲ್ ರಾಮಚಂದ್ರ ಶಿಷ್ಯನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಅವರದೇ ಪಕ್ಷದ ಮುಖಂಡರು ಬಯಲು ಮಾಡಿದ್ದಾರೆ. ಅದು ಕೂಡ ಕೆಪಿಸಿಸಿ ಕಚೇರಿಯಲ್ಲಿ ಬಹಿರಂಗಪಡಿಸಿದ್ದಾರೆ.
ಸಿಟಿ ರವಿ
ಸಿಟಿ ರವಿ
Updated on

ಬೆಂಗಳೂರು: ಕೊತ್ವಾಲ್ ರಾಮಚಂದ್ರ ಶಿಷ್ಯನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಅವರದೇ ಪಕ್ಷದ ಮುಖಂಡರು ಬಯಲು ಮಾಡಿದ್ದಾರೆ. ಅದು ಕೂಡ ಕೆಪಿಸಿಸಿ ಕಚೇರಿಯಲ್ಲಿ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ಕೆಪಿಸಿಸಿಗೆ ಎಂತಹ ದುರ್ಗತಿ ಬಂದಿರಬಹುದು? ಎಂದು ಟ್ವೀಟ್ ಮೂಲಕ ಬಿಜೆಪಿ ನಾಯಕ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯನವರ ಶಿಷ್ಯ ಪಡೆ ಖೆಡ್ಡಾ ತೋಡಿದಂತಿದೆ. ಒಂದು ಕಡೆ ತಮ್ಮ ನಾಯಕರನ್ನು ಹೊಗಳುತ್ತಾರೆ. ಇನ್ನೊಂದು ಕಡೆ ನಿಮ್ಮನ್ನು ಬೆತ್ತಲೆ ಮಾಡಲು ಹೊರಟಂತಿದೆ. ಈಗ ಡಿಕೆಶಿ ಯಾವುದಕ್ಕೂ ಎಚ್ಚೆತ್ತುಕೊಳ್ಳುವುದು ಒಳಿತು ಎಂದು ಟ್ವೀಟ್ ಮಾಡಿ ಬಿಜೆಪಿ ನಾಯಕ ಸಿ.ಟಿ.ರವಿ ಸಲಹೆ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನಡೆಸುತ್ತಿರುವ ಕಲೆಕ್ಷನ್ ಗುಟ್ಟನ್ನು ಕೊನೆಗೂ  ಅವರದೇ ಪಕ್ಷದ ಮುಖಂಡರಾದ ವಿ.ಎಸ್.ಉಗ್ರಪ್ಪ ಮತ್ತು ಸಲೀಂ ಅಹಮ್ಮದ್ ಗುಸುಗುಸಿನಲ್ಲೇ ಜಗಜ್ಜಾಹೀರು ಮಾಡಿದ್ದಾರೆ. ಕಾಣದ ಕಲೆಕ್ಷನ್ ಇನ್ನು ಎಷ್ಟಿರಬಹುದು? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com