ತನಿಖೆ ಹೆಸರಲ್ಲಿ ಇಡಿಯಿಂದ ಪದೇ ಪದೇ ಹಿಂಸೆ: ಡಿಕೆ ಶಿವಕುಮಾರ್

ತನಿಖೆ ಹೆಸರಲ್ಲಿ ಜಾರಿನಿರ್ದೇಶನಾಲಯ ಪದೇ ಪದೇ ಹಿಂಸೆ ನೀಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ತನಿಖೆ ಹೆಸರಲ್ಲಿ ಜಾರಿನಿರ್ದೇಶನಾಲಯ ಪದೇ ಪದೇ ಹಿಂಸೆ ನೀಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಅವರು ಮತ್ತೆ ನೋಟಿಸ್ ಕೊಟ್ಟಿದ್ದಾರೆ.  ಜಾರಿ ನಿರ್ದೇಶನಾಲಯದವರು ಯಾಕೆ ಪದೇ ಪದೇ ಕರೆದು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ. 

'ಈ ಮೊದಲು ಒಮ್ಮೆ ಹೋಗಿ ಉತ್ತರ ಕೊಟ್ಟಿದ್ದೆ. ಈಗ ತನಿಖಾಧಿಕಾರಿ ಬದಲಾಗಿದ್ದಾರಂತೆ. ನನಗೆ ಮತ್ತು ನನ್ನ ಸಹೋದರ ಡಿ.ಕೆ ಸುರೇಶ್‌ಗೆ ಹಾಜರಾಗುವಂತೆ ನೋಟಿಸ್ ಬಂದಿದೆ. ಮೊದಲು ಇಡಿ ಅವರು ಕೆಲವು ದಾಖಲಾತಿಗಳನ್ನು ಕೇಳಿದ್ದರು. ಎಲ್ಲವನ್ನೂ ಕಳುಹಿಸುತ್ತೇನೆ ಇಡಿ ಹಾಗೂ ಸಿಬಿಐ ಒಂದೇ ವಿಚಾರಕ್ಕೆ ಎರಡು ಕೇಸ್ ಫೈಲ್ ಮಾಡಿದ್ದಾರೆ. ಹೀಗೆ ಮಾಡಲು ಬರುವುದಿಲ್ಲ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದೇನೆ ಎಂದು ಶಿವಕುಮಾರ್ ಹೇಳಿದರು.

ತುಮಕೂರಿನಲ್ಲಿ ಬಾಣಂತಿ, ಅವಳಿ ಮಕ್ಕಳ ಸಾವು; ಸರ್ಕಾರಕ್ಕೆ ಮಾನವೀಯತೆ ಇಲ್ಲ
ತುಮಕೂರಿನಲ್ಲಿ ಬಾಣಂತಿ, ಅವಳಿ ಮಕ್ಕಳ ಸಾವಿನ ಪ್ರಕರಣ ಸರ್ಕಾರದ ವೈಫಲ್ಯವನ್ನು ತೋರುತ್ತದೆ. ಸರ್ಕಾರಕ್ಕೆ ಮಾನವೀಯತೆ ಇಲ್ಲ, ಹಿಂದೆ ನಾನೊಮ್ಮೆ ಒಂದು ಮಾತನ್ನು ಹೇಳಿದ್ದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎನ್ನುವುದಕ್ಕೆ ಇದು ಸಾಕ್ಷಿ ಎಂದರು. 

ಸೋಲಾರ್‌ಪಾರ್ಕ್; ತನಿಖೆ ಮಾಡಲಿ
ಪಾವಗಡದ ಸೋಲಾರ್‌ಪಾರ್ಕ್ ಬಗ್ಗೆ ಇನ್ವೆಸ್ಟ್ ಕರ್ನಾಟಕದಲ್ಲಿ ಮೆಚ್ಚುಗೆ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಚರಿತ್ರೆಯನ್ನು ಯಾರೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ನಾನು ಏನು ಮಾಡಿದ್ದೇನೆ, ಎಷ್ಟು ಪ್ರಾಮಾಣಿಕತೆಯಿಂದ ಮಾಡಿದ್ದೇನೆ ಎಂಬುದು ಕೇಂದ್ರ ಸರ್ಕಾರಕ್ಕೂ ಗೊತ್ತಿದೆ. ಇಲ್ಲಿನ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಎಷ್ಟು ಗೊತ್ತಿದೆಯೋ ನನಗೆ ಗೊತ್ತಿಲ್ಲ. ಇವರು ದಾಖಲೆಗಳನ್ನು ಹೋಗಿ ನೋಡಲಿ. ಪ್ರಧಾನ ಮಂತ್ರಿಗಳೇ ನನಗೆ ಬಹುಮಾನ ಕೊಟ್ಟ ಫೋಟೊ ಕೂಡ ಬಿಡುಗಡೆ ಮಾಡುತ್ತೇನೆ. ಇದನ್ನು ಕರ್ನಾಟಕ ಮಾಡೆಲ್ ಎಂದು ಹೊಗಳಿದ್ದರು. ಇದರಲ್ಲಿ ನಾನು ತಪ್ಪು ಮಾಡಿದ್ದೇನೆ ಎಂದರೆ ತನಿಖೆ ಮಾಡಲಿ ಎಂದರು.

ಸೋಲಾರ್ ತನಿಖೆ ಬಿಡಿ, ಬೇರೆ ಬೇರೆ ಇಲಾಖೆಗಳಲ್ಲಿ ಬಿಜೆಪಿ ಸರ್ಕಾರ ಯಾವ ಯಾವ ಹಗರಣ ಮಾಡಿದೆ. ಬಿಟ್ ಕಾಯಿನ್ ಹಗರಣವನ್ನು ಹೇಗೆ ಮುಚ್ಚಿ ಹಾಕಿದರು. ಎಲ್ಲವೂ ಗೊತ್ತಿದೆ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com