ಬಸನಗೌಡ ಪಾಟೀಲ್ ಯತ್ನಾಳ್ ಬಳಿ ಬಿಜೆಪಿಯವರ ಎಲ್ಲಾ ವೀಕ್ನೆಸ್ ಇರುವಂತೆ ಕಾಣುತ್ತಿದೆ: ಎಂ.ಬಿ.ಪಾಟೀಲ್

ಬಸವನಗೌಡ ಯತ್ನಾಳ್ ಅವರು  ಕಳೆದ ಐದೂವರೆ ವರ್ಷಗಳಿಂದಲೂ ತಮ್ಮದೇ ನಾಯಕರ ವಿರುದ್ಧ ಒಂದಾದ ಮೇಲೆ ಒಂದರೊಂತೆ ಆರೋಪಗಳನ್ನು ಮಾಡುತ್ತಿದ್ಧಾರೆ.
ಎಂ.ಬಿ ಪಾಟೀಲ್
ಎಂ.ಬಿ ಪಾಟೀಲ್
Updated on

ಬೆಂಗಳೂರು:  ಬಸವನಗೌಡ ಯತ್ನಾಳ್ ಅವರು  ಕಳೆದ ಐದೂವರೆ ವರ್ಷಗಳಿಂದಲೂ ತಮ್ಮದೇ ನಾಯಕರ ವಿರುದ್ಧ ಒಂದಾದ ಮೇಲೆ ಒಂದರೊಂತೆ ಆರೋಪಗಳನ್ನು ಮಾಡುತ್ತಿದ್ಧಾರೆ. ಅವರ ವಿರುದ್ಧ ಕ್ರಮ ಜರುಗಿಸಲಾಗದಷ್ಟು  ಬಿಜೆಪಿ ಕರ್ನಾಟಕ ದುರ್ಬಲವಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಯತ್ನಾಳ್ ಆರೋಪಗಳು ಸತ್ಯವಾಗಿರಬೇಕು ಹೀಗಾಗಿಯೇ ಕ್ರಮ ಜರುಗಿಸಲು ಹೆದರುತ್ತಿದ್ದಾರೆ! ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು ಆರೋಪಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಗೂ ಯತ್ನಾಳ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಯತ್ನಾಳ್ ಬಳಿ ಬಿಜೆಪಿಯವರ ಎಲ್ಲಾ ವೀಕ್ನೆಸ್ ಇದ್ದಂತೆ ಕಾಣುತ್ತಿದೆ. ಯತ್ನಾಳ್ ಹಿಂದಿನಿಂದ ಹೇಳುತ್ತ ಬಂದಿರುವುದು ಎಲ್ಲವೂ ಸತ್ಯ. ಹೀಗಾಗಿಯೇ ಯತ್ನಾಳ್ ವಿರುದ್ಧ ಬಿಜೆಪಿಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಯಾವುದೇ ಶಿಸ್ತು ಕ್ರಮ ಆಗದೇ ಇರುವುದು ನೋಡಿದರೆ ಅವರ ಬಳಿ ಎಲ್ಲ ದಾಖಲೆ ಇದ್ದಂತೆ ಇದೆ.

ಸರ್ಕಾರ ಕೂಡ ತನಿಖೆ ಮಾಡ್ತಾ ಇದೆ. ಕೊರೊನಾ ಸಂದರ್ಭದಲ್ಲಿ ಗುತ್ತಿಗೆದಾರರ ಅಸೋಸಿಯೇಷನ್ ಆರೋಪ ಸೇರಿ ಎಲ್ಲ ತನಿಖೆ ಮಾಡುತ್ತೇವೆ. ಸರ್ಕಾರ ಸುಮ್ಮನೆ ಕುಳಿತಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com