ನಾನವನಲ್ಲ, ಆಡಿಯೋ ನಂದಲ್ಲ, ಅದು ಎಡಿಟೆಡ್- ಫೇಕ್; ವಿಡಿಯೋ ಬಿಟ್ಬಿಡ್ತಿರಿ ಆಡಿಯೋ ಹಿಡ್ಕೋತೀರಿ: ಯೋಗೇಶ್ವರ್ ಸಮಜಾಯಿಷಿ!

ಸ್ವಪಕ್ಷ ಬಿಜೆಪಿ ಹಾಗೂ ನಾಯಕರ ಬಗ್ಗೆ ಮಾತನಾಡಿದ ಆಡಿಯೋ ಬಹಿರಂಗಗೊಂಡ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಎಂಎಲ್ ಸಿ  ಸಿ.ಪಿ ಯೋಗೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಸಿ.ಪಿ ಯೋಗೇಶ್ವರ್
ಸಿ.ಪಿ ಯೋಗೇಶ್ವರ್
Updated on: 

ಬೆಂಗಳೂರು: ಸ್ವಪಕ್ಷ ಬಿಜೆಪಿ ಹಾಗೂ ನಾಯಕರ ಬಗ್ಗೆ ಮಾತನಾಡಿದ ಆಡಿಯೋ ಬಹಿರಂಗಗೊಂಡ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಎಂಎಲ್ ಸಿ  ಸಿ.ಪಿ ಯೋಗೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ವೈರಲ್ ಆಗುತ್ತಿರುವ ಆಡಿಯೋ ನನ್ನದಲ್ಲ. ಅದು ಎಡಿಟೆಡ್ ಫೇಕ್ ಆಡಿಯೋ. ನಾವು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೇವೆ. ನನಗೆ ಆತ್ಮವಿಶ್ವಾಸವಿದೆ. ನನಗೆ ವಿರೋಧಿಗಳು ಹೆಚ್ಚು ಇದೆಲ್ಲಾ ಅವರದ್ದೆ ಕೆಲಸ ಎಂದು ಸ್ಪಷ್ಟ ಪಡಿಸಿದ್ದಾರೆ. ವಿಡಿಯೋ ಬಿಟ್ಟು ಬಿಡ್ತಿರಿ ಆಡಿಯೋ ಹಿಡ್ಕೋತೀರಿ.

ನನ್ನ ವಿರೋಧಿಗಳ ಪ್ಲ್ಯಾನ್ ಇದಾಗಿದ್ದು, ದಿನ ಬೆಳಗಾದರೆ ಹೀಗೆಲ್ಲ ಮಾತಾಡುತ್ತಾರೆ. ಕುಮಾರಸ್ವಾಮಿ ವಿರುದ್ಧ ನಾನು ಗೆಲ್ಲುವ ವಿಶ್ವಾಸ ಇದೆ. ಕುಮಾರಸ್ವಾಮಿ ಕಳೆದ 5 ವರ್ಷ ಏನೂ ಮಾಡಿಲ್ಲ. ನೂರಕ್ಕೆ ನೂರು ನಾನೇ ಗೆಲ್ಲುತ್ತೇನೆ ಎಂದು ತಿಳಿಸಿದರು.

ನಾನು ಪಕ್ಷ ಸಂಘಟನೆ ಮಾಡಿ, ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನ ಮಾಡ್ತಿದ್ದೀನಿ, ನನಗೆ  ಇದರಿಂದ ಯಾವುದೇ ಡ್ಯಾಮೇಜ್ ಆಗೋಲ್ಲ, ಆತಂಕ ಇಲ್ಲ, ನನಗೆ ಜೀವನದಲ್ಲಿ ಆಸೆ ಇದೆ, ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಬೇಕೆಂದು ನಿರ್ದರಿಸಿದ್ದೇನೆ, ಅಂತಿಮವಾಗಿ ನಮ್ಮ ಜನ ತೀರ್ಮಾನ ಮಾಡುತ್ತಾರೆ, ಪ್ರತಿ ಹಳ್ಳಿಯಲ್ಲೂ ಪಾದಯಾತ್ರೆ ಮಾಡುತ್ತೇನೆ,  ನಾನು ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವ ಆತ್ಮ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com