ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ ಬಂದು ಎದೆ ಮೇಲೆ ಒದ್ದನಂತೆ 420 ಕುಮಾರ: HDK ವಿರುದ್ಧ ಕಾಂಗ್ರೆಸ್ ಕಿಡಿ

ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ ಬಂದು ಎದೆ ಮೇಲೆ ಒದ್ದನಂತೆ ಎನ್ನುವ ಆಡು ಮಾತಿನಂತೆ 420 ಕುಮಾರ ಅವರು ತಮ್ಮ ಹುಳುಕು ಹೊರಬಿದ್ದಾಗ ಎಗರಿ ಬೀಳುತ್ತಿದ್ದಾರೆ. ಕುಮಾರಸ್ವಾಮಿಯವರೇ ಸಾಯಿ ವೆಂಕಟೇಶ್ವರ ಕಂಪೆನಿಗೆ ಕಾನೂನುಬಾಹಿರವಾಗಿ ತಾವು ಗಣಿ ಗುತ್ತಿಗೆ ನೀಡಿದ್ದು ಏಕೆ?
ಕಾಂಗ್ರೆಸ್ ಸಾಂದರ್ಭಿಕ ಚಿತ್ರ
ಕಾಂಗ್ರೆಸ್ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ ಬಂದು ಎದೆ ಮೇಲೆ ಒದ್ದನಂತೆ ಎನ್ನುವ ಆಡು ಮಾತಿನಂತೆ 420 ಕುಮಾರ ಅವರು ತಮ್ಮ ಹುಳುಕು ಹೊರಬಿದ್ದಾಗ ಎಗರಿ ಬೀಳುತ್ತಿದ್ದಾರೆಂದು ಕೇಂದ್ರ ಸಚಿವ ಹೆಚ್'ಡಿ.ಕುಮಾರಸ್ವಾಮಿಯವರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಕಾಂಗ್ರೆಸ್, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದೆ. ಅಲ್ಲದೆ, ಹಲವು ಪ್ರಶ್ನೆಗಳನ್ನೂ ಮಾಡಿದೆ.

ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ ಬಂದು ಎದೆ ಮೇಲೆ ಒದ್ದನಂತೆ ಎನ್ನುವ ಆಡು ಮಾತಿನಂತೆ 420 ಕುಮಾರ ಅವರು ತಮ್ಮ ಹುಳುಕು ಹೊರಬಿದ್ದಾಗ ಎಗರಿ ಬೀಳುತ್ತಿದ್ದಾರೆ. ಕುಮಾರಸ್ವಾಮಿಯವರೇ ಸಾಯಿ ವೆಂಕಟೇಶ್ವರ ಕಂಪೆನಿಗೆ ಕಾನೂನುಬಾಹಿರವಾಗಿ ತಾವು ಗಣಿ ಗುತ್ತಿಗೆ ನೀಡಿದ್ದು ಏಕೆ? ನಿಮ್ಮ ಈ ಹಗರಣದ ಬಗ್ಗೆ ನಿಮ್ಮ ದೋಸ್ತಿ ನಾಯಕರಾದ ಯಡಿಯೂರಪ್ಪನವರೇ ಸದನದಲ್ಲಿ ಆರೋಪ ಮಾಡಿದ್ದಾರೆ, ಅದಕ್ಕೆ ತಮ್ಮ ಉತ್ತರವೇನು?ಲೋಕಾಯುಕ್ತದ ಪತ್ರ ಹೇಗೆ ಹೊರಬಿತ್ತು ಎಂದು ಕೇಳುವ ತಮ್ಮ ಡೋಂಗಿ ಪಾರದರ್ಶಕತೆ ಬಯಲಾಗಿದೆಯಲ್ಲವೇ?

ಕಾಂಗ್ರೆಸ್ ಸಾಂದರ್ಭಿಕ ಚಿತ್ರ
ಗಂಡಸ್ತನದ ರಾಜಕೀಯ ಮಾಡು, ನಪುಂಸಕನ ಕೆಲಸ ಮಾಡಬೇಡ; ನನ್ನನ್ನ ಕೆಣಕಿದರೇ ಹುಷಾರ್: ಡಿಕೆಶಿಗೆ HDK ವಾರ್ನಿಂಗ್

ಟೆಂಡರ್ ಅಧಿಕಾರಿಗಳು ಕೊಟ್ಟಿದ್ದು, ನಾನು ಕೇವಲ ರೆಕಮೆಂಡ್ ಮಾಡಿದ್ದು ಎನ್ನುತ್ತಿದ್ದೀರಿ, ಮುಖ್ಯಮಂತ್ರಿ ರೆಕಮೆಂಡ್ ಮಾಡಿದ್ದಕ್ಕೆ ಅಧಿಕಾರಿಗಳು ಮಣೆ ಹಾಕಿದ್ದಾರೆ ಎನ್ನುವುದನ್ನು ಏಕೆ ಮರೆಮಾಚುವಿರಿ? ದಶಕದ ಹಿಂದಿನ ಹಗರಣದ ವಿಷಯ ಈಗ ಕೆದಕಿದ್ದು ತಪ್ಪು ಎಂಬಂತೆ ಮಾತಾಡುತ್ತಿದ್ದೀರಿ, ದಶಕದ ಹಿಂದೆ ಸಿದ್ದರಾಮಯ್ಯನವರ ಕುಟುಂಬಕ್ಕೆ ಬಿಜೆಪಿ ಸರ್ಕಾರವೇ ಇದ್ದಾಗ ಮಂಜೂರಾದ ಸೈಟ್ ಗಳ ಬಗ್ಗೆ ತಾವು ಈಗ ಕೆದಕಿದ್ದೀರಿ, ಏಕೆ? ಈ ಹಿಂದೆ ಇದೇ ನಿಮ್ಮ ರೆಕಮೆಂಡೇಷನ್ ಸಹಿ ನನ್ನದಲ್ಲ ಎಂದು ಸುಳ್ಳು ಹೇಳಿದ್ದಿರಿ ಅಲ್ಲವೇ?

420 ಕುಮಾರ ಅವರೇ, ನಿಮ್ಮ ಸಾಚಾತನದ ಮುಖವಾಡ ನಾಡಿನ ಜನರ ಮುಂದೆ ಕಳಚಿದೆ, ರಾಜೀನಾಮೆ ಯಾವಾಗ ಕೊಡುವಿರಿ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಕೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com