

ಚಿತ್ರದುರ್ಗ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಆನೆ ಹೋಗ್ತಿದೆ ಎಂದ್ರೆ ನಾಯಿ ಬೊಗಳುತ್ತದೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳೋದಕ್ಕೆ ಆಗಲ್ಲ ಎಂದು ಹೇಳಿದ್ದರು.
ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಕುಮಾರಸ್ವಾಮಿ ಅವರ “ಆನೆ ಹೋಗ್ತಿದೆ ಎಂದ್ರೆ ನಾಯಿ ಬೊಗಳುತ್ತದೆ” ಎಂಬ ಹೇಳಿಕೆಗೆ ಸಚಿವ ಎಚ್ ಸಿ ಬಾಲಕೃಷ್ಣ ಅವರು ಖಡಕ್ ತಿರುಗೇಟು ನೀಡಿದ್ದಾರೆ.
ಡಿಕೆ ಶಿವಕುಮಾರ್ ಆನೆ ಇದ್ದಂತೆ, ಬಾಕಿಯವರು ನಾಯಿ ಇದ್ದಂತೆ. ಕುಮಾರಸ್ವಾಮಿ ಹಾಗೇ ಹೇಳಿದರೆ ನಮ್ಮದೂ ಅದೇ ರೀತಿ ಉತ್ತರ ಇರುತ್ತದೆ ಎಂದು ಬಾಲಕೃಷ್ಣ ಕಿಡಿಕಾರಿದರು.
ಡಿ.ಕೆ. ಶಿವಕುಮಾರ ಆನೆಯಂತೆ ಹೋಗುತ್ತಾರೆ, ಬಾಕಿಯವರು ನಾಯಿಯಂತೆ ಬೊಗಳುತ್ತಾರೆ. ಕುಮಾರಸ್ವಾಮಿಯೇ ಆ ಪದ ಬಳಸಿದ್ದಕ್ಕೆ ನಾನು ಹೇಳುತ್ತಿದ್ದೇನೆ. ಇಲ್ಲದಿದ್ದರೆ ನಾನು ಹೀಗೆ ಹೇಳುತ್ತಿರಲಿಲ್ಲ ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದರು.