ಆಯುಧ ಕಾರಣ

ಆಯುಧ ಕಾರಣ
Updated on: 

ವಿಜ್ಞಾನಿಗಳನ್ನು ಕಾಡುತ್ತಿದ್ದ ಬಹುವರ್ಷಗಳ ಸಮಸ್ಯೆಗೆ ಇದೀಗ ಪರಿಹಾರ ಸಿಕ್ಕಿದೆ. ಎರಡು ವರ್ಷಗಳ ಹಿಂದೆ ಸಿಕ್ಕಿದ 1.4 ದಶಲಕ್ಷ ವರ್ಷಗಳ ಪುರಾತನ ಎಲುಬಿನ ಸಂಶೋಧನೆಯಿಂದ ಮನುಷ್ಯನ ಕೈ ಯಾವ ರೀತಿ ಕ್ರಮಬದ್ಧವಾಗಿ ವಿಕಾಸ ಹೊಂದಿತು ಎನ್ನುವುದನ್ನು ತಿಳಿಸಿದೆ. ವಿಜ್ಞಾನಿಗಳಿಗೆ ಬೆರಳುಗಳು ಮತ್ತು ಮಣಿಗಂಟಿನ ನಡುವೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎನ್ನುವುದು ನಿಗೂಢವಾಗಿಯೇ ಉಳಿದಿತ್ತು.
ಹಿಂದೆ ಮನುಷ್ಯ ಹೆಬ್ಬೆರಳು ಮತ್ತು ಇತರ ಬೆರಳುಗಳು ಯಾವ ರೀತಿ ಬಳಸಿ ಕಾರ್ಯನಿರ್ವಹಿಸುತ್ತಿದ್ದ? ವಸ್ತುಗಳನ್ನು ಯಾವ ರೀತಿ ತಯಾರು ಮಾಡುತ್ತಿದ್ದ, ಬಳಸುತ್ತಿದ್ದ ಎನ್ನುವುದು ರಹಸ್ಯವಾಗಿಯೇ ಉಳಿದಿತ್ತು. ಶಿಲಾಕೊಡಲಿ ಆತ ಕಂಡುಹಿಡಿದ ಮೊದಲ ಆಯುಧವಾಗಿತ್ತು. ಕೈ ಕೊಡಲಿ ಬಳಸಿ ಹಲವಾರು ಕೆಲಸಗಳನ್ನು ಆತ ಮಾಡುತ್ತಿದ್ದ.  2010ರಲ್ಲಿ ಕೀನ್ಯಾದಲ್ಲಿ ಅಲ್ಲಿನ ರಾಷ್ಟ್ರೀಯ ಮ್ಯೂಸಿಯಂ ತಂಡವೊಂದು ಎಲುಬನ್ನು ಅನ್ವೇಷಿಸಿತು.
ಮಿಸ್ಸೋರಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದರು. ಅಂಗೈ ಮತ್ತು ಬೆರಳುಗಳ ನಡುವೆ ಯಾವುದೇ ಸಂಪರ್ಕ ಇಲ್ಲದೇ ಯಾವ ರೀತಿ ಅಂದಿನ ಮನುಷ್ಯ ಕೆಲಸ ಮಾಡುತ್ತಿದ್ದ ಎನ್ನುವ ಸಮಸ್ಯೆಗೆ ಈ ಎಲಬು ಪರಿಹಾರವಾಗಿತ್ತು.
ವಾಷಿಂಗ್ಟನ್‌ನ ಸ್ಮಿಥ್‌ಸೋನಿಯನ್ ಇನ್ಸ್‌ಟಿಟ್ಯೂಷನ್‌ನ ರಿಚರ್ಡ್ ಪಾಟ್ಸ್, ಪುರಾತನ ಮಾನವ ಕೈಬೆರಳನ್ನು ಯಾವ ರೀತಿ ನೇರವಾಗಿ ನಿಲ್ಲಿಸುತ್ತಿದ್ದ ಎನ್ನುವುದಕ್ಕೆ ಸಾಕ್ಷ್ಯ ಸಿಕ್ಕಿದಂತಾಗಿದೆ ಎಂದಿದ್ದಾರೆ.
ಅರಿಜೋನಾ ಸ್ಟೇಟ್ ಯುನಿವರ್ಸಿಟಿಯ ವಿಜ್ಞಾನಿ ಡಾ. ಮೇರಿ ಮಾರ್ಜೆಕ್, ಈ ಕುರಿತಂತೆ 'ನ್ಯೂ ಸೈಂಟಿಸ್ಟ್‌' ವೃತ್ತ ಪತ್ರಿಕೆಗೆ ತಿಳಿಸಿ, ಇದೊಂದು ಅತ್ಯುತ್ತಮ ಅವಶೇಷವಾಗಿದ್ದು, ನಮ್ಮ ಪೂರ್ವಜರಿಂದಾಗಿ ಹಸ್ತ ಯಾವ ರೀತಿ ಕ್ರಮಬದ್ಧವಾಗಿ ವಿಕಾಸ ಹೊಂದಿತು ಎಂದು ತಿಳಿಸುತ್ತದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com