ಕೆಲವ ವರ್ಷಗಳಲ್ಲಿ ಎಲ್ಲರ ಮನೆಯಲ್ಲಿ ಡ್ರೋನ್: ಭಾರತ ಮೂಲದ ನಾಸಾ ವಿಜ್ಞಾನಿ

ನೂತನ ಸ್ಮಾರ್ಟ್ ಫೋನ್ ಬಿಡುಗಡೆಯಾದ ಕೂಡಲೆ ಕೊಂಡುಕೊಳ್ಳಬೇಕೆಂಬ ತೀವ್ರ ಆಸೆಯನ್ನು ಅತಿ ಶೀಘ್ರದಲ್ಲೇ ಡ್ರೋನ್ ಹೊಂದಬೇಕೆಂಬ ಉತ್ಸಾಹ ಬದಲಾಯಿಸುತ್ತದೆ...
ಡ್ರೋನ್ ಮಾದರಿಯೊಂದರ ಚಿತ್ರ
ಡ್ರೋನ್ ಮಾದರಿಯೊಂದರ ಚಿತ್ರ
Updated on: 

ವಾಶಿಂಗ್ಟನ್: ನೂತನ ಸ್ಮಾರ್ಟ್ ಫೋನ್ ಬಿಡುಗಡೆಯಾದ ಕೂಡಲೆ ಕೊಂಡುಕೊಳ್ಳಬೇಕೆಂಬ ತೀವ್ರ ಆಸೆಯನ್ನು ಅತಿ ಶೀಘ್ರದಲ್ಲೇ ಡ್ರೋನ್ ಹೊಂದಬೇಕೆಂಬ ಉತ್ಸಾಹ ಬದಲಾಯಿಸುತ್ತದೆ ಎಂದು ನಾಸಾದ ಭಾರತೀಯ ಮೂಲದ ವಿಜ್ಞಾನಿ ಪರಿಮಳ್ ಕೋಪಡೇಕರ್ ತಿಳಿಸಿದ್ದಾರೆ.

ಇನ್ನು ೫ರಿಂದ ೧೦ ವರ್ಷಗಳೊಳಗೆ ಪ್ರತಿ ಮನೆಯೂ ಡ್ರೋನ್ ಹೊಂದಿರುತ್ತದೆ ಎಂದು ನಾಸಾದ ಸಮಾವೇಶವೊಂದರಲ್ಲಿ ಅವರು ತಿಳಿಸಿದ್ದಾರೆ.

"ಎಲ್ಲರ ಮನೆಯಲ್ಲಿ ಡ್ರೋನ್ ಇರುವ ಸಮಯವನ್ನು ನಾನು ಊಹಿಸಿಕೊಳ್ಳಬಲ್ಲೆ" ಎಂದು ಅವರು ತಿಳಿಸಿದ್ದಾರೆ.

ನೀವು ಮಹಡಿಯ ಮೇಲೆ ತಪಾಸಣೆ ನಡೆಸಲು, ಹತ್ತಿರದ ಅಂಗಡಿಯಿಂದ ಸ್ಕ್ರ್ಯೂ ಡ್ರೈವರ್ ತರಲು ಡ್ರೋನ್ ಬಳಸಲಿದ್ದೀರಿ ಎಂದು ಕೂಡ ಅವರು ಹೇಳಿದ್ದಾರೆ.

ಡ್ರೋನ್ ಎಂದು ಕರೆಯಲಾಗುವ ಈ ಮಾನವರಹಿತ ಲಘು ವಿಮಾನಗಳ ಉಪಯುಕ್ತತೆ ವಿಜ್ಞಾನಿಗಳಿಗೆ ತಿಳಿದಿದೆ. ಇದು ಹೆಚ್ಚೆಚ್ಚು ಬಳಕೆಯಾದಂತೆ ಡ್ರೋನ್ ಗಳು ಜನಪ್ರಿಯವಾಗಿ ಆಕಾಶ ಮಾರ್ಗಗಳಲ್ಲಿ ದಟ್ಟನೆ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗೂಗಲ್, ಅಮೆಜಾನ್, ಲಾಕೀಡ್ ಮಾರ್ಟಿನ್,  ರೆಯ್ತಿಯಾನ್, ಏರ್ವೇರ್, ಡ್ರೋನ್ ಡಿಪ್ಲಾಯ್, ಮ್ಯಾಟರ್ನೆಟ್, ಸಿಸ್ಕೋ ಮತ್ತು ವೆರಿಜಾನ್ ಈ ಕಂಪನಿಗಳ ಜೊತೆ ಕೈಜೋಡಿಸಿ ನಾಸಾ, ವಾಯು ವಾಹನ ದಟ್ಟನೆ ನಿಯಂತ್ರಣ ಯೋಜನೆಯನ್ನು ಅಭಿವೃದ್ಧಿಪಡಿಸಲು ಹೆಜ್ಜೆಯಿಟ್ಟಿದೆ.

ನಮ್ಮ ಜೊತೆ ೧೨೫ ಸಂಸ್ಥೆಗಳು ಕೈಜೋಡಿಸಿವೆ ಮತ್ತು ಇದೆ ಬೆಳೆಯುತ್ತಿದೆ ಎಂದು ಕೋಪಡೇಕರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com