ಏತನ್ಮಧ್ಯೆ, ಸೈಬರ್ ದಾಳಿಯ ಬಗ್ಗೆ ನಾಸಾ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿ ಆ ದೊಡ್ಡ ರಹಸ್ಯವನ್ನು ನಾವು ಹೇಳುವುದಿಲ್ಲ, ಇದರ ಬಗ್ಗೆ ವಿವರಿಸಲು ನಿಮಗೆ ನಾವು ಅವಕಾಶವನ್ನು ನೀಡುತ್ತೇವೆ ಎಂದು ಹ್ಯಾಕರ್‌ಗಳು ಹೇಳುತ್ತಿದ್ದಾರೆ. ಆಪರೇಷನ್ ಸೆನ್ಸರ್‌ಶಿಪ್ ಎಂಬ ಅಭಿಯಾನದ ಅಂಗವಾಗಿ ತಾವು ನಾಸಾ ವಿರುದ್ಧ ಸೈಬರ್ ದಾಳಿ ನಡೆಸಿದ್ದೇವೆ ಎಂದು ಹ್ಯಾಕರ್‌ಗಳು ಹೇಳಿದ್ದು, ಅಮೆರಿಕದ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ವಿರುದ್ಧವೂ ಸೈಬರ್ ದಾಳಿ ನಡೆಸುವುದಾಗಿ ಈ ಹ್ಯಾಕರ್‌ಗಳು ಬೆದರಿಕೆಯೊಡ್ಡಿದ್ದಾರೆ. ಏಪ್ರಿಲ್ 1 ರಂದು ಟ್ರಂಪ್ ವಿರುದ್ಧ ಸೈಬರ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.