ವಿಜ್ಞಾನ-ತಂತ್ರಜ್ಞಾನ

ಹೊಸದಾಗಿ ಪತ್ತೆಯಾದ ಮೀನಿಗೆ ಬರಾಕ್ ಒಬಾಮ ಹೆಸರು!

ಹವಾಯಿಯನ್ ಕರಾವಳಿ ಪ್ರದೇಶದಲ್ಲಿ ಹೊಸದಾಗಿ ಪತ್ತೆಯಾಗಿದ್ದ ಮೀನಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹೆಸರನ್ನು ನಾಮಕರಣ ಮಾಡಲು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.

ಹೊಸದಾಗಿ ಪತ್ತೆಯಾದ ಮೀನಿಗೆ ಬರಾಕ್ ಒಬಾಮ ಹೆಸರು!
ಬರಾಕ್ ಒಬಾಮ
Published On :

ವಾಷಿಂಗ್ ಟನ್ಹವಾಯಿಯನ್ ಕರಾವಳಿ ಪ್ರದೇಶದಲ್ಲಿ ಹೊಸದಾಗಿ ಪತ್ತೆಯಾಗಿದ್ದ ಮೀನಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹೆಸರನ್ನು ನಾಮಕರಣ ಮಾಡಲು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.

ಹವಾಯಿ ರಾಷ್ಟ್ರೀಯ ಸ್ಮಾರಕ(ಪಾಪಾನೊಮ್ಮೌವ್ಕುಕಿ ಸಾಗರ ರಾಷ್ಟ್ರೀಯ ಸ್ಮಾರಕ) ಪ್ರದೇಶವನ್ನು ವಿಸ್ತರಿಸಿದ ಅಮೆರಿಕ ಅಧ್ಯಕ್ಷರ ಕ್ರಮವನ್ನು ಗೌರವಿಸುವುದಕ್ಕಾಗಿ ವಿಜಾನಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹವಾಯಿ ರಾಷ್ಟ್ರೀಯ ಸ್ಮಾರಕ ಪ್ರದೇಶದ ವಿಸ್ತೀರ್ಣವನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ವಿಸ್ತರಿಸಿದ ಪರಿಣಾಮ ರಾಷ್ಟ್ರೀಯ ಸ್ಮಾರಕದ ವಿಸ್ತೀರ್ಣತೆ ಮೂಲ ವಿಸ್ತೀರ್ಣತೆಗಿಂತ ನಾಲ್ಕುಪಟ್ಟು ಹೆಚ್ಚಾಗಿದ್ದು 582,578 ಚದರ ಮೀಟರ್ ನಷ್ಟಾಗಿದೆ. ಹವಾಯಿ ರಾಷ್ಟ್ರೀಯ ಸ್ಮಾರಕ ಪ್ರದೇಶದಲ್ಲಿ 300 ಅಡಿ ಆಳದಲ್ಲಿ ಮೆರೂನ್ ಹಾಗೂ ಚಿನ್ನದ  ಬಣ್ಣದ ಮೀನೊಂದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು.

ಹೊಸದಾಗಿ ಪತ್ತೆಯಾಗಿರುವ ಮೀನಿನ ಬಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಚುನಾವಣಾ ಪ್ರಚಾರದ ಲಾಂಛನದ ಬಣ್ಣವನ್ನು ಹೋಲುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಜಲಚಾರವೊಂದಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹೆಸರನ್ನು ನಾಮಕರಣ ಮಾಡುತ್ತಿರುವುದು ಇದೆ ಮೊದಲಲ್ಲ. 2012 ರಲ್ಲಿ ಟೆನ್ನೆಸ್ಸೀ ನದಿಯಲ್ಲಿ ಪತ್ತೆಯಾಗಿದ್ದ ಮೀನಿಗೆ ಎಥಿವ್ ಸ್ತೋವ ಒಬಾಮ ಎಂದು ನಾಮಕರಣ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.