ಮಂಗಳ ಯಾನಕ್ಕಾಗಿ ಒಂದು ಲಕ್ಷಕ್ಕೂ ಅಧಿಕ ಭಾರತೀಯರ ಹೆಸರು ನೋಂದಣಿ!

ಭೂಮಿಯೊಂದಿಗೆ ಹೋಲಿಕೆ ಮಾಡಲಾಗುತ್ತಿರುವ ಮಂಗಳ ಗ್ರಹ ಯಾನಕ್ಕಾಗಿ ಈಗಾಗಲೇ ಭಾರತದಿಂದ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ತಮ್ಮ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭೂಮಿಯೊಂದಿಗೆ ಹೋಲಿಕೆ ಮಾಡಲಾಗುತ್ತಿರುವ ಮಂಗಳ ಗ್ರಹ ಯಾನಕ್ಕಾಗಿ ಈಗಾಗಲೇ ಭಾರತದಿಂದ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ತಮ್ಮ ತಮ್ಮ  ಹೆಸರುಗಳನ್ನು ನೋಂದಣಿ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಬಗ್ಗೆ ಮಾಹಿತಿ ನೀಡಿದ್ದು, ನಾಸಾದ ಬಹು ಉದ್ದೇಶಿತ ಮಂಗಳಯಾನಕ್ಕೆ ವಿಶ್ವಾದ್ಯಂತ ಈ ವರೆಗೂ ಸುಮಾರು 24, 29,807 ಮಂದಿ ನೋಂದಣಿ ಮಾಡಿಸಿದ್ದು, ಈ ಪೈಕಿ ಭಾರತ  ದೇಶವೊಂದರಲ್ಲೇ ಸುಮಾರು 1,38,899 ಭಾರತೀಯರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಈ ಬಗ್ಗೆ ಆಂಗ್ಲ ಧೈನಿಕವೊಂದು ವರದಿ ಮಾಡಿದ್ದು, ಭಾರತ ಮಾತ್ರವಲ್ಲದೇ ಅಮೆರಿಕದ 6,76,773 ಮಂದಿ ಮತ್ತು ಚೀನಾದ 2,62,752 ಮಂದಿ ನಾಸಾದ ಈ ಯಾನಕ್ಕೆ ಹೆಸರು ನೋಂದಾಯಿಸಿದ್ದು, ನಂತರದ ಹೆಚ್ಚು ಹೆಸರು  ನೋಂದಾಯಿಸಿದವರಲ್ಲಿ ಭಾರತೀಯರಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಂಗಳಯಾನ ಯೋಜನೆ ಯಶಸ್ಸು ಕಂಡ ಕ್ಷಣದಿಂದ ಭಾರತೀಯರಲ್ಲಿ ಮಂಗಳ ಗ್ರಹದ ಕುರಿತ ಕೌತುಕ ಹೆಚ್ಚಾಗಿದ್ದು, ಇದೇ ಕಾರಣಕ್ಕೆ  ನಾಸಾದ ಈ ಯೋಜನೆಗೆ ನಾ ಮುಂದು ತಾಮುಂದು ಎಂಬಂತೆ ಹೆಸರು ನೊಂದಾಯಿಸಿದ್ದಾರೆ.
ಇನ್ನು ನಾಸಾದ ಈ ಯೋಜನೆಗೆ ಹೆಸರು ನೊಂದಾಯಿಸುವ ಪ್ರಕ್ರಿಯೆ ಕಳೆದ ವಾರ ಮುಕ್ತಾಯವಾಗಿದ್ದು, ಕಡೆಯ ದಿನಾಂಕದ ಬಳಿಕ ಬರುವ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗುತ್ತದೆ ಎಂದು ನಾಸಾ ತಿಳಿಸಿದೆ. ಅಂತೆಯೇ ನಿಗದಿತ  ದಿನಾಂಕದೊಳಗೆ ಹೆಸರು ನೊಂದಾಯಿಸಿಕೊಂಡಿರುವವರಿಗೆ ಆನ್‌ಲೈನ್ ಬೋರ್ಡಿಂಗ್ ಪಾಸ್ ಕಳುಹಿಸಲಾಗುತ್ತದೆ ಎಂದು ನಾಸಾ ತಿಳಿಸಿದೆ.
ನಾಸಾ ಈ ಯೋಜನೆಗಾಗಿ ಇನ್‌ಸೈಟ್ (ಇಂಟೀರಿಯರ್ ಎಕ್ಸ್‌ಪ್ಲೋರೇಷನ್ ಯೂಸಿಂಗ್ ಸಿಸ್ಮಿಕ್ ಇನ್ವೆಸ್ಟಿಗೇಷನ್, ಜಿಯೋಡೆಸಿ ಆ್ಯಂಡ್ ಹೀಟ್ ಟ್ರಾನ್ಸ್‌ಪೋರ್ಟ್) ವಿಶೇಷ ವಿಮಾನವನ್ನುಸಿದ್ಪಡಿಸಿದ್ದು, ಇದೇ ವಿಮಾನದ ಮೂಲಕ  ಪ್ರಯಾಣಿಕರನ್ನು ಆಗಸಕ್ಕೆ ರವಾನಿಸುತ್ತದೆ. ಮುಂಬರುವ ಮೇ 5ಕ್ಕೆ ಹೊರಡುವ ಈ ನಾಸಾದ ವಿಶೇಷ ವಿಮಾನ, ನವೆಂಬರ್ 26, 2018ರಂದು ಮಂಗಳ ಗ್ರಹವನ್ನು ತಲುಪಲಿದೆ. 720 ದಿನಗಳ ಈ ಯಾನದಲ್ಲಿ ಮಂಗಳ ಗ್ರಹದ  ಆಂತರಿಕ ಕಂಪನಗಳ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ ಅಂತೆಯೇ ನಮ್ಮ ಸೌರವ್ಯೂಹದಲ್ಲಿಯೇ ಹೆಚ್ಚು ಕಲ್ಲಿರುವ, ಅಂತರಿಕ್ಷದಲ್ಲಿ ನಕ್ಷತ್ರಗಳ ಹಿನ್ನೆಲೆಯಲ್ಲಿ ಕೆಂಪಗೆ ಹೊಳೆಯುವ ಏಕೈಕ ಗ್ರಹವಾದ ಮಂಗಳ ಗ್ರಹದ ಇತರೆ ಗುಣಗಳ  ಬಗ್ಗೆಯೂ ಈ ಪ್ರವಾಸದಲ್ಲಿ ಅಧ್ಯಯನ ನಡೆಸಲಾಗುವುದು ಎಂದು ನಾಸಾದ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com