ಬ್ರಿಟನ್ ನ ಹೊಸ 50 ಪೌಂಡ್ ನೋಟಿನಲ್ಲಿ ಭಾರತೀಯ ವಿಜ್ಞಾನಿ ಜಗದೀಶ್ ಚಂದ್ರ ಬೋಸರ ಭಾವಚಿತ್ರ?

2020 ಕ್ಕೆ ಪ್ರಕಟವಾಗಲಿರುವ ಬ್ರಿಟನ್ ನ 50 ಪೌಂಡ್ ಮುಖಬೆಲೆಯ ಹೊಸ ನೋಟಿನ ಮೇಲೆ ಮುದ್ರಣವಾಗಲಿರುವ ಭಾವಚಿತ್ರಕ್ಕಾಗಿ 100 ವಿಜ್ಞಾನಿಗಳ ಭಾವಚಿತ್ರವನ್ನು ಅಂತಿಮಗೊಳಿಸಲಾಗಿದ್ದು ....
ಬ್ರಿಟನ್ ನ ಹೊಸ 50 ಪೌಂಡ್ ನೋಟಿನಲ್ಲಿ ಭಾರತೀಯ ವಿಜ್ಞಾನಿ ಜಗದೀಶ್ ಚಂದ್ರ ಬೋಸರ ಭಾವಚಿತ್ರ?
ಬ್ರಿಟನ್ ನ ಹೊಸ 50 ಪೌಂಡ್ ನೋಟಿನಲ್ಲಿ ಭಾರತೀಯ ವಿಜ್ಞಾನಿ ಜಗದೀಶ್ ಚಂದ್ರ ಬೋಸರ ಭಾವಚಿತ್ರ?
Updated on: 
2020 ಕ್ಕೆ ಪ್ರಕಟವಾಗಲಿರುವ ಬ್ರಿಟನ್ ನ 50 ಪೌಂಡ್ ಮುಖಬೆಲೆಯ ಹೊಸ ನೋಟಿನ ಮೇಲೆ ಮುದ್ರಣವಾಗಲಿರುವ ಭಾವಚಿತ್ರಕ್ಕಾಗಿ 100 ವಿಜ್ಞಾನಿಗಳ ಭಾವಚಿತ್ರವನ್ನು ಅಂತಿಮಗೊಳಿಸಲಾಗಿದ್ದು ಪಟ್ಟಿಯಲ್ಲಿ ಭಾರತದ ಭೌತವಿಜ್ಞಾನಿ ಮತ್ತು ಶರೀರವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ರ ಭಾವಚಿತ್ರವೂ ಆಯ್ಕೆಯಾಗಿದೆ. 
ಬ್ಯಾಂಕ್ ಆಫ್ ಇಂಗ್ಲೆಂಡ್ ಮುಂಬರುವ 50 ಪೌಂಡ್ ಮುಖಬೆಲೆಯ ಹೊಸ ನೋಟಿನ ಮೇಲೆ ಬ್ರಿಟೀಶ್ ಸೈನ್ಸ್ ಗೆ ಕೊಡುಗೆ ನೀಡಿದ ಖ್ಯಾತ ವಿಜ್ಞಾನಿಗಳ ಭಾವಚಿತ್ರವನ್ನು ಮುದ್ರಿಸಲು ಮುಂದಾಗಿದ್ದು, ಸ್ಟೀಫನ್ ಹಾಕಿಂಗ್ ಸೇರಿದಂತೆ ಹಲವರ ಭಾವಚಿತ್ರವನ್ನು ಪರಿಗಣಿಸಿದೆ. ಈ ವರೆಗೂ ಒಟ್ಟಾರೆ 174,112 ನಾಮನಿರ್ದೇಶನಗಳು ಬಂದಿದ್ದು, ಮೊದಲ ಹಂತದಲ್ಲಿ ಅರ್ಹ  ವಿಜ್ಞಾನಿಗಳ ಪಟ್ಟಿಯನ್ನು ತಯಾರಿಸುತ್ತಿದೆ. ಈ ಪೈಕಿ ಭಾರತದ ಬಂಗಾಳದಲ್ಲಿ 1858 ರಲ್ಲಿ ಜನಿಸಿದ್ದ ವಿಜ್ಞಾನಿ ಜಗದೀಶ್ ಚಂದ್ರ ಬೋಸರ ಭಾವಚಿತ್ರವೂ ಆಯ್ಕೆಯಾಗಿದೆ ಎಂದು ತಿಳಿದುಬಂದಿದೆ. 
ಯುನಿವರ್ಸಿಟಿ ಆಫ್ ಕೇಂಬ್ರಿಡ್ಜ್ ಗೂ ಜಗದೀಶ್ ಚಂದ್ರ ಬೋಸರಿಗೂ ವಿಶೇಷವಾದ ನಂಟು ಇದ್ದು ವಿದೇಶದಲ್ಲಿ ವ್ಯಾಸಂಗ ಮುಗಿಸಿದ್ದ ಬೋಸರು 1884 ರಲ್ಲಿ ಕೇಂಬ್ರಿಡ್ಜ್ ವಿವಿಯಿಂದ ಪದವಿ ಪಡೆದು ಭಾರತಕ್ಕೆ ಬಂದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com