ಸೆಲ್ಫಿಗೊಂದು ಶಾಲೆ..!

ಸ್ಮಾರ್ಟ್ ಫೋನ್ ಅಭಿವೃದ್ಧಿಯಾದಂತೆಯೇ ಸೆಲ್ಫೀ ಎಂಬ ಸಮೂಹ ಸನ್ನಿಯ ಬೆನ್ನಿಗೆ ಬಿದ್ದಿರುವ ಯುವ ಪಡೆ ಎಲ್ಲೆಂದರಲ್ಲಿ ಹುಚ್ಚುಚ್ಚಾಗಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ.
ಸೆಲ್ಫಿ ಫೋಟೋ ನಿರತ ಯುವ ಜನತೆ (ಸಾಂದರ್ಭಿಕ ಚಿತ್ರ)
ಸೆಲ್ಫಿ ಫೋಟೋ ನಿರತ ಯುವ ಜನತೆ (ಸಾಂದರ್ಭಿಕ ಚಿತ್ರ)
Updated on: 

ಸೆಲ್ಫಿಗಾಗಿ ಪ್ರತ್ಯೇಕ ಕೋರ್ಸ್ ಆರಂಭಿಸಿದ ಸಿಟಿ ಲಿಟ್ ಕಾಲೇಜು
ಸ್ಮಾರ್ಟ್ ಫೋನ್ ಅಭಿವೃದ್ಧಿಯಾದಂತೆಯೇ ಸೆಲ್ಫೀ ಎಂಬ ಸಮೂಹ ಸನ್ನಿಯ ಬೆನ್ನಿಗೆ ಬಿದ್ದಿರುವ  ಯುವ ಪಡೆ ಎಲ್ಲೆಂದರಲ್ಲಿ ಹುಚ್ಚುಚ್ಚಾಗಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ.

ಈ ಪೈಕಿ ಅನೇಕರು ಸೆಲ್ಫಿ ಕಲೆಯನ್ನು ಕರಗತ ಮಾಡಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿ, ಅಂತಿಮವಾಗಿ ಹೇಗೋ ಸೆಲ್ಫಿ ಕ್ಲಿಕ್ಕಿಸುತ್ತಾರೆ. ಅಂತಹವರಿಗೆಂದೇ ಬ್ರಿಟನ್ನಿನ ಕಾಲೇಜೊಂದು ಸೆಲ್ಫಿ ಕ್ಲಿಕ್ಕಿಸುವ ಕಲೆಯನ್ನು ಕಲಿಸುತ್ತೇವೆ  ಎಂದು ಘೋಷಣೆ ಮಾಡಿದೆ.  

ಲಂಡನ್ ಮೂಲದ ಸಿಟಿ ಲಿಟ್ ಕಾಲೇಜು ಮೊದಲ ಬಾರಿಗೆ ಇದೇ ಮಾರ್ಚ್‌ನಿಂದ ಸೆಲ್ಫಿ ಕೋರ್ಸ್ ಪರಿಚಯಿಸುತ್ತಿದ್ದು, ಕೋರ್ಸ್ ಗೆ 'ದಿ ಆರ್ಟ್ ಆಫ್ ಪೋಟೊಗ್ರಾಫಿಕ್ ಸೆಲ್ಫ್-ಪೊಟ್ರೈಚರ್' ಎಂದು ಹೆಸರಿಸಲಾಗಿದೆ.  ಒಂದು ತಿಂಗಳ ಅವಧಿಯ ಕೋರ್ಸ್ ಇದಾಗಿದ್ದು, ಸೆಲ್ಫಿ ಪೋಟೊಗ್ರಫಿಯಲ್ಲಿ ನ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಂಡು ಉತ್ತಮಪಡಿಸಿಕೊಳ್ಳಲು ಉಪನ್ಯಾಸ ಮತ್ತು ವಿಚಾರ ಸಂಕಿರಣಗಳನ್ನೂ ಏರ್ಪಡಿಸಲಾಗಿದೆ.

ವಿದ್ಯಾರ್ಥಿಗಳ ಸ್ಥಳಾವಕಾಶ, ಜಾಗ,ಆವರಣ,ಬೆಳಕಿನ ಬಳಕೆ, ಹೊಸ ಚಿಂತನೆಗಳ ಅಳವಡಿಕೆ, ತಮ್ಮ ಕೆಲಸ ಒಳಗೊಳ್ಳುವ ಮಹತ್ವದ ವಿವರಗಳನ್ನು ವಿವರಿಸುವುದು ಹೇಗೆಂದು ಛಾಯಾಗ್ರಾಹಕರು ಕಲಿಯಬಹುದು ಎಂದು 'ದಿ ಟೆಲಿಗ್ರಾಫ್' ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com