1998ರಲ್ಲಿ ಈಕೆ ಅಮ್ಮನನ್ನು ಹುಡುಕಲು ಆರಂಭಿಸಿದ್ದು, ಕೊನೆಗೆ ಮಹಾರಾಷ್ಟ್ರದ ಒಂದು ಗ್ರಾಮದಲ್ಲಿ ಈಕೆಗೆ ಅಮ್ಮ ಸಿಕ್ಕಿದಳು. ದತ್ತು ಪತ್ರದಲ್ಲಿ ಅಮ್ಮನ ಹೆಸರು ಮತ್ತು ಅಜ್ಜನ ಹೆಸರು ಮಾತ್ರ ಇತ್ತು. 2014ರಲ್ಲಿ ಬೆಲ್ಜಿಯಂನಲ್ಲಿ ಪ್ರಧಾನ ಕಾರ್ಯಾಲಯವನ್ನು ಹೊಂದಿರುವ ಎಗೈನ್ಸ್ಟ್ ಚೈಲ್ಡ್ ಟ್ರಾಫಿಕಿಂಗ್ ಸಂಸ್ಥೆಯನ್ನು ಭೇಟಿಯಾಗಿದ್ದು, ಅಲ್ಲಿಂದ ಈಕೆಗೆ ಸಹಾಯ ಲಭಿಸಿತ್ತು. ಆಗಸ್ಟ್ ತಿಂಗಳಲ್ಲಿ ಅಮ್ಮನ ಫೋಟೋ ಸಹಿತ ಆಕೆಯನ್ನು ಪತ್ತೆ ಹಚ್ಚಿದ್ದೇವೆ ಎಂದು ಸಂಸ್ಥೆ ಎಲಿಜಬೆತ್‌ಗೆ ಇಮೇಲ್ ಬಂದಿತ್ತು. ಹಾಗೆ ಅಮ್ಮನನ್ನು ನೋಡಲು ಬಂದಾಗ ಮೊದಲ ಭೇಟಿಯಲ್ಲಿ ಇಬ್ಬರೂ ಮೌನದ ಮೊರೆ ಹೋಗಿದ್ದರು. ಜೀವನದಲ್ಲಿ ಮತ್ತೆಂದೂ ಮಗಳನ್ನು ಭೇಟಿಯಾಗಲು ಸಾಧ್ಯವೇ ಇಲ್ಲ ಎಂದು ಭಾವಿಸಿದ್ದ ಅಮ್ಮನ ಮುಂದೆ ಆ ಮಗಳು ನಿಂತಿದ್ದಾಳೆ. ಆಕೆಯ ಹಾವ, ಭಾವ, ನಗು ಎಲ್ಲದರಲ್ಲೂ ಅಮ್ಮನದ್ದೇ ಛಾಪು!