ಭಾರತ ೬೮ ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಹಿನ್ನಲೆಯಲ್ಲಿ, ಅಂತರ್ಜಾಲ ಸರ್ಚ್ ತಂತ್ರಜ್ಞ ದೈತ್ಯ ಗೂಗಲ್ ತ್ರಿವರ್ಣ ಹೊಂದಿರುವ ದೊಡ್ಡ ಮೈದಾನದ ತುಂಬಾ ತುಂಬಿರುವ ಜನರ ಚಿತ್ರಿಸಿ ಡೂಡಲ್
ನವದೆಹಲಿ: ಭಾರತ ೬೮ ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಹಿನ್ನಲೆಯಲ್ಲಿ, ಅಂತರ್ಜಾಲ ಸರ್ಚ್ ತಂತ್ರಜ್ಞ ದೈತ್ಯ ಗೂಗಲ್ ತ್ರಿವರ್ಣ ಹೊಂದಿರುವ ದೊಡ್ಡ ಮೈದಾನದ ತುಂಬಾ ತುಂಬಿರುವ ಜನರ ಚಿತ್ರಿಸಿ ಡೂಡಲ್ ಬಿಡಿಸಿ ಮುಖಪುಟದಲ್ಲಿ ಪ್ರಕಟಿಸಿದೆ.
ಅಂತರ್ಜಾಲ ದೈತ್ಯ ಸಂಸ್ಥೆ ಹಲವು ವರ್ಷಗಳಿಂದ ಈ ದಿನಕ್ಕೆ ವಿಶೇಷ ಚಿತ್ರ ಪ್ರಕಟಿಸುತ್ತ ಬಂದಿದೆ. ಕಳೆದ ವರ್ಷ ಬಿ ಎಸ್ ಎಫ್ ನಡಿಗೆಯ ಚಿತ್ರವನ್ನು ಬಿಡಿಸಿತ್ತು.
೬೮ ನೇ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾರತದ ಮಿಲಿಟರಿ ಶಕ್ತಿ, ಸಾಧನೆಗಳು ಮತ್ತು ವೈವಿಧ್ಯ ಸಂಸ್ಕೃತಿಗಳನ್ನು ಪ್ರದರ್ಶಿಸಲಾಗಿದೆ.
ಇಂದಿನ ಗಣರಾಜ್ಯೋತ್ಸವ ಪೆರೇಡ್ ಗೆ ಅಬು ಧಾಭಿ ಯುವರಾಜ ಮೊಹಮದ್ ಬಿನ್ ಜಾಯೆದ್ ನಹ್ಯಾನ್ ಅವರು ವಿಶೇಷ ಅತಿಯಾಗಿ ಭಾಗವಹಿಸಿದ್ದರು.