ಚಿರತೆಯೊಡನೆ ಹೋರಾಡಿ ಮುದ್ದು ಮಗಳ ಜೀವ ಉಳಿಸಿದ ತಾಯಿ!

ತನ್ನ ಮುದ್ದು ಮಗಳು ಚಿರತೆಗೆ ಬಲಿಯಾಗುವುದನ್ನು ತಪ್ಪಿಸುವ ಸಲುವಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿ ಮಗಳ ಪ್ರಾಣ ರಕ್ಷಿಸಿದ ತಾಯಿಯ ರೋಚಕ ಕಥೆ ಇದು.
ಚಿರತೆಯೊಡನೆ ಹೋರಾಡಿ ಮುದ್ದು ಮಗಳ ಜೀವ ಉಳಿಸಿದ ತಾಯಿ!
ಚಿರತೆಯೊಡನೆ ಹೋರಾಡಿ ಮುದ್ದು ಮಗಳ ಜೀವ ಉಳಿಸಿದ ತಾಯಿ!
Updated on: 
ಕೊಯಮತ್ತೂರ್(ತಮಿಳುನಾಡು): ತನ್ನ ಮುದ್ದು ಮಗಳು ಚಿರತೆಗೆ ಬಲಿಯಾಗುವುದನ್ನು ತಪ್ಪಿಸುವ ಸಲುವಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿ ಮಗಳ ಪ್ರಾಣ ರಕ್ಷಿಸಿದ ತಾಯಿಯ ರೋಚಕ ಕಥೆ ಇದು.
ತಮಿಳುನಾಡಿನ ವಾಲ್ಪಾರೈ ಎಂಬಲ್ಲಿ ಈ ಪ್ರಕರಣ ನಡೆದಿದೆ. ಮುತ್ತುಲಕ್ಷ್ಮಿ (30) ಆ ಸಾಹಸ ಮೆರೆದ ತಾಯಿಯಾಗಿದ್ದು ಈಕೆಯ ಮಗಳು ಸತ್ಯಾ (11) ಶುಕ್ರವಾರ ರಾತ್ರಿ ಮನೆಯ ಹಿಂದೆ ಉರುವಲಿಗಾಗಿ ಕಟ್ಟಿಗೆ ಸಂಗ್ರಹಿಸುತ್ತಿದ್ದ ವೇಳೆ ಚಿರತೆಯೊಂದು ಬಂದಿತ್ತು. ಅದು ಬಾಲಕಿಯ ಕತ್ತಿಗೆ ಬಾಯಿ ಹಾಕಿ ಎಳೆದಾಡುತ್ತಿದ್ದದ್ದು ಕಂಡ ಅವಳ ತಾಯಿ ಹೆದರದೆ ತನ್ನ ಕೈನಲ್ಲಿದ್ದ ಕಟ್ಟಿಗೆಗಳಿಂದ ಚಿರತೆ ಮೇಲೆ ಪ್ರಹಾರ ನಡೆಇಸಿದ್ದಾಳೆ.
ಈಕೆಯ ಹೊಡೆತಗಳನ್ನು ಸಹಿಸದ ಚಿರತೆ ಬಾಲಕಿ ಸತ್ಯಾಳನ್ನು ಬಿಟ್ಟು ಪರಾರಿಯಾಗಿದೆ. ಕುತ್ತಿಗೆ ಭಾಗಕ್ಕೆ ಬಲವಾದ ಗಾಯಗಳಾಗಿದ್ದ ಸತ್ಯಾಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದ್ದು ಇದೀಗ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಚಿರತೆ ದಾಳಿ ಪ್ರಕರಣ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು ಚಿರತೆಯನ್ನು ಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಳೆದ ಹತ್ತಕ್ಕೂ ಹೆಚ್ಚು ದಿನಗಳಿಂದ ಈ ಗ್ರಾಮದ ಸುತ್ತ ಮುತ್ತ ಚಿರತೆ ದಾಳಿಗಳು ನಡೆಯುತ್ತಿದೆ ಎನ್ನಲಾಗಿದ್ದು ಹಲವಾರು ಮುಗ್ದ ಪಶುಗಳು ಈ ಚಿರತೆಗೆ ಬಲಿಯಾಗಿದೆ.
ಇದಕ್ಕೂ ಮುನ್ನ ಸುಮಾರು 15 ದಿನಗಳ ಹಿಂದೆ ಕಂಚಮಲೈ ನಲ್ಲಿ ಮಹಿಳೆಯೊಬ್ಬರು ಇದೇ ಬಗೆಯ ಚಿರತೆ ದಾಳಿಗೆ ಸಿಕ್ಕು ಸಾವನ್ನಪ್ಪಿದ್ದರು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com