ಬ್ಲ್ಯಾಕ್ ಫಂಗಸ್ ಗೆ ಔಷಧಿ ಕಂಡುಹಿಡಿದ ಕರಾವಳಿ ಕನ್ನಡಿಗ ಶ್ರೀಕಾಂತ್ ಪೈ!

ಕೋವಿಡ್ 19 ಎರಡನೇ ಅಲೆ ಸಮಯದಲ್ಲಿ ಬ್ಲ್ಯಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ನೀಡಲು ಅತ್ಯಂತ ಪರಿಣಾಮಕಾರಿ ಔಷಧಿಗಳಲ್ಲಿ ಒಂದು ಲಿಪೊಸೋಮಲ್ ಆಂಫೊಟೆರಿಸಿನ್ ಬಿ. ಈ ಔಷಧವನ್ನು ಸಂಶೋಧಿಸಿದ್ದು ಕರಾವಳಿ ಕನ್ನಡಿಗರಾದ ಶ್ರೀಕಾಂತ್ ಪೈ ಎಂಬ ಸಂಶೋಧಕ ಎನ್ನುವುದು ನಮ್ಮೆಲ್ಲರ ಹೆಮ್ಮೆ.
ಶ್ರೀಕಾಂತ್ ಪೈ
ಶ್ರೀಕಾಂತ್ ಪೈ
Updated on: 

ಕುಂದಾಪುರ: ಕೋವಿಡ್ 19 ಎರಡನೇ ಅಲೆ ಸಮಯದಲ್ಲಿ ಮತ್ತೊಂದು ಸಮಸ್ಯೆಯಾಗಿ ಬ್ಲ್ಯಾಕ್ ಫಂಗಸ್ ಕೋವಿಡ್ ಪೀಡಿತರನ್ನು ಬಿಡದೆ ಕಾಡುತ್ತಿದೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಅತ್ಯಂತ ಪರಿಣಾಮಕಾರಿ ಔಷಧಿಗಳಲ್ಲಿ ಒಂದು ಲಿಪೊಸೋಮಲ್ ಆಂಫೊಟೆರಿಸಿನ್ ಬಿ. ಈ ಔಷಧವನ್ನು ಸಂಶೋಧಿಸಿದ್ದು ಕರಾವಳಿ ಕನ್ನಡಿಗರಾದ ಶ್ರೀಕಾಂತ್ ಪೈ ಎಂಬ ಸಂಶೋಧಕ ಎನ್ನುವುದು ನಮ್ಮೆಲ್ಲರ ಹೆಮ್ಮೆ.

ಕರಾವಳಿ ಕರ್ನಾಟಕದ ಕನ್ನಡಿಗ ಬಾಂಡ್ಯ ಶ್ರೀಕಾಂತ್ ಪೈ ಭಾರತ್ ಸೀರಮ್ ವ್ಯಾಕ್ಸೀನ್ ಲಿ. ಸಂಸ್ಥೆಯ ಸಂಶೋಧಕರ ತಂಡವನ್ನು ಮುನ್ನಡೆಸುತ್ತಿದ್ದು ಕೊರೋನಾಗೆ ಸೂಕ್ತ ಔಷಧಿ ಕಂಡುಹಿಡಿಯಲು ಶ್ರಮಿಸುತ್ತಿದ್ದಾರೆ. ಶ್ರೀಕಾಂತ್ ಪೈ ಕುಂದಾಪುರದ ಗಂಗೊಳ್ಳಿಯವರಾಗಿದ್ದು  1975 ರಲ್ಲಿ ಬೆಂಗಳೂರಿನಲ್ಲಿ ಬಿಫಾರ್ಮಾ ಕೋರ್ಸ್ ಮಾಡಿ 1977 ರಲ್ಲಿ ಮಣಿಪಾಲ್‌ನಿಂದ ಎಂಫಾರ್ಮಾ ಪದವಿಯನ್ನು ಪಡೆದಿದ್ದಾರೆ. ಕುಂದಾಪುರ ಹಾಗೂ ಗಂಗೊಳ್ಳಿಯಲ್ಲಿ ಅವರು ಪ್ರೌಢಶಾಲೆ, ಪಿಯು ವ್ಯಾಸಂಗ ಮಾಡಿದ್ದಾರೆ.

ಶಿಕ್ಷಣದ ನಂತರ ಅವರು ಮುಂಬೈನ ಭಾರತ್ ಸೀರಮ್ಸ್ ವ್ಯಾಕ್ಸೀನ್ ಲಿ. ಗೆ ಸೇರಿದರು.

ವಿವಿಧ ಸಂಶೋಧನಾ ಯೋಜನೆಗಳೊಂದಿಗೆ ತೊಡಗಿಸಿಕೊಂಡ ನಂತರ, ಶ್ರೀಕಾಂತ್ ನೇತೃತ್ವದ ತಂಡವು 2012 ರಲ್ಲಿ ಆಂಫೊಟೆರಿಸಿನ್ ಎನ್ನುವ ಔಷಧಿಯ ಸಾಮಾನ್ಯ ಸ್ವರೂಪವನ್ನು ಅಭಿವೃದ್ಧಿಪಡಿಸಿತು. ಲಿಪೊಸೋಮಲ್ ಆಂಫೊಟೆರಿಸಿನ್ ಬಿಅನ್ನು ಅದರ ಪರಿಣಾಮಕಾರಿತ್ವ ಮತ್ತು ಆರ್ಸೆನಿಕ್ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ವ್ಯಾಪಕವಾಗಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಬ್ಲ್ಯಾಕ್ ಫಂಗಸ್ ಸೋಂಕಿಗೆ ಚಿಕಿತ್ಸೆ ನೀಡಲು ವೈದ್ಯರು ಶಿಫಾರಸು ಮಾಡುವ ಅತ್ಯಂತ ಜನಪ್ರಿಯ ಔಷಧಿಯಾಗಿ ಇದು ಹೊರಹೊಮ್ಮಿದೆ. ಇದರ ಬೆಲೆ 6,000 ರಿಂದ 7,000 ರೂ. ಇದೆ.

ಇತರ ಸಾಂಪ್ರದಾಯಿಕ ಔಷಧಿಯೊಂದಿಗೆ ಹೋಲಿಸಿದರೆ, ಅದೇ ತಂಡವು ಅಭಿವೃದ್ಧಿಪಡಿಸಿದ ಔಷಧಿ ಪ್ರಯೋಗಗಳು, ಪ್ರಾಣಿಗಳ ಮೇಲಿನ ಆಂಫೊಟೆರಿಸಿನ್ ಬಿ ಲಿಪಿಡ್ ಕಾಂಪ್ಲೆಕ್ಸ್ (ಅಬೆಲ್ಸೆಟ್) ಔಷಧವು 20 ಪಟ್ಟು ಹೆಚ್ಚು ಸುರಕ್ಷಿತವಾಗಿದೆ. ಇದು 3,000 ದಿಂದ 3,500 ರೂ.ವರೆಗೆ ಲಭ್ಯವಿದೆ. ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಆಂಫೊಟೆರಿಸಿನ್ ಬಿ ಎಮಲ್ಷನ್ ಎಂಬ ಮತ್ತೊಂದು ಔಷಧಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಅದಕ್ಕಾಗಿ ಪೇಟೆಂಟ್ ಪಡೆಯಲಾಗಿದೆ. ಇತರ ಸಾಂಪ್ರದಾಯಿಕ ಉತ್ಪನ್ನಗಳಿಗೆ ಹೋಲಿಸಿದರೆ, ಈ ಉತ್ಪನ್ನದ ಬೆಲೆ ಕೇವಲ 2,000 ರೂ. ಈ ಔಷಧಿಯು ನೂರು ಪಟ್ಟು ಸುರಕ್ಷಿತವಾಗಿದೆ ಎಂದು ವರದಿ ಹೇಳಿದೆ.

ಶ್ರೀಕಾಂತ್ ನೇತೃತ್ವದ ಅದೇ ತಂಡವು ಭಾರತ್ ಸೀರಮ್ಸ್ ವ್ಯಾಕ್ಸೀನ್ ಲಿ. ನಲ್ಲಿ ಕೆಲಸ ಮಾಡುವ ವೇಳೆ ಇದುವರೆಗೆ ನಾಲ್ಕು ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಿದೆ. ಇದು ಪರಿಣಾಮಕಾರಿತ್ವ, ಸುರಕ್ಷತೆ ಮತ್ತು ಆರ್ಸೆನಿಕ್ ಪ್ರೊಫೈಲ್‌ಗಳಿಗೆ ಸಂಬಂಧಪಟ್ಟಂತೆ ಉನ್ನತ ಸ್ಥಾನದಲ್ಲಿದೆ. ಈ ಉತ್ಪನ್ನಗಳು ಮಾರಕ ಕಾಯಿಲೆಯ ರೋಗಿಗಳಿಗೆ ವರದಾನವೆಂದು ಸಾಬೀತಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com