ಕಲ್ಲಿದ್ದಲು ತ್ಯಾಜ್ಯದಿಂದ ಅತ್ಯಾಕರ್ಷಕ ಆಭರಣ ಸೃಷ್ಟಿ: ಭಾರತೀಯ ವಿಜ್ಞಾನಿಗಳ ಸಾಧನೆ

ಕಲ್ಲಿದ್ದಲನ್ನು ಆಭರಣವಾಗಿ ಧರಿಸುವ ಯೋಚನೆ ನಮ್ಮಲ್ಲನೇಕರಿಗೆ ಹುಚ್ಚುತನದ ಪರಮಾವಧಿ ಎನ್ನಿಸಬಹುದು. ಅದರೆ, ಅದನ್ನು ಸಂಶೋಧಕರು ಸಾಧ್ಯವಾಗಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಂಚಿ: ಕಲ್ಲಿದ್ದಲನ್ನು ಆಭರಣವಾಗಿ ಧರಿಸುವ ಯೋಚನೆ ನಮ್ಮಲ್ಲನೇಕರಿಗೆ ಹುಚ್ಚುತನದ ಪರಮಾವಧಿ ಎನ್ನಿಸಬಹುದು. ಅದು ಸಹಜವೂ ಕೂಡಾ. ಕಲ್ಲಿದ್ದಲು, ಇಂಧನ ಕ್ಷೇತ್ರದಲ್ಲಿ ಅಗತ್ಯ ಖನಿಜ ಎಂದು ಹೆಸರು ಮಾಡಿದೆ. 

ಆದರೆ. ಕಲ್ಲಿದ್ದಲು ತನ್ನ ರೂಪ ಮತ್ತು ಬಣ್ಣದ ಕಾರಣದಿಂದ ಆಕರ್ಷಕವಾಗಿಲ್ಲದೇ ಇರುವುದರಿಂದ ಅದನ್ನು ಆಭರಣವನ್ನಾಗಿ ಉಪಯೋಗಿಸಲು ಆಗುವುದಿಲ್ಲ. ಆದರೆ ಈ ಅಭಿಪ್ರಾಯವನ್ನು ಹೋಗಲಾಡಿಸಿದರೆ? ಅದರ ರೂಪ ಬದಲಾವಣೆ ಮಾಡಿ ಆಕರ್ಷಕವಾಗಿ ರೂಪುಗೊಳಿಸಿದರೆ? ಅದನ್ನು ಸಂಶೋಧಕರು ಸಾಧ್ಯವಾಗಿಸಿದ್ದಾರೆ. 

ಜಾರ್ಖಡ್ ನ ಧನ್ಬಾದ್ ನಲ್ಲಿನ ಕೇಂದ್ರೀಯ ಗಣಿಗಾರಿಕೆ ಮತ್ತು ಇಂಧನ ಸಂಶೋಧನಾ ಸಂಸ್ಥೆಯಲ್ಲಿನ ಸಂಶೋಧಕರು ಕಲ್ಲಿದ್ದಲಿನಿಂದ ಆಭರಣಗಳನ್ನು ತಯಾರಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ. 

ಕಲ್ಲಿದ್ದಲಿನಿಂದ ತಯಾರಾಗುವ ಅಲಂಕಾರಿಕ ಸಾಮಗ್ರಿ ಹಗುರ ಮಾತ್ರವಲ್ಲದೆ ದೀರ್ಘ ಬಾಳಿಕೆಯನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕಲ್ಲಿದ್ದಲ ತ್ಯಾಜ್ಯದಿಂದ ಆಭರಣಗಳನ್ನು ಸಂಶೋಧಕರು ರೂಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com