ಪ್ರಾಜೆಕ್ಟ್ ದಿಯಾ: ಗುಜರಿ ಸೈಕಲ್ ಗಳನ್ನೇ ರೀಸೈಕಲ್ ಮಾಡುವ ಸನಾತನ ಸೆಲ್ವಂ
ಹೈದರಾಬಾದ್: ಕಸ ತ್ಯಾಜ್ಯ, ಪ್ಲಾಸ್ಟಿಕ್ ಉತ್ಪನ್ನಗಳನ್ನು ರೀಸೈಕಲ್ ಮಾಡುವುದನ್ನು ಕೇಳಿರುತ್ತೀರಾ, ನೋಡಿಯೂ ಇರುತ್ತೀರಾ. ಸೈಕಲನ್ನೇ ರೀಸೈಕಲ್ ಮಾಡುವ ಹವ್ಯಾಸ ಇರುವ ವ್ಯಕ್ತಿಗಳನ್ನು ಯಾವತ್ತಾದರೂ ನೋಡಿದ್ದೀರಾ? ಮೀಟ್ ಸನಾತನ ಸೆಲ್ವನ್. ಅವರು ಹಳೆಯ ಸೈಕಲ್ ಗಳನ್ನು ರೀಸೈಕಲ್ ಮಾಡುವ ಅಭಿಯಾನವನ್ನು ಹಮ್ಮಿಕೊಂಡವರು.
ಸನಾತನ ಸೆಲ್ವನ್ ಅವರ ಅಭಿಯಾನದ ಹೆಸರು ಪ್ರಾಜೆಕ್ಟ್ ದಿಯಾ. ಹೈದರಾಬಾದ್ ನಿವಾಸಿಯಾಗಿರುವ ಅವರು ನಗರದಾದ್ಯಂತ ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ತುಕ್ಕು ಹಿಡಿದ ಸೈಕಲ್ಗಳು, ಬಳಕೆಯಾಗದೆ ಎಸೆಯಲ್ಪಟ್ಟ ಸೈಕಲ್ ಗಳನ್ನು ಆರಿಸಿ ತಂದು ಅದಕ್ಕೆ ಮರು ಜೀವ ಕೊಡುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ.
ಸೆಲ್ವನ್ ಅವರ ಜೊತೆಯಲ್ಲಿ ಸೈಕಲ್ ಪಟುಗಳು ಹಾಗೂ ತಾಂತ್ರಿಕ ನೈಪುಣ್ಯ ಇರುವ 8 ಮಂದಿಯ ಸ್ವಯಂಸೇವಕರ ತಂಡವಿದೆ. ಅವರಿಂದ ಮರುಹುಟ್ಟು ಪಡೆದ ಸೈಕಲ್ ಗಳನ್ನು ಅಗತ್ಯ ಇರುವವರಿಗೆ ಉಚಿತವಾಗಿ ನೀಡಲಾಗುತ್ತದೆ.
ಪೇಪರ್ ಬಾಯ್ ಗಳು, ಬಸ್ ಅಥವಾ ಅಟೋದಲ್ಲಿ ಕೆಲಸಕ್ಕೆ ಹೋಗುವಷ್ಟು ಹಣವಿಲ್ಲದೆ ಕಾಲ್ನಡಿಗೆಯಲ್ಲಿ ತೆರಳುವ ಕಾರ್ಮಿಕರು ಮತ್ತಿತರ ಅಶಕ್ತ ವರ್ಗದ ಮಂದಿಗೆ ಉಚಿತವಾಗಿ ಈ ಸೈಕಲ್ ಗಳನ್ನು ನೀಡಲಾಗುತ್ತಿದೆ ಎನ್ನುವುದು ಮೆಚ್ಚತಕ್ಕ ವಿಷಯ.
Related Article
ಮನೆಯಡಿ ಅವಿತಿದ್ದ 90 ವಿಷಪೂರಿತ ಹಾವುಗಳು: ಬೆಚ್ಚಿಬಿದ್ದ ಮನೆ ಮಾಲೀಕ
ದಸರಾ ಇನ್ ದುಬೈ: ಒಂಟೆಗಳ ನಾಡಲ್ಲಿ ಮೈಸೂರಿನವಳ ಕಂತೆ ಕಂತೆ ನೆನಪು
21ನೇ ವಯಸ್ಸಿಗೇ ಪಂಚಾಯಿತಿ ಅಧ್ಯಕ್ಷ ಗಾದಿ: ತಮಿಳುನಾಡು ಯುವತಿಯ 'ಅನು' ಸಾಧನೆ
ಸೈಕಲೇರಿ ದಿಲ್ಲಿವರೆಗೂ ಟೀ ಮಾರಿದ ಮಲಯಾಳಿ ಚಾಯ್ ವಾಲಾ
ಕೇರಳ: ತರಬೇತುಗೊಂಡ 22 ಮಹಿಳಾ ಅರ್ಚಕರು ಪೂಜಾ ಕೈಂಕರ್ಯ ನೆರವೇರಿಸಲು ಸಿದ್ಧ
ಸೆಲಬ್ರಿಟಿಗಳ ಮಕ್ಕಳು ಖುಷಿಯಾಗಿರುತ್ತಾರೆ ಅನ್ಕೊಂಡಿದ್ದೀರಾ? ಅದು ಸುಳ್ಳು: ಸಿದ್ಧಾರ್ಥ ಮಲ್ಯ


