ದೋಣಿಯೇ ಈ ಮಕ್ಕಳ ಪಾಠಶಾಲೆ: ಪ್ರವಾಹಪೀಡಿತ ಬಿಹಾರದಲ್ಲಿ ಮೂವರು ಯುವಕರ ಸಾಧನೆ
ಪಾಟ್ನಾ: ಬಿಹಾರದ ಕತಿಹಾರ್ ಎಂಬಲ್ಲಿ ಪ್ರವಾಹ ತಲೆದೋರಿ ಶಾಲೆ, ಮನೆಗಳೆಲ್ಲಾ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಪರಿಸ್ಥಿತಿಯಲ್ಲಿ ಮೂವರು ಪದವೀಧರ ಯುವಕರು ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಹೊಸದೊಂದು ಮಾರ್ಗ ಕಂಡುಕೊಂಡಿದ್ದಾರೆ. ತೇಲುವ ದೋಣಿಯನ್ನೇ ಶಾಲೆಯನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ.
ಬಯಲಲ್ಲಿ, ಉದ್ಯಾನವನದಲ್ಲಿ ಪಾಠ ಮಾಡುವುದನ್ನು ನಾವೆಲ್ಲರೂ ನೋಡಿಯೇ ಇರುತ್ತೇವೆ. ಆದರೆ ಪ್ರವಾಹಪೀಡಿತ ಕತಿಹಾರ್ ಗ್ರಾಮದ ಮೂವರು ಪದವೀಧರ ಯುವಕರು ದೋಣಿ ಮೇಲೆ ಒಂದರಿಂದ ಎಸ್ಸೆಸ್ಸೆಲ್ಸಿ ತನಕದ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದಾರೆ.
ಈ ಗ್ರಾಮಕ್ಕೆ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುವುದು ಸಾಮಾನ್ಯ. ಆ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ಮುಚ್ಚಲ್ಪಡುತ್ತವೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮೊದಲೇ ತೊಂದರೆಗೊಳಗಾಗಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಬಾರದಂತೆ ಪ್ರವಾಹ ಪರಿಸ್ಥಿತಿ ನಡುವೆ ಪಾಠ ಪ್ರವಚನ ಮುಂದುವರಿದಿದೆ. ರವೀಂದ್ರ ಕುಮಾರ್, ಪಂಕಜ್ ಕುಮಾರ್ ಮತ್ತು ಕುಂದನ್ ಕುಮಾರ್ ಎಂಬುವವರೇ ಆ ಮೂವರು ಯುವಕರು.
ಪಾಠ ಹೇಳಿಕೊಡುತ್ತಿರುವುದಕ್ಕೆ ಯುವಕರು ಯಾವುದೇ ಶುಲ್ಕ ಪಡೆಯುತ್ತಿಲ್ಲ, ಇದು ಸಂಪೂರ್ಣ ಉಚಿತ.
Related Article
ಈ ಜಿಲ್ಲೆಯ ಎಲ್ಲಾ 118 ಪಂಚಾಯಿತಿಗಳಲ್ಲಿ ಗ್ರಂಥಾಲಯ: ಜಾರ್ಖಂಡ್ ಜಮ್ತಾರಾ ಜಿಲ್ಲೆಯ ಸಾಧನೆ
ಆನ್ ಲೈನ್ ಲ್ಲಿ ಮಕ್ಕಳಿಗೆ ಆಸಕ್ತಿದಾಯಕವಾಗಿ ಪಾಠ ಹೇಳಿಕೊಡುವುದು ಹೇಗೆ? ಸುರೇಂದ್ರ ಸಮಗಾರ ಕಂಡುಕೊಂಡ ಐಡಿಯಾ ಇದು!
ಕೊರೊನಾ ಮಣಿಸಿದ 116 ವರ್ಷದ ಮುದುಕಿ: ಮೂರು ವಾರ ಐಸಿಯುನಲ್ಲಿ ಹೋರಾಟ!
ಮೈಸೂರು: ರಾಷ್ಟ್ರ ಪ್ರಶಸ್ತಿ ಪಡೆಯಲು ವಿದ್ಯಾರ್ಥಿನಿಗೆ ಸಹಾಯ ಮಾಡಿದ ಕಲಾ ಶಿಕ್ಷಕಿ!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ


