ಏಳು ದಶಕದ ಹಿಂದೆ ದೇಶದಲ್ಲಿದ್ದ ಮೂರು ಚೀತಾಗಳು ಏನಾದವು? ಕೊಂದದ್ದು ಯಾರು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯ ಪ್ರದೇಶ ಅಭಯಾರಣ್ಯಕ್ಕೆ ಆಫ್ರಿಕಾದಿಂದ ತಂದ 8 ಚೀತಾಗಳನ್ನು ತಂದು ಬಿಡುವ ಮೂಲಕ ಭಾರತದಲ್ಲಿ ಮತ್ತೆ ಚೀತಾ ಸಂತತಿ ಬೆಳವಣಿಗೆಗೆ ನಾಂದಿ ಹಾಡಲಾಗಿದೆ. ಆದರೆ ಈಗ್ಗೆ ಸುಮಾರು 100 ವರ್ಷಗಳ ಹಿಂದೆ ದೇಶದಲ್ಲಿ ಸಾವಿರಾರು ಚೀತಾಗಳು ಜೀವಿಸುತ್ತಿದ್ದವು...
ಭಾರತಕ್ಕೆ ಬಂದ ಆಫ್ರಿಕನ್ ಚೀತಾಗಳು
ಭಾರತಕ್ಕೆ ಬಂದ ಆಫ್ರಿಕನ್ ಚೀತಾಗಳು

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯ ಪ್ರದೇಶ ಅಭಯಾರಣ್ಯಕ್ಕೆ ಆಫ್ರಿಕಾದಿಂದ ತಂದ 8 ಚೀತಾಗಳನ್ನು ತಂದು ಬಿಡುವ ಮೂಲಕ ಭಾರತದಲ್ಲಿ ಮತ್ತೆ ಚೀತಾ ಸಂತತಿ ಬೆಳವಣಿಗೆಗೆ ನಾಂದಿ ಹಾಡಲಾಗಿದೆ. ಆದರೆ ಈಗ್ಗೆ ಸುಮಾರು 100 ವರ್ಷಗಳ ಹಿಂದೆ ದೇಶದಲ್ಲಿ ಸಾವಿರಾರು ಚೀತಾಗಳು ಜೀವಿಸುತ್ತಿದ್ದವು...

ಅಚ್ಚರಿಯಾದರೂ ಸತ್ಯ.. ದೇಶದಲ್ಲಿ 1947ರವರೆಗೂ ಚೀತಾಗಳು ಇದ್ದವು. 1952ರಲ್ಲಿ ನೆಹರೂ ಸರ್ಕಾರ, ಭಾರತದಲ್ಲಿ ಚೀತಾಗಳು ಅಳಿದಿವೆ ಎಂದು ಘೋಷಿಸಿತು. ಆದರೆ ಅಂದು ಅಳಿದು ಹೋಗಿದ್ದ ಚೀತಾಗಳ ಸಂತತಿ ಶತಮಾನದ ಹಿಂದೆ ಸಾವಿರಾರು ಸಂಖ್ಯೆಯಲ್ಲಿತ್ತು ಎಂದರೆ ನಂಬಲಸಾಧ್ಯ.. ಅನೇಕ ಹಿಂದಿನ ಚಿತ್ರಪಟಗಳು ತೋರಿಸುವಂತೆ, ಚೀತಾಗಳನ್ನು ಸಾಕಿ ಪಳಗಿಸಿ ಬೇಟೆಗಾಗಿಯೂ ಬಳಸಿಕೊಳ್ಳಲಾಗುತ್ತಿತ್ತು. ಇವುಗಳನ್ನು ಜಿಂಕೆ ಬೇಟೆಗೆ ಬಳಸಿಕೊಳ್ಳುತ್ತಿದ್ದರು. ದಾಖಲೆಗಳ ಪ್ರಕಾರ, ಭಾರತದಲ್ಲಿ ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಬಿಹಾರದ ಬಯಲುಸೀಮೆಗಳಲ್ಲಿ ಚೀತಾಗಳು ಹೇರಳವಾಗಿದ್ದವು. ಇತಿಹಾಸಜ್ಞರ ಪ್ರಕಾರ, 1556ರಿಂದ 1605 ಆಳಿದ ಮೊಗಲ್‌ ಸುಲ್ತಾನ ಅಕ್ಬರ್‌ನ ಬಳಿ 1000 ಚೀತಾಗಳಿದ್ದವಂತೆ! ಇದನ್ನು ಅವನು ಜಿಂಕೆ ಬೇಟೆಗಾಗಿ ಸಾಕಿದ್ದ.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (BNHS) ಮಾಜಿ ಉಪಾಧ್ಯಕ್ಷ ದಿವ್ಯಭಾನುಸಿನ್ಹ್ ಬರೆದ "ದಿ ಎಂಡ್ ಆಫ್ ಎ ಟ್ರಯಲ್ - ದಿ ಚೀತಾ ಇನ್ ಇಂಡಿಯಾ" ಪುಸ್ತಕದ ಪ್ರಕಾರ, 1556 ರಿಂದ 1605 ರವರೆಗೆ ಆಳಿದ ಮೊಘಲ್ ಚಕ್ರವರ್ತಿ ಅಕ್ಬರ್ 1,000 ಚಿರತೆಗಳನ್ನು ಹೊಂದಿದ್ದ. ಪ್ರಾಣಿಗಳನ್ನು ಕೃಷ್ಣಮೃಗಗಳು ಮತ್ತು ಗಸೆಲ್‌ಗಳನ್ನು ಬೇಟೆಯಾಡಲು ಬಳಸಲಾಗುತ್ತಿತ್ತು. ಅಕ್ಬರನ ಮಗ ಜಹಾಂಗೀರ್ 400 ಕ್ಕೂ ಹೆಚ್ಚು ಹುಲ್ಲೆಗಳನ್ನು ಪಾಲದ ಪರಗಣದಲ್ಲಿ ಚಿರತೆಯ ಮೂಲಕ ಹಿಡಿದಿದ್ದ ಎಂದು ಪುಸ್ತಕಗಲ್ಲಿ ಉಲ್ಲೇಖಿಸಲಾಗಿದೆ.

ಸಾವಿರಾರು ಸಂಖ್ಯೆಯಲ್ಲಿದ್ದ ಚೀತಾಗಳು ಏಕಾಏಕಿ ಕಣ್ಮರೆಯಾಗಿದ್ದು ಏಕೆ.. ದೇಶದಲ್ಲಿ ಕೊನೆಯ ಚೀತಾ ಅಳಿವಾಗಿದ್ದು ಹೇಗೆ..? ಅವುಗಳನ್ನು ಕೊಂದದ್ದು ಯಾರು? ಇಲ್ಲಿದೆ ಕೂತೂಹಲಕಾರಿ ಮಾಹಿತಿ...

ಸಾವಿರಾರು ಸಂಖ್ಯೆಯಲ್ಲಿದ್ದ ಚೀತಾಗಳ ಅಳಿವಿಗೆ ಪ್ರಮುಖ ಕಾರಣ ಬೇಟೆ.. ದೇಶದಲ್ಲಿ ವನ್ಯಜೀವಿ ಸಂಕುಲ ಸಂಪದ್ಭರಿತವಾಗಿತ್ತು. ದೇಶವನ್ನಾಳಿದ ರಾಜಮಹಾರಾಜರು ಹವ್ಯಾಸಕ್ಕಾಗಿ ಬೇಟೆಯಾಡುತ್ತಿದ್ದರು. ಆದರೆ ಬ್ರಿಟೀಷರ ಮೂಲಕ ಬಂದೂಕುಗಳು ದೇಶದೊಳಗೆ ಪ್ರವೇಶ ಮಾಡಿದ ಬಳಿಕ ಬೇಟೆಯ ಚಿತ್ರಣವೇ ಬದಲಾಗಿ ಹೋಯಿತು. ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಮುನ್ನ ಬ್ರಿಟೀಷ್ ಆಡಳಿತ ದೇಶದಲ್ಲಿತ್ತು. ಆಗ ಬ್ರಿಟೀಷ್ ಅಧಿಕಾರಿಗಳ ಸಂತೈಸಲು ದೇಶದ ರಾಜರು, ಅಧಿಕಾರಿಗಳು ಮತ್ತು ಸ್ಥಳೀಯರು ಅವರಿಗೆ ಬೇಟೆಯಾಡಲು ಅವಕಾಶ ನೀಡುತ್ತಿದ್ದರು. ಬಂದೂಕುಗಳ ಪ್ರವೇಶದ ಬಳಿಕ ಬೇಟೆ ಪ್ರಕ್ರಿಯೆ ಕೂಡ ಸಲೀಸಾಯಿತು. ಬ್ರಿಟಿಷ್‌ ದೊರೆಗಳನ್ನು ಸಂತೃಪ್ತಿಪಡಿಸಲೆಂದು ನಮ್ಮ ಮಹಾರಾಜರುಗಳು ಇವರನ್ನು ನಮ್ಮ ಕಾಡುಗಳಿಗೆ ಕರೆದೊಯ್ದು, ಅಲ್ಲಿದ್ದ ಹುಲಿ- ಸಿಂಹ- ಚೀತಾಗಳನ್ನು ತೋರಿಸುತ್ತಿದ್ದರು. ಕೊಂದ ಮೃಗದ ಚರ್ಮ ಅವರ ದಿವಾನಖಾನೆಗಳನ್ನು ಅಲಂಕರಿಸುತ್ತಿತ್ತು. ಆನೆಗಳನ್ನು ದಂತಕ್ಕಾಗಿ, ಹುಲಿಗಳನ್ನು ಚರ್ಮ ಹಾಗೂ ಉಗುರಿಗಾಗಿ, ಚೀತಾಗಳನ್ನು ಚರ್ಮಕ್ಕಾಗಿ ಬೇಟೆಯಾಡಲಾಗುತ್ತಿತ್ತು.

ಬ್ರಿಟಿಷರಿಗೂ ಹಿಂದಿನ ರಾಜಮಹಾರಾಜರು, ಮೊಗಲ್‌ ಸುಲ್ತಾನರು ಕೂಡ ಬೇಟೆಯಲ್ಲಿ ಹಿಂದಿ ಬಿದ್ದಿರಲಿಲ್ಲ. ಬ್ರಿಟಿಷರ ಈ ದುಷ್ಟ ಹವ್ಯಾಸ ನಮ್ಮ ಮಹಾರಾಜರನ್ನೂ ವ್ಯಾಪಕವಾಗಿ ಆವರಿಸಿತು. ಸ್ವಾತಂತ್ರ್ಯಪೂರ್ವದಲ್ಲಿ ಎಗ್ಗಿಲ್ಲದೆ ನಡೆದ ಈ ವನ್ಯದರೋಡೆ ಸ್ವಾತಂತ್ರ್ಯಾನಂತರವೂ ಮುಂದುವರಿಯಿತು. 1972ರಲ್ಲಿ ಇದನ್ನು ತಡೆಯಲು ಭಾರತ ಸರ್ಕಾರ ಕಠಿಣವಾದ ಕಾನೂನು ರೂಪಿಸಿತು. ಅಷ್ಟರಲ್ಲಾಗಲೇ ತಡವಾಗಿತ್ತು.

ದಾಖಲೆಗಳ ಪ್ರಕಾರ, ಭಾರತದ ಕಟ್ಟ ಕಡೆಯ ಚೀತಾಗಳು ಸಾವು ಕಂಡದ್ದು 1947ರಲ್ಲಿ. ಇವುಗಳನ್ನು ಬೇಟೆಯಾಡಿದವರು ಮಧ್ಯಪ್ರದೇಶದ ಕೊರಯಾ ಸಂಸ್ಥಾನದ ಮಹಾರಾಜಾ ರಾಮಾನುಜ ಪ್ರತಾಪ ಸಿಂಗ್‌ ದೇವ್.‌ ಆತ ಒಂದೇ ರಾತ್ರಿಯಲ್ಲಿ ಮೂರು ಚೀತಾಗಳನ್ನು ಹೊಡೆದುರುಳಿಸಿದ್ದ. ಇದರ ಫೋಟೋ ಈಗಲೂ ಲಭ್ಯವಿದೆ. ಇದಾದ ಬಳಿಕ ಭಾರತದಲ್ಲಿ ಎಲ್ಲೂ ಚೀತಾಗಳು ಕಾಣಿಸಿಕೊಂಡಿಲ್ಲ.

ಚೀತಾಗಳ ವಿಶೇಷ ಗುಣವೇ ಅವುಗಳ ಅಳಿವಿಗೆ ಕಾರಣವಾಯಿತೇ?
ಚೀತಾಗಳ ಒಂದು ಗುಣ ಎಂದರೆ ಇವುಗಳಿಗೆ ಬೇಟೆ ಪ್ರಾಣಿಗಳು ಸಾಕಷ್ಟಿದ್ದರೆ, ತಿರುಗಾಡಲು ಮೈಲುಗಟ್ಟಲೆ ಹುಲ್ಲುಗಾವಲು ಇದ್ದರೆ ಮಾತ್ರ ಇವು ಪ್ರಜನನ ಮಾಡುತ್ತವೆ. ನಿರ್ಬಂಧಿತ ಪ್ರದೇಶದಲ್ಲಿ ಇದ್ದರೆ ಇವು ಸಂತಾನೋತ್ಪಾದನೆ ಮಾಡುವುದೇ ಇಲ್ಲ. ಇವುಗಳ ಈ ಗುಣವೂ ಇವುಗಳ ಅಳಿವಿಗೆ ಇನ್ನೊಂದು ಕಾರಣವಾಯಿತು. ಅಲ್ಲದೆ ಬೇಟೆಗಾಗಿ ಚಿರತೆಗಳನ್ನು ಸೆರೆಹಿಡಿಯುವುದು ಮತ್ತು ಸೆರೆಯಲ್ಲಿ ಪ್ರಾಣಿಗಳನ್ನು ಸಾಕಲು ಕಷ್ಟವಾಗುವುದು ಅವುಗಳ ಜನಸಂಖ್ಯೆಯಲ್ಲಿ ಇಳಿಮುಖಕ್ಕೆ ಕಾರಣವಾಯಿತು ಎನ್ನಲಾಗಿದೆ.

20 ನೇ ಶತಮಾನದ ಆರಂಭದ ವೇಳೆಗೆ, ಭಾರತೀಯ ಚಿರತೆ ಜನಸಂಖ್ಯೆಯು ಕೆಲವು ನೂರಕ್ಕೆ ಇಳಿದಿತ್ತು ಮತ್ತು ರಾಜಕುಮಾರರು ಆಫ್ರಿಕಾದಿಂದ ಚೀತಾಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದರು. ದಾಖಲೆಗಳ ಪ್ರಕಾರ 1918 ಮತ್ತು 1945 ರ ನಡುವೆ ಸುಮಾರು 200 ಚೀತಾಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಯಿತು ಎಂದು ಹೇಳಲಾಗಿದೆ.

ಕಠಿಣ ಕಾನೂನು ರಚಿಸಿದ ಭಾರತ ಸರ್ಕಾರ
ಬ್ರಿಟಿಷರ ಆಡಳಿತ ಹಿಂತೆಗೆದುಕೊಳ್ಳುವಿಕೆಯ ನಂತರ ಮತ್ತು ಸ್ವತಂತ್ರ ಭಾರತದೊಂದಿಗೆ ರಾಜಪ್ರಭುತ್ವದ ರಾಜ್ಯಗಳ ಏಕೀಕರಣದ ನಂತರ, ಭಾರತದಲ್ಲಿ ಚಿರತೆ ಬೇಟೆ ಕ್ರೀಡೆಯು ನಾಶವಾಯಿತು. 1952 ರಲ್ಲಿ ಸ್ವತಂತ್ರ ಭಾರತದಲ್ಲಿ ನಡೆದ ಮೊದಲ ವನ್ಯಜೀವಿ ಮಂಡಳಿಯ ಸಭೆಯಲ್ಲಿ, "ಮಧ್ಯ ಭಾರತದಲ್ಲಿ ಚಿರತೆಯ ರಕ್ಷಣೆಗೆ ವಿಶೇಷ ಆದ್ಯತೆ ನೀಡುವಂತೆ" ಸರ್ಕಾರವು ಕರೆ ನೀಡಿತ್ತು ಮತ್ತು "ಚಿರತೆಯನ್ನು ಸಂರಕ್ಷಿಸಲು ದಿಟ್ಟ ಪ್ರಯೋಗ" ವನ್ನು ಸೂಚಿಸಲಾಯಿತು. ಬಳಿಕ, ಏಷ್ಯಾಟಿಕ್ ಸಿಂಹಗಳಿಗೆ ಬದಲಾಗಿ ಏಷ್ಯಾಟಿಕ್ ಚಿರತೆಯನ್ನು ಭಾರತಕ್ಕೆ ತರಲು 1970 ರ ದಶಕದಲ್ಲಿ ಇರಾನ್‌ನ ಶಾ ಅವರೊಂದಿಗೆ ಮಾತುಕತೆಗಳು ಪ್ರಾರಂಭವಾದವು. ಇರಾನ್‌ನ ಸಣ್ಣ ಏಷ್ಯಾಟಿಕ್ ಚಿರತೆ ಮತ್ತು ಇರಾನ್ ಮತ್ತು ಆಫ್ರಿಕನ್ ಚೀತಾಗಳ ನಡುವಿನ ಆನುವಂಶಿಕ ಹೋಲಿಕೆಯನ್ನು ಗಮನದಲ್ಲಿಟ್ಟುಕೊಂಡು, ಎರಡನೆಯದನ್ನು ಭಾರತದಲ್ಲಿ ಪರಿಚಯಿಸಲು ನಿರ್ಧರಿಸಲಾಯಿತು. ಇದಾದ ಬಳಿಕ ಇದೀಗ ಮತ್ತೆ ದೇಶಕ್ಕೆ 8 ಚೀತಾಗಳನ್ನು ಕರೆತರಲಾಗಿದೆ.

ಈ ಹಿಂದೆಯೇ ಅಂದರೆ 2009ರಲ್ಲಿ ದೇಶಕ್ಕೆ ಚಿರತೆಗಳನ್ನು ತರುವ ಪ್ರಯತ್ನಗಳು ನಡೆದಿತ್ತು. ಇದಕ್ಕಾಗಿ 2010ರಿಂದ 2012ರ ನಡುವೆ ಹತ್ತು ಅರಣ್ಯ ಪ್ರದೇಶಗಳನ್ನು ಸಮೀಕ್ಷೆ ಮಾಡಲಾಗಿತ್ತು. ಬಳಿಕ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com