ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ: ವಿಷಕಾರಿ ಪ್ಲಾಸ್ಟಿಕ್ ಅಥವಾ ಸ್ವಚ್ಛ, ಸುಂದರ ಪರಿಸರ ನಿಮ್ಮ ಆಯ್ಕೆ ಯಾವುದು?

ಪ್ಲಾಸ್ಟಿಕ್, ಪ್ಲಾಸ್ಟಿಕ್, ಪ್ಲಾಸ್ಟಿಕ್. ನಗರ ಹಳ್ಳಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್. ಇಂದು ಜಗತ್ತನ್ನು ಆಳುತ್ತಿರುವುದು ಇದೇ ಪ್ಲಾಸ್ಟಿಕ್. ಮಣ್ಣಲ್ಲಿ ಕೊಳೆಯದ, ನೀರಲ್ಲಿ ಕರಗದ, ಗಾಳಿಯಲ್ಲಿ ಲೀನವಾಗದೇ ಭೂಮಿಯ ಮೇಲೆ ರಾಶಿ ರಾಶಿ ಕಸವಾಗಿ, ಮಾಲಿನ್ಯವಾಗಿ ಪರಿಸರವನ್ನು ಹಾಳುಮಾಡುವ ಇದೇ ಪ್ಲಾಸ್ಟಿಕ್ ಇಂದು ನಮ್ಮನ್ನು ಆಳುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪ್ಲಾಸ್ಟಿಕ್, ಪ್ಲಾಸ್ಟಿಕ್, ಪ್ಲಾಸ್ಟಿಕ್. ನಗರ ಹಳ್ಳಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್. ಇಂದು ಜಗತ್ತನ್ನು ಆಳುತ್ತಿರುವುದು ಇದೇ ಪ್ಲಾಸ್ಟಿಕ್. ಮಣ್ಣಲ್ಲಿ ಕೊಳೆಯದ, ನೀರಲ್ಲಿ ಕರಗದ, ಗಾಳಿಯಲ್ಲಿ ಲೀನವಾಗದೇ ಭೂಮಿಯ ಮೇಲೆ ರಾಶಿ ರಾಶಿ ಕಸವಾಗಿ, ಮಾಲಿನ್ಯವಾಗಿ ಪರಿಸರವನ್ನು ಹಾಳುಮಾಡುವ ಇದೇ ಪ್ಲಾಸ್ಟಿಕ್ ಇಂದು ನಮ್ಮನ್ನು ಆಳುತ್ತಿದೆ.

ಜಗತ್ತಿನಲ್ಲಿ ಪ್ರತಿನಿತ್ಯ ಕೋಟ್ಯಾಂತರ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ನಿತ್ಯ ನಾವು ಹೀಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಎಲ್ಲಿ ಸೇರುತ್ತೆ ಗೊತ್ತೇ? ಸಮುದ್ರದ ತಳ, ನದಿ ಸರೋವರಗಳ ಆಳ, ಭುಮಿಯ ಮೇಲ್ಪದರ ಮತ್ತು ಗರ್ಭದಲ್ಲಿ ಕೂತು ಇಡೀ ಪರಿಸರವನ್ನೇ ನಾಶ ಮಾಡುತ್ತದೆ. ಜಲಚರಗಳು, ಪ್ರಾಣಿಪಕ್ಷಿಗಳು ಬಳಸಿ ಬಿಸಾಡಿದ ಪ್ಲಾಸ್ಟಿಕ್ ನುಂಗಿ ಸಾವಿಗೆ ಗುರಿಯಾಗುತ್ತವೆ.

ಇಂದು ಜುಲೈ 3. ಈ ದಿನವನ್ನು ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ ಎಂದು ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ಬಳಕೆಯ ಪ್ರಮಾಣವನ್ನು ತಡೆಯಲು ಅಂತರಾಷ್ಟ್ರೀಯ ಸಮುದಾಯ ಈ ದಿನವನ್ನು ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನಾಗಿ ಆಚರಿಸುತ್ತದೆ.

ವಿಶ್ವದೆಲ್ಲೆಡೆ ಸರ್ಕಾರ ಮತ್ತು ನಾಗರಿಕ ಸಮಾಜ ಪ್ಲಾಸ್ಟಿಕ್ ಮರುಬಳಕೆಯ ಗುರಿಯನ್ನು ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಅನೇಕ ನಿರ್ಣಯಗಳನ್ನು ಅಂಗೀಕರಿಸುತ್ತವೆ.

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು, ನಿರ್ಬಂಧಿಸಲು ಹಲವು ಹೊಸ ಕ್ರಮಗಳನ್ನು ಈ ದಿನದಂದು ಘೋಷಿಸುವುದು ವಾಡಿಕೆ. ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಒಮ್ಮೆ ಬಳಸಿದ ನಂತರ ಮತ್ತೊಮ್ಮೆ ಬಳಸಲು ಸಾಧ್ಯವಾಗುವುದಿಲ್ಲ. ಅವು ವ್ಯರ್ಥವಾಗುತ್ತವೆ.

ರಾಜ್ಯದಲ್ಲಿ 2022 ಜುಲೈ ತಿಂಗಳಿನಲ್ಲಿ ಏಕಬಳಕೆ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಲಾಗಿತ್ತು. ಏಕಬಳಕೆ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಿ ಒಂದು ವರ್ಷಗಳು ಕಳೆದಿವೆ. ಪ್ಲಾಸ್ಟಿಕ್ ಬ್ಯಾಗ್, ಸ್ಟ್ರಾ (ಪೈಪ್), ಕಾಫಿ ಕಪ್​ಗಳು, ಸೋಡಾ, ನೀರಿನ ಬಾಟಲಿ, ಇಯರ್-ಬಡ್‌ಗಳು, ಬಲೂನ್‌ಗಳ ಪ್ಲಾಸ್ಟಿಕ್ ಸ್ಟಿಕ್, ಕ್ಯಾಂಡಿ ಸ್ಟಿಕ್, ಚಾಕು, ಕತ್ತರಿಗಳು, ಪ್ಲೇಟ್ ಗಳು, ಬಾಕ್ಸ್ ಗಳ ಸುತ್ತಲು ಅಂಟಿಸುವ ಟೇಪ್ ಮತ್ತು ಬಹುತೇಕ ಆಹಾರ ಉತ್ಪನ್ನಗಳ ಪ್ಯಾಕೇಜಿಂಗ್​ಗೆ ಬಳಸುವ ಪ್ಲಾಸ್ಟಿಕ್​ಗಳ ಮೇಲೆ ನಿರ್ಬಂಧ ಹೇರಲಾಗಿದೆ. ಆದಾಗ್ಯೂ, ಪಾಲಿಥಿನ್ ಬ್ಯಾಗ್ ಗಳು ಸ್ಥಳೀಯ ಮಾರುಕಟ್ಟೆಗಳಲ್ಲಿ ಮತ್ತು ಶಾಪಿಂಗ್ ಕೇಂದ್ರಗಳಲ್ಲಿ ಇನ್ನೂ ಬಳಕೆಯಲ್ಲಿವೆ. ಇದರಿಂದಾಗಿ ಬೆಂಗಳೂರು ನಗರವೊಂದರಲ್ಲಿಯೇ ನಿತ್ಯ 600 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿರುವುದು ವರದಿಗಳಿಂದ ತಿಳಿದುಬಂದಿದೆ.

ಆಸ್ಟ್ರೇಲಿಯಾ ಮೂಲದ ಮಿಂಡರೂ ಫೌಂಡೇಶನ್‌ನ ವರದಿಯ ಪ್ರಕಾರ, ಏಕ-ಬಳಕೆಯ ಪ್ಲಾಸ್ಟಿಕ್‌ನಿಂದ ಭಾರತದಲ್ಲಿ ಪ್ರತಿ ವ್ಯಕ್ತಿಯಿಂದ 4 ಕೆ.ಜಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ಹೇಳಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಪ್ರಕಾರ, 2022-23 ರವರೆಗೆ, ರಾಜ್ಯದಲ್ಲಿ ವಾರ್ಷಿಕವಾಗಿ 2.96 ಲಕ್ಷ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದೆ.

ಏಕ-ಬಳಕೆಯ ಪ್ಲಾಸ್ಟಿಕ್ ಇನ್ನೂ ಚಲಾವಣೆಯಲ್ಲಿದೆ. ಇವುಗಳ ಬದಲಿಗೆ ಪಾಲಿಪ್ರೊಪಿಲೀನ್ ಚೀಲಗಳ ಬಳಕೆಯನ್ನು ಪರ್ಯಾಯವಾಗಿ ಬಳಕೆ ಮಾಡುವಂತೆ ಮಾಡಬೇಕು. ಈ ಚೀಲಗಳು ಬಟ್ಟೆಯ ಚೀಲಗಳಂತೆ ಕಾಣುತ್ತವೆ. ಪ್ಲಾಸ್ಟಿಕ್ ಬದಲಿಗೆ ಇವುಗಳನ್ನು ಬಳಕೆ ಮಾಡಬಹುದು ಎಂದು ಪರಿಸರವಾದಿಗಳು ಹೇಳಿದ್ದಾರೆ,

ಈ ನಡುವೆ ವಾಸ್ತವಿಕ ಪರಿಸ್ಥಿತಿಯನ್ನು ಬೆಳಕಿಗೆ ತರಲು ಸ್ಥಳೀಯ ಮಳಿಗೆಗಳ ಮಾಲೀಕರೊಂದಿಗೆ ಮಾತನಾಡಿ, ಅಭಿಪ್ರಾಯಗಳನ್ನು ಸಂಗ್ರಹಿಸುವ ಪ್ರಯತ್ನಗಳನ್ನು ಮಾಡಲಾಗಿದೆ.

ದಿನಸಿ ಹಾಗೂ ಉತರೆ ವಸ್ತುಗಳನ್ನು ಖರೀದಿ ಮಾಡಲು ಬಂದಾಗ ಪ್ಲಾಸ್ಟಿಕ್ ಬ್ಯಾಗ್ ಬೇಕೆಂದು ಆಗ್ರಹಿಸುತ್ತಾರೆ. ಪರ್ಯಾಯ ಬ್ಯಾಗ್ ಗಳಿಗೆ ಹೋಲಿಕೆ ಮಾಡಿದರೆ, ಪ್ಲಾಸ್ಟಿಕ್ ಬ್ಯಾಕ್ ಗಳು ಅಗ್ಗವಾಗಿವೆ. ಹೀಗಾಗಿ ಅದೇ ಬೇಕೆಂದು ಬೇಡಿಕೆ ಇಡುತ್ತಾರೆ. ಹಣ್ಣುಗಳು ಹಾಗೂ ತರಕಾರಿಗಳನ್ನು ಕಾಗದ ಬ್ಯಾಗ್ ನಲ್ಲಿ ನೀಡಲು ಪ್ರಯತ್ನಿಸುತ್ತೇವೆ. ಆದರೆ, ತೂಕ ಹೆಚ್ಚಾಗಿದ್ದರೆ, ಅವುಗಳು ಹರಿದು ಹೋಗುತ್ತದೆ ಎಂದು ಬೊಮ್ಮನಹಳ್ಳಿ ಮಾರುಕಟ್ಟೆಯ ತರಕಾರಿ ಮಾರಾಟಗಾರ ಪ್ರತೀಕ್ ಜಿ ಎಂಬುವವರು ಹೇಳಿದ್ದಾರೆ.

ತ್ಯಾಜ್ಯ ನಿರ್ವಹಣಾ ಎನ್‌ಜಿಒ ಸಾಹಸ್‌ನಲ್ಲಿ ಕೆಲಸ ಮಾಡುತ್ತಿರುವ ಕೃತಿಕಾ ವಿಶ್ವನಾಥನ್ ಎಂಬುವವರು ಮಾತನಾಡಿ, ಪ್ಲಾಸ್ಟಿಕ್ ಚೀಲಗಳು ತುಂಬಾ ಕೆಟ್ಟದು. ಅವುಗಳನ್ನು ನೇಯಲಾಗುತ್ತದೆ ಮತ್ತು ಯಂತ್ರಗಳಲ್ಲಿ ಹೊಲಿಯಲಾಗುವುದಿಲ್ಲ ಅಥವಾ ತಯಾರಿಸಲಾಗುವುದಿಲ್ಲ, ಆದ್ದರಿಂದ ಅವುಗಳನ್ನು ಮರುಬಳಕೆ ಮಾಡುವುದು ಅಸಾಧ್ಯ. ಹೀಗಾಗಿ ಪ್ಲಾಸ್ಟಿಕ್ ಚೀಲಗಳ ಉತ್ಪಾದನೆಯನ್ನು ನಿಲ್ಲಿಸಲು ಸರ್ಕಾರ ಮತ್ತು ಉದ್ಯಮದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ ಎಂದು ಹೇಳಿದ್ದಾರೆ.

ಚಿಂದಿ ಆಯುವವರು, ಸ್ಕ್ರ್ಯಾಪ್ ಡೀಲರ್‌ಗಳನ್ನು ಉತ್ತೇಜಿಸುವ ಅಗತ್ಯವಿದ್ದು, ಮರುಬಳಕೆಯ ಬ್ಯಾಗ್ ಗಳ ಉತ್ಪಾದಿಸಲು ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಬೇಕೆ. ಪ್ರಮುಖವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೂ ಕೂಡ ಅತ್ಯಗತ್ಯವಾಗಿದೆ ಮತ್ತೊಬ್ಬ ಕಾರ್ಯಕರ್ತ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com