ನ್ಯೂಜಿಲೆಂಡ್‌ಗೆ ಭರ್ಜರಿ ಜಯ

Updated on: 

ಕಟಕ್: ಡಿವೈನ್ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಸೀ ರಕ್ ಅವರ ಆಕ್ರಮಣಕಾರಿ ಬೌಲಿಂಗ್ ನೆರವಿನಿಂದಾಗಿ ನ್ಯೂಜಿಲೆಂಡ್ ತಂಡ, ಶುಕ್ರವಾರ ನಡೆದ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 151 ರನ್‌ಗಳ ಭರ್ಜರಿ ಜಯ ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಭರ್ಜರಿ 321 ರನ್ ಗಳಿಸಿತು. ಆದರೆ, ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, 41 ಓವರ್‌ಗಳಲ್ಲಿ 170 ರನ್‌ಗಳಿಗೆ ಆಲೌಟ್ ಆಯಿತು.
ಡಿವೈನ್ ಬ್ಯಾಟಿಂಗ್: ಟಾಸ್ ಗೆದ್ದಿದ್ದ ದಕ್ಷಿಣ ಆಫ್ರಿಕಾ ಮೊದಲು ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ಆದರೆ, ತಂಡದ ಮೊತ್ತ ಕೇವಲ 16 ರನ್ ಆಗಿದ್ದಾಗಲೇ ಆರಂಭಿಕ ಆಟಗಾರ್ತಿ ಡೂಲನ್ ಅವರನ್ನು ನ್ಯೂಜಿಲೆಂಡ್ ಕಳೆದುಕೊಂಡಿತು. ಆದರೆ, ಸೋಫಿಯಾ ಡಿವೈನ್ ಅವರ 145 ರನ್ ಹಾಗೂ ಅವರಿಗೆ ಬೆಂಬಲವಾಗಿ ನಿಂತ ಮೆಕ್‌ಗ್ಲಾಶನಾನ್ ಹಾಗೂ ಬ್ರೌನಿ ಅವರ ಉತ್ತಮ ಸಾಥ್‌ನಿಂದಾಗಿ ನ್ಯೂಜಿಲೆಂಡ್, 321 ರನ್‌ಗಳ ಭರ್ಜರಿ ಮೊತ್ತ ಪೇರಿಸಿತು.
ಈ ಭಾರೀ ಮೊತ್ತವನ್ನು ಬೆನ್ನಟ್ಟಲು ಬಂದ ದಕ್ಷಿಣ ಆಫ್ರಿಕಾ, 2 ರನ್ ಮೊತ್ತಕ್ಕೇ ಆರಂಭಿಕ ಆಟಗಾರ್ತಿ ಕಾರ್ಡೆಸ್ ಅವರ ವಿಕೆಟ್ ಕಳೆದುಕೊಂಡಿತು. ನಂತರ, ನಿಗದಿತ ಅಂತರದಲ್ಲಿ ಮತ್ತೊಬ್ಬ ಆರಂಭಿಕ ಆಟಗಾರ್ತಿ ಪೊಟ್ಜೀಟರ್, ಮಾರಿಜಾನೆ ಕಪ್ಪ್ ಅವರನ್ನೂ ಬೇಗನೇ ಕಳೆದುಕೊಂಡಿತು.
ಆದರೆ, ಡು ಪ್ರೆಜ್, ಬ್ರೆಟ್ಸ್, ಬೆನಾಡೆ ಹಾಗೂ ಇಸ್ಮಾಯಿಲ್ ಅವರು ತಕ್ಕಮಟ್ಟಿಗೆ ಹೋರಾಟ ತೋರಿದರಾದರೂ, ತಂಡವನ್ನು ಗೆಲುವಿನ ಹಾದಿ ತರಲು ಅವರಿಂದ ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 321/5 (50 ಓವರ್)
ಡಿವೈನ್ 145 (131), ಬೇಟ್ಸ್ 73 (91)
ಬೌಲಿಂಗ್: ಇಸ್ಮಾಯಿಲ್ 40/1, ಕಪ್ಪ್ 39/1
ದಕ್ಷಿಣ ಆಫ್ರಿಕಾ: 170/ 10 (41 ಓವರ್)
ಬೆನಾಡೆ 37 (45), ಇಸ್ಮಾಯಿಲ್ 31 (38)
ಬೌಲಿಂಗ್: ರುಕ್ 31/4, ತಹೌಹು 27/2
ಪಂದ್ಯ ಶ್ರೇಷ್ಠ: ಡಿವೈನ್ (ನ್ಯೂಜಿಲೆಂಡ್)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com