ವಿಜಯ ಬ್ಯಾಂಕ್‌ಗೆ ಸೋಲಿನ ಕಹಿ

Updated on: 

ಬೆಂಗಳೂರು: ಕರ್ನಾಟಕದ ವಿಜಯ ಬ್ಯಾಂಕ್ ತಂಡ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ನಡೆದ ಎರಡೂ ಪಂದ್ಯಗಳಲ್ಲಿ ಕೈಚೆಲ್ಲಿದೆ.ಪಂಜಾಬ್ ಪೊಲೀಸ್ ತಂಡದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 72-61 ಅಂಕಗಳಿಂದ ಮೊದಲ ಪಂದ್ಯದಲ್ಲಿ ಕೈಚೆಲ್ಲಿದ ವಿಜಯ ಬ್ಯಾಂಕ್, ಸಂಜೆ ನಡೆದ ಎರಡನೇ ಪಂದ್ಯದಲ್ಲಿ ಕ್ಯಾಪ್ಟನ್ ಕ್ಲಬ್ ಡೆಲ್ಲಿ ತಂಡದ ವಿರುದ್ಧ 82-72 ಅಂಕಗಳಿಂದ ಪರಾಭವಗೊಂಡಿತು.ಐಎಎಫ್ ತಂಡ ಸಹ ತನ್ನ ಜಯದ ಹಾದಿಯನ್ನು ಮುಂದುವರಿಸಿದೆ. ಐಎಎಫ್ ಶುಕ್ರವಾರ ಸೆಂಟ್ರಲ್ ಎಕ್ಸ್‌ಸೈಜ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 92-82 ಅಂಕಗಳಿಂದ ಜಯ ಸಾಧಿಸಿತು.ಸಂಜೆ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಸೌಥ್ ಸೆಂಟ್ರಲ್ ರೇಲ್ವೆ ತಂಡ ಹರ್ಯಾಣ ತಂಡವನ್ನು 87-72ಅಂಕಗಳಿಂದ ಪರಾಭವಗೊಳಿಸಿತು.ಇನ್ನು ಮಹಿಳೆಯರ ವಿಭಾಗದಲ್ಲಿ ನಡೆದ ದಿನದ ಮೊದಲ ಪಂದ್ಯದಲ್ಲಿ ಕೇರಳ ತಂಡ ಡೆಲ್ಲಿ ವಿರುದ್ಧ 66-42 ಅಂಕಗಳಿಂದ ಜಯ ಸಾಧಿಸಿತು. ಬೆಳಗ್ಗೆ ನಡೆದ ಪಂದ್ಯದಲ್ಲಿ ಸೌಥ್ ಈಸ್ಟ್ ಸೆಂಟ್ರಲ್ ರೇಲ್ವೆ ತಂಡ ಕರ್ನಾಟಕ ವನಿತೆಯರ ತಂಡವನ್ನು 73-55 ಅಂಕಗಳಿಂದ ಪರಾಭವಗೊಳಿಸಿತು. ಸಂಜೆ ನಡೆದ ಪಂದ್ಯದಲ್ಲಿ ಅದೇ ಸೌಥ್ ಈಸ್ಟ್ ಸೆಂಟ್ರಲ್ ರೇಲ್ವೆ ತಂಡ ಡೆಲ್ಲಿಯನ್ನು 64-38 ಅಂಕಗಳಿಂದ ಸೋಲಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com