ವಿಶ್ವನಾಥನ್ ಆನಂದ್ಗೆ ಋತುವಿನ ಮೊದಲ ಪ್ರಶಸ್ತಿ
ಬಡೆನ್ ಬಡೆನ್ (ಜರ್ಮನಿ): ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಸೋಮವಾರ ಋತುವಿನ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡರು. ಜರ್ಮನಿಯಲ್ಲಿ ನಡೆದ ಗ್ರೆಂಕೆ ಚೆಸ್ ಕ್ಲಾಸಿಕ್ ಟ್ರೋಫಿ ಪಡೆಯುವ ಮೂಲಕ ಅವರು ಈ ಸಾಧನೆ ಮಾಡಿದರು.
ಕೊನೆಯ ಸುತ್ತಿನಲ್ಲಿ ಜರ್ಮನಿಯ ಅರ್ಕಾದಿಜ್ ನೈಡಿಶ್ ವಿರುದ್ಧ ರೋಚಕ ಜಯ ಸಾಧಿಸಿದ್ದು, ಆನಂದ್ ಅವರಿಗೆ ಪ್ರಶಸ್ತಿ ಒಲಿಯಲು ನೆರವಾಯಿತು. ಇನ್ನೊಂದು ಪಂದ್ಯದಲ್ಲಿ ಇಟಲಿಯ ಫ್ಯಾಬಿಯಾನೋ ಕರುನಾ ಅವರು ಜರ್ಮನಿಯ ಡ್ಯಾನಿಯಲ್ ಫ್ರಿಡ್ಮ್ಯಾನ್ ಅವರೊಂದಿಗೆ ಡ್ರಾ ಸಾಧಿಸಿದ್ದು, ಆನಂದ್ ಪ್ರಶಸ್ತಿ ಹಾದಿಯನ್ನು ಇನ್ನಷ್ಟು ಸುಗಮಗೊಳಿಸಿತು.
'2011ರ ಬಿಲ್ಬಾವೋ ಪಂದ್ಯಾವಳಿ ನಂತರ ನಾನು ಅವಕಾಶ ಹೊಂದಿದ್ದರೂ, ಉತ್ತಮ ಸ್ಥಾನ ಪಡೆಯುವಲ್ಲಿ ವಿಫಲವಾಗುತ್ತಿದ್ದೆ. ಈ ವರ್ಷ ಅವಕಾಶಗಳು ದೊರೆತರು ಕೈಚೆಲ್ಲುವುದು ಹೊಸ ಸಮಸ್ಯೆಯಾಗಿತ್ತು. ಆದರೆ, ಈ ಪ್ರಶಸ್ತಿ ಗೆದ್ದಿರುವುದು ಸಮಾಧಾನ ತಂದಿದೆ' ಎಂದು ಪಂದ್ಯಾವಳಿ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆನಂದ್ ಹೇಳಿದರು.
ಪಂದ್ಯಾವಳಿಯ ಕೊನೆಯ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ನ ಮೈಕೆಲ್ ಆ್ಯಡಮ್ಸ್ ಮತ್ತು ಜರ್ಮನಿಯ ಜಾರ್ಜ್ ಮೀಯರ್ ನಡುವೆ ನಡೆದ ಪಂದ್ಯ ಸಹ ಡ್ರಾದಲ್ಲಿ ಅಂತ್ಯಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

