ಹಿಮಾಚಲಪ್ರದೇಶಕ್ಕೆ ಜಯ ತಂದ ರಾಹುಲ್
ನದೌನ್: ರಾಹುಲ್ ಶರ್ಮಾ ಅವರ ಉತ್ತಮ ಬೌಲಿಂಗ್ ನೆರವಿನಿಂದ ಹಿಮಾಚಲ ಪ್ರದೇಶ ತಂಡ, ಮಂಗಳವಾರ ನಡೆದ ವಿಜಯ್ ಹಜಾರೆ ಪಂದ್ಯದಲ್ಲಿ ಜಮ್ಮ ಕಾಶ್ಮೀರ ತಂಡವನ್ನು 73 ರನ್ಗಳಿಂದ ಪರಾಭವಗೊಳಿಸಿತು.
ಮೊದಲು ಬ್ಯಾಟ್ ಮಾಡಿದ ಹಿಮಾಚಲ ಪ್ರದೇಶ, ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಜಮ್ಮ ಕಾಶ್ಮೀರ ತಂಡ 42 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನೂ ಕಳೆದುಕೊಂಡು 175 ರನ್ ಮಾತ್ರ ಗಳಿಸಿತು.
ಟಾಸ್ ಗೆದ್ದಿದ್ದ ಜಮ್ಮು ಕಾಶ್ಮೀರ, ಮೊದಲು ಹಿಮಾಚಲ ಪ್ರದೇಶ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಆರಂಭಿಕರಾದ ಆಕಾಶ್ ಚೋಪ್ರಾ ಹಾಗೂ ಪ್ರಶಾಂತ್ ಚೋಪ್ರಾ ಇಬ್ಬರೂ, ಮೊದಲ ವಿಕೆಟ್ಗೆ 59 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಆನಂತರ, ಮೂರನೇ ಕ್ರಮಾಂಕದ ಡೋಗ್ರಾ ಅವರೂ 34 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು.
ಹಿಮಾಚಲ ಪ್ರದೇಶ ಪೇರಿಸಿದ್ದ ಮೊತ್ತವನ್ನು ಬೆನ್ನಟ್ಟಿದ ಜಮ್ಮು ಕಾಶ್ಮೀರ, ತಂಡದ ಮೊತ್ತ ಕೇವಲ 3 ರನ್ ಆಗಿದ್ದಾಗಲೇ ಆರಂಭಿಕ ಖಜಾರಿಯಾ ಅವರನ್ನು ಕಳೆದುಕೊಂಡಿತು. ಆನಂತರ, ಮತ್ತೊಬ್ಬ ಆರಂಭಿಕ ಬಾಂಡಿ ಹಾಗೂ ಇಯಾನ್ ದೇವ್ ಸಿಂಗ್ ಇಬ್ಬರೂ 2ನೇ ವಿಕೆಟ್ಗೆ 52 ರನ್ ಸೇರಿಸಿದರು.
ಆದರೆ, ಇವರಿಬ್ಬರ ವಿಕೆಟ್ ಪತನಗೊಂಡ ಮೇಲೆ ನಿಗದಿತ ಅಂತರದಲ್ಲಿ ಜಮ್ಮು ಕಾಶ್ಮೀರ ವಿಕೆಟ್ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಅಂತಿಮವಾಗಿ, 175 ರನ್ಗಳಿಗೆ ಜಮ್ಮು ಕಾಶ್ಮೀರ ಆಲೌಟ್ ಆಯಿತು.
ಹಿಮಾಚಲ ಪ್ರದೇಶ ಪರವಾಗಿ, ರಾಹುಲ್ ಶರ್ಮಾ ನಾಲ್ಕು ವಿಕೆಟ್ ಪಡೆದು, ಜಮ್ಮು ಕಾಶ್ಮೀರ ತಂಡದ ಪತನದಲ್ಲಿ ಪ್ರಮುಖ ಪಾತ್ರವಹಿಸಿದರು.
ಸಂಕ್ಷಿಪ್ತ ಸ್ಕೋರ್
ಹಿಮಾಚಲ ಪ್ರದೇಶ: 248/9 (50 ಓವರ್)
ಆಕಾಶ್ ಚೋಪ್ರಾ 72 (103), ರಿಶಿ ಧವನ್ 34 (49)
ಬೌಲಿಂಗ್: ಸೋಫಿ 62/4, ದಯಾಳ್ 41/3
ಜಮ್ಮು ಕಾಶ್ಮೀರ: 175 (42 ಓವರ್)
ರಾಹುಲ್ ಸಿಂಗ್ 37/4, ಧೃವ್ ಸಿಂಗ್ 14/2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

