ಫುಟ್ಬಾಲ್ ಆಟಗಾರ ಕೆ.ಜೈರಾಜ್ ನಿಧನ
ಬೆಂಗಳೂರು: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಆಡಳಿತ ಮಂಡಳಿ ಸದಸ್ಯರು ಹಾಗೂ ಮಾಜಿ ಫುಟ್ಬಾಲ್ ಆಟಗಾರ ಕೆ. ಜೈರಾಜ್ ಅವರು ಬುಧವಾರ ಬೆಳಗ್ಗೆ ನಗರದ ಸಂತ ಫಿಲೋಮಿನಸ್ ಆಸ್ಪತ್ರೆಯಲ್ಲಿ ನಿಧನರಾದರು. 74 ವರ್ಷದ ಅವರು ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗಿದ್ದು, ಕಳೆದ 10 ದಿನಗಳ ಹಿಂದೆ ಆಸ್ಪತ್ರೆ ಸೇರಿದ್ದರು. ಆರಂಭದಲ್ಲಿ ಸ್ಪಿರಿಟೆಡ್ ಯುಆರ್ ಫುಟ್ಬಾಲ್ ಕ್ಲಬ್ ಪರ ಆಡಿದ ಇವರು, ನಂತರ ತಮಿಳುನಾಡಿನ ಆಸ್ಬೆಸ್ಟೊಸ್ ಪರ ಆಡಿದರು. 1962 ನಂತರ ಬಿಇಎಲ್ ಸೇರಿದರು. ಕೇರಳದಲ್ಲಿ ಸೈತ್ ನಾಗ್ ಚಿ ಟ್ರೋಫಿ, ವಿಠಲ್ ಟ್ರೋಫಿ, ಮ ಮ್ಯಾನ್ ಪಿಳೈ ಟ್ರೋಫಿ ಕೊಟ್ಯಮ್ನಲ್ಲಿ ಭಾಗವಹಿಸಿದ್ದರು. 1960ರ ದಶಕದಲ್ಲಿ ಮೈಸೂರು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಪ್ರಸ್ತುತ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಆಜೀವ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿದ್ದರು.
ಜೈರಾಜ್ ಅವರು ತಮ್ಮ ಪತ್ನಿ ದಮಂತಿ, 2 ಪುತ್ರಿಯರು, 1 ಮಗನನ್ನು ಅಗಲಿದ್ದಾರೆ. ಇವರ ಅನಿರೀಕ್ಷಿತ ನಿಧನಕ್ಕೆ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಹಾಗೂ ಬಿಡಿಎಫ್ಎ ತಮ್ಮ ಸಂತಾಪ ಸೂಚಿಸಿದೆ.
ಲಕ್ಷ್ಮಣ್ರಾವ್ ನಿಧನ
ಬೆಂಗಳೂರು: ಇನ್ನೊಬ್ಬ ಹಿರಿಯ ಫುಟ್ಬಾಲ್ ಆಟಗಾರ ಹಾಗೂ ಜ್ಯೂಪಿಟರ್ ಫುಟ್ಬಾಲ್ ಕ್ಲಬ್ನ ಮಾಜಿ ಅಧ್ಯಕ್ಷ ಲಕ್ಷ್ಮಣ್ ರಾವ್ ಗೋಡ್ಕೆಯವರು ಬುಧವಾರ ಬೆಳಗ್ಗೆ 7 ಗಂಟೆಗೆ ವಿಧಿವಶರಾಗಿದ್ದಾರೆ. 82 ವರ್ಷದ ಲಕ್ಷ್ಮಣ್ ರಾವ್ ಅವರು ಫುಟ್ಬಾಲ್ ಕ್ರೀಡೆಗೆ ಅಪಾರ ಸೇವೆ ಸಲ್ಲಿಸಿದ್ದಾರೆ. 1950ರಲ್ಲಿ ಫುಟ್ಬಾಲ್ ಆಡಲು ಆರಂಭಿಸಿದ ಲಕ್ಷ್ಮಣ್ ರಾವ್ ಅವರು ಜ್ಯೂಪಿಟರ್ ಫುಟ್ಬಾಲ್ ಕ್ಲಬ್ ಪರವಾಗಿ ಆಡುತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

