ಕ್ರೀಡೆ

ಐಒಸಿ ನಿರ್ಧಾರಕ್ಕೆ ಐಒಎ ಅಧ್ಯಕ್ಷ ಅಸಮಾಧಾನ

Published On :

ಅಥೆನ್ಸ್: 2020ರ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಕುಸ್ತಿಯನ್ನು ಕೈಬಿಟ್ಟಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ (ಐಒಸಿ) ನಿರ್ಧಾರವನ್ನು ಒಪ್ಪದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಅಕಾಡೆಮಿ (ಐಒಎ), ಒಲಂಪಿಕ್ಸ್‌ನ ಐತಿಹಾಸಿಕ ಹಾದಿಯನ್ನು ಗೌರವಿಸಿ 2020ರ ಒಲಿಂಪಿಕ್ಸ್‌ನಿಂದ ಕುಸ್ತಿಯನ್ನು ಕೈಬಿಡಬಾರದು ಎಂದು ಐಒಎ ಅಧ್ಯಕ್ಷ ಐಸಿಡೊರೊಸ್ ಕೌವೆಲೊಸ್ ತಿಳಿಸಿದ್ದಾರೆ. ಕುಸ್ತಿಯು ಒಲಿಂಪಿಕ್ಸ್‌ನಿಂದ ಬೇರ್ಪಡಿಸಲಾಗದ ಕ್ರೀಡೆಯಾಗಿದ್ದು, ಐತಿಹಾಸಿಕ ಕುಸ್ತಿ ಇಲ್ಲದ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಉಹಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಐತಿಹಾಸಿಕ ಕ್ರೀಡೆಗಳನ್ನು ನಾವು ಗೌರವಿಸದಿದ್ದರೆ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭವಿಷ್ಯವಿಲ್ಲ ಎಂದು ಕೌವೆಲೊಸ್ ಐಒಸಿ ಅಧ್ಯಕ್ಷ ಜಾಕಸ್ ರೊಗ್ಗ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಹಲವಾರು ಶತಮಾನಗಳಿಂದ ಬದಲಾಗದೇ ಸಾಗುತ್ತಾ ಬಂದಿರುವ ಒಲಿಂಪಿಕ್ಸ್‌ನ ಇತಿಹಾಸದ ಸೂಕ್ಷ್ಮತೆ ಬಗ್ಗೆ ಅರಿತುಕೊಳ್ಳಬೇಕು. ಐಒಸಿಯು ತನ್ನ ಈ ನಿರ್ಧಾರದ ಬಗ್ಗೆ ವಿಶ್ವದಾದ್ಯಂತ ವ್ಯಕ್ತವಾಗಿರುವ ಅಭಿಪ್ರಾಯವನ್ನು ಪರಿಗಣಿಸಿ, ತನ್ನ ತಪ್ಪನ್ನು ಪರಿಶೀಲಿಸಲಿದೆ ಎಂಬ ಭರವಸೆ ಇದೆ ಎಂದು ಕೌವೆಲೊಸ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.